ಬೆಂಗಳೂರಿನಲ್ಲಿ 700 ಕಾಶ್ಮೀರಿ ಪಂಡಿತರ ಕುಟುಂಬಗಳಿಗೆ ಉಚಿತ ನಿವಾಸ ಪ್ರಮಾಣಪತ್ರ ವಿತರಣೆ

| Updated By: ಸುಷ್ಮಾ ಚಕ್ರೆ

Updated on: Mar 18, 2022 | 1:23 PM

ಕಾಶ್ಮೀರಿ ಹಿಂದೂ ಕಲ್ಚರಲ್ ವೆಲ್​ಫೇರ್ ಟ್ರಸ್ಟ್ ಮನವಿಯ ಮೇರೆಗೆ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಕಳುಹಿಸಿದ ತಂಡವು ಬೆಂಗಳೂರಿನಲ್ಲಿರುವ ಕಾಶ್ಮೀರಿ ಪಂಡಿತರ ಕುಟುಂಬಗಳಿಗೆ ಉಚಿತ ನಿವಾಸ ಪ್ರಮಾಣಪತ್ರಗಳನ್ನು ಒದಗಿಸಲು ಶಿಬಿರವನ್ನು ನಡೆಸುತ್ತಿದೆ.

ಬೆಂಗಳೂರಿನಲ್ಲಿ 700 ಕಾಶ್ಮೀರಿ ಪಂಡಿತರ ಕುಟುಂಬಗಳಿಗೆ ಉಚಿತ ನಿವಾಸ ಪ್ರಮಾಣಪತ್ರ ವಿತರಣೆ
ಬೆಂಗಳೂರಿನ ಜಯನಗರದಲ್ಲಿ ಜಮ್ಮು ಕಾಶ್ಮೀರ ಸರ್ಕಾರದಿಂದ ಕ್ಯಾಂಪ್
Follow us on

ಬೆಂಗಳೂರು: ಕಾಶ್ಮೀರದ ಪಂಡಿತರ ದುರಂತ ಕತೆಯನ್ನು ತೆರೆದಿರುವ ಕಾಶ್ಮೀರ್ ಫೈಲ್ಸ್​ (The Kashmir Files) ಸಿನಿಮಾಗೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಈ ಸಿನಿಮಾದ ಬಗ್ಗೆ ಪರ-ವಿರೋಧದ ಚರ್ಚೆಗಳೂ ಆರಂಭವಾಗಿವೆ. ಇದರ ಬೆನ್ನಲ್ಲೇ ಬೆಂಗಳೂರಿನ ಜಯನಗರದಲ್ಲಿರುವ ಕಾಶ್ಮೀರ ಭವನದಲ್ಲಿ ನಡೆದ ಶಿಬಿರದಲ್ಲಿ 700 ವಲಸಿಗ ಕಾಶ್ಮೀರಿ ಪಂಡಿತರಿಗೆ ವಾಸಸ್ಥಳ ಪ್ರಮಾಣಪತ್ರ (Domicile Certificate) ನೀಡಲಾಗಿದೆ. ಜಮ್ಮು ಕಾಶ್ಮೀರ ಸರ್ಕಾರ (Jammu Kashmir Government) ಆಯೋಜಿಸಿದ್ದ ಕ್ಯಾಂಪ್​ನಲ್ಲಿ ಕಾಶ್ಮೀರಿ ಪಂಡಿತರ ಕುಟುಂಬಗಳಿಗೆ ಉಚಿತವಾಗಿ ವಾಸಸ್ಥಳ ಪ್ರಮಾಣಪತ್ರ ನೀಡಿದೆ.

ಕಾಶ್ಮೀರಿ ಹಿಂದೂ ಕಲ್ಚರಲ್ ವೆಲ್​ಫೇರ್ ಟ್ರಸ್ಟ್ (ಕೆಎಚ್‌ಸಿಡಬ್ಲ್ಯೂಟಿ) ಮನವಿಯ ಮೇರೆಗೆ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಕಳುಹಿಸಿದ ತಂಡವು ಬೆಂಗಳೂರಿನಲ್ಲಿರುವ ಕಾಶ್ಮೀರಿ ಪಂಡಿತರ ಕುಟುಂಬಗಳಿಗೆ ಉಚಿತ ನಿವಾಸ ಪ್ರಮಾಣಪತ್ರಗಳನ್ನು ಒದಗಿಸಲು ಶಿಬಿರವನ್ನು ನಡೆಸುತ್ತಿದೆ. ಈ ಶಿಬಿರವು ಮಾರ್ಚ್ 9ರಂದು ಪ್ರಾರಂಭವಾಗಿದ್ದು, ಗುರುವಾರ ಮುಕ್ತಾಯಗೊಂಡಿದೆ. ಜಮ್ಮು ಮತ್ತು ಕಾಶ್ಮೀರದ ಪರಿಹಾರ ಮತ್ತು ಪುನರ್ವಸತಿ ಇಲಾಖೆಯು ಈ ನಿಯೋಗವನ್ನು ಕಳುಹಿಸಿದೆ.

ಕೆಎಚ್‌ಸಿಡಬ್ಲ್ಯೂಟಿ (ಕಾಶ್ಮೀರಿ ಹಿಂದೂ ಕಲ್ಚರಲ್ ವೆಲ್ಫೇರ್ ಟ್ರಸ್ಟ್) ಅಧ್ಯಕ್ಷ ಆರ್‌ಕೆ ಮಟ್ಟೂ ಮಾತನಾಡಿ, 1990ರಲ್ಲಿ ಕಾಶ್ಮೀರಿ ಪಂಡಿತರ ವಲಸೆಯ ನಂತರ ಹುಟ್ಟಿದ ಪೀಳಿಗೆಯು ‘ರಾಜ್ಯ ವಿಷಯ ಪ್ರಮಾಣ ಪತ್ರ (ಸ್ಟೇಟ್ ಸಬ್ಜೆಕ್ಟ್​ ಸರ್ಟಿಫಿಕೆಟ್)’ ಇಲ್ಲದೆ ಬೆಳೆದಿದ್ದು, ಆ ಕಾಶ್ಮೀರಿ ಪಂಡಿತರ ಕುಟುಂಬದ ಸಮುದಾಯಕ್ಕೆ ಈ ಶಿಬಿರ ಅತ್ಯಗತ್ಯವಾಗಿದೆ ಎಂದರು.

ಎಲ್ಲಾ ಕಾಶ್ಮೀರಿ ಪಂಡಿತರು ವಾಸಸ್ಥಳ ಪ್ರಮಾಣಪತ್ರವನ್ನು ಪಡೆಯಲು ಸಮರ್ಥರಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳುವುದು ಈ ಶಿಬಿರದ ಗುರಿಯಾಗಿದೆ. ವಾಸಸ್ಥಳದ ಪ್ರಮಾಣಪತ್ರವನ್ನು ನೀಡಲು ಬಹಳಷ್ಟು ದಾಖಲೆಗಳು ಮತ್ತು ಪುರಾವೆಗಳು ಬೇಕಾಗುತ್ತವೆ. ಆದ್ದರಿಂದ, ಒಂದೇ ಕಡೆ ಎಲ್ಲ ಮಾಹಿತಿಯೂ ಸಿಗುವ ಒನ್ ಸ್ಟಾಪ್ ಶಾಪ್ ಆರಂಬಿಸಲು ನಾವು ನಿರ್ಧರಿಸಿದ್ದೇವೆ ಎಂದು ಮಟ್ಟೂ ಹೇಳಿದ್ದಾರೆ.

ಇದನ್ನೂ ಓದಿ: ಕಾಶ್ಮೀರಿ ಪಂಡಿತರನ್ನು ಇಲ್ಲಿಂದ ಓಡಿಸಿದ್ದು ಮುಸ್ಲಿಮರಲ್ಲ ಎಂದ ಫಾರೂಕ್ ಅಬ್ದುಲ್ಲಾ

ಕಾಶ್ಮೀರಿ ಪಂಡಿತರ ಕುಟುಂಬದ ಶೆಫಾಲಿ ರಜ್ದಾನ್​ ನೆದರ್​ಲ್ಯಾಂಡ್​ನ ಯುಎಸ್​ ರಾಯಭಾರಿ; ಅಧ್ಯಕ್ಷ ಜೋ ಬೈಡನ್​​ರಿಂದ ನೇಮಕ