AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಐಫೋನ್ ಹೆಸರಲ್ಲಿಆಂಡ್ರಾಯ್ಡ್ ಫೋನ್ ನೀಡಿ 60 ಸಾವಿರ ವಂಚನೆ ಆರೋಪ

ಮೋಸ ಮಾಡಿದ ಕುರಿತು ಎಷ್ಟೇ ಪ್ರಕರಣಗಳು ಬೆಳಕಿಗೆ ಬಂದರೂ ನಮ್ಮ ಜನ ಎಚ್ಚೆತ್ತುಕೊಳ್ಳವಂತೆ ಕಾಣುತ್ತಿಲ್ಲ, ವಂಚನೆ ಕೇಸ್​ಗಳ ಕುರಿತು ಪೊಲೀಸರು ಎಚ್ಚರಿಕೆ ನೀಡುತ್ತಿದ್ದರೂ ಕ್ಯಾರೆ ಎನ್ನುತ್ತಿಲ್ಲ. ಇದರಿಂದ ತಮಿಳುನಾಡಿನ ವಿದ್ಯಾರ್ಥಿಯೊಬ್ಬ ಬೆಂಗಳೂರಿನಲ್ಲಿ ಐಫೋನ್ ಆಸೆಗೆ ಬಿದ್ದು ಬರೊಬ್ಬರಿ 60 ಸಾವಿರ ರೂಪಾಯಿಯನ್ನು ಕಳೆದುಕೊಂಡಿದ್ದಾನೆ.

ಬೆಂಗಳೂರು: ಐಫೋನ್ ಹೆಸರಲ್ಲಿಆಂಡ್ರಾಯ್ಡ್ ಫೋನ್ ನೀಡಿ 60 ಸಾವಿರ ವಂಚನೆ ಆರೋಪ
ಐಫೋನ್ ಆಸೆಗೆ 60 ಸಾವಿರ ರೂ. ಕಳೆದುಕೊಂಡ ವಿದ್ಯಾರ್ಥಿ
Jagadisha B
| Edited By: |

Updated on:Feb 15, 2024 | 4:35 PM

Share

ಬೆಂಗಳೂರು, ಫೆ.15: ತಮಿಳುನಾಡಿನ ವಿದ್ಯಾರ್ಥಿ(Student)ಗೆ ಬೆಂಗಳೂರಿನಲ್ಲಿ ಐಫೋನ್ ಹೆಸರಲ್ಲಿ ಆಂಡ್ರಾಯ್ಡ್ ಫೋನ್ ನೀಡಿ 60 ಸಾವಿರ ವಂಚಿಸಿದ(Fraud) ಆರೋಪ ಕೇಳಿಬಂದಿದೆ. ಕಳೆದ ಜ.28 ರಂದು ಚರ್ಚ್ ಸ್ಟ್ರೀಟ್‌ ರಸ್ತೆಯಲ್ಲಿ ಸ್ನೇಹಿತರೊಂದಿಗೆ ಸುತ್ತಾಡಲು ಬಂದಾಗ ದಾರಿಯಲ್ಲಿ ಸಿಕ್ಕ ವಿದ್ಯಾರ್ಥಿ ಜೊತೆ ತನ್ನನ್ನು ಮಹಮ್ಮದ್ ಅಪ್ತಾಬ್ ಎಂದು ಪರಿಚಯ ಮಾಡಿಕೊಂಡಿದ್ದ ಅಪರಿಚಿತ. ತನ್ನ ಬಳಿ ಐಫೋನ್ 15 ಪ್ರೊ ಮ್ಯಾಕ್ಸ್ ಇದೆ. ಅದನ್ನು ಕಡಿಮೆ ಬೆಲೆಗೆ ಕೊಡುತ್ತೇನೆ ಎಂದು ದುಂಬಾಲು ಬಿದ್ದಿದ್ದನಂತೆ. ಇದೀಗ ಅಪರಿಚಿತ ವ್ಯಕ್ತಿಯ ಮಾತು ನಂಬಿದ ವಿದ್ಯಾರ್ಥಿ, ಬರೊಬ್ಬರಿ 60 ಸಾವಿರ ರೂ. ಕಳೆದುಕೊಂಡಿದ್ದಾನೆ.

ರೆಸ್ಟೋರೆಂಟ್​ನಲ್ಲಿ‌ ಕೂತು ಡೀಲ್​ಗೆ ಇಳಿದ ವಿದ್ಯಾರ್ಥಿ

ಅಫ್ತಾಬ್ ಮಾತು ನಂಬಿ ರೆಸ್ಟೋರೆಂಟ್​ನಲ್ಲಿ‌ ಕೂತು ಡೀಲ್​ಗೆ ಇಳಿದ ವಿದ್ಯಾರ್ಥಿ, ಆತ ತೋರಿಸಿದ್ಸ ಮೊಬೈಲ್ ಒರಿಜಿನಲ್ ಐ ಫೋನ್ ಆಗಿದ್ದು. ಹೀಗಾಗಿ 60 ಸಾವಿರಕ್ಕೆ ಐ ಫೋನ್ ಡೀಲ್ ಕುದುರಿ ಗೂಗಲ್ ಪೇ ಮಾಡಿದ್ದನಂತೆ. ಹಣ ಬಂದ ಬಳಿಕ ತನ್ನ ಬ್ಯಾಗ್​ನಲ್ಲಿದ್ದ ಹೊಸ ಐಫೋನ್ ಬಾಕ್ಸ್ ಪೀಸ್ ತೆಗೆದುಕೊಟ್ಟಿದ್ದ. ಆದರೆ, ಬಾಕ್ಸ್ ಪೀಸ್ ಓಪನ್ ಮಾಡಿದಾಗ ಅಲ್ಲಿದ್ದ ಫೋನ್ ಐಫೋನ್ ರೀತಿ ಇದ್ದರೂ ಆಂಡ್ರಾಯ್ಡ್ ಫೋನ್ ಆಗಿತ್ತು. ಆ ಫೋನ್ ಚೆಕ್ ಮಾಡುತ್ತಿದ್ದಂತೆ ಮೊಹಮ್ಮದ್ ಅಫ್ತಾಬ್ ಎಸ್ಕೇಪ್ ಆಗಿದ್ದಾನೆ. ಕಂಗಾಲಾದ ವಿದ್ಯಾರ್ಥಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಸಧ್ಯ ವಂಚನೆ ಬಗ್ಗೆ ಎಫ್​ಐಆರ್​ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ:ಚಿತ್ರದುರ್ಗ: ಹಣ ಡಬಲ್​ ಮಾಡಿಕೊಡುವುದಾಗಿ ನಂಬಿಸಿ ನೂರಾರು ಜನರಿಂದ 4.79 ಕೋಟಿ ವಂಚನೆ

ನಡುರಸ್ತೆಯಲ್ಲೇ ಹೊಡೆದಾಡಿಕೊಂಡ ವಾಹನ ಚಾಲಕರು

ಬಾಗಲಕೋಟೆ: ನಗರದ ದಡ್ಡೆನ್ನವರ್​​ ಕ್ರಾಸ್​​​ಬಳಿ, ಗಾಡಿ ಓವರ್​​ ಟೇಕ್​​ ಮಾಡುವ ವಿಚಾರದಲ್ಲಿ ನಡು ರಸ್ತೆಯಲ್ಲಿಯೇ ಕೆಎಸ್​​ಆರ್​​ಟಿಸಿ ಬಸ್​​ ಚಾಲಕ ಮತ್ತು ಟಂಟಂ ವಾಹನದ ಚಾಲಕ ಅವಾಚ್ಯ ಶಬ್ದಗಳಿಂದ ಬೈದು, ಹೊಡೆದಾಡಿಕೊಂಡ ಘಟನೆ ನಡೆದಿದೆ. ಈ ಹಿನ್ನಲೆ ಸ್ಥಳದಲ್ಲಿ ಕೆಲಕಾಲ ಟ್ರಾಫಿಕ್​​ ಜಾಮ್​​ ಉಂಟಾಗಿದೆ. ಈ ಘಟನೆ ಬಾಗಲಕೋಟೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳೀಯರ ಮಧ್ಯಸ್ಥಿಕೆಯಿಂದ ಜಗಳ ತಣ್ಣಗಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:30 pm, Thu, 15 February 24