
ಬೆಂಗಳೂರು, (ಜನವರಿ 26): ಮದುವೆಯಾದ ಎರಡೇ ವರ್ಷದಲ್ಲಿ ಗೃಹಿಣಿಯೊಬ್ಬರು (Woman) ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಬೆಂಗಳೂರಿನ (Bengaluru) ಯಡಿಯೂರಿನಲ್ಲಿ ನಡೆದಿದೆ. ಕೀರ್ತಿ ಶ್ರೀ (24) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಗಂಡನ ಹಾಗೂ ಅವರ ಕುಟುಂಬಸ್ಥರ ವರದಕ್ಷಣಿ ಕಿರುಕುಳದಿಂದ ಕೀರ್ತಿ ಸಾವಿಗೆ ಶರಣಾಗಿದ್ದಾಳೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ಕೀರ್ತಿ ಕುಟುಂಬಸ್ಥರು ನೀಡಿದ ದೂರನ್ನು ಬನಶಂಕರಿ ಠಾಣೆ ಪೊಲೀಸರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಮೂಲತಃ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕೀರ್ತಿ, 2023ರ ನವೆಂಬರ್‌ನಲ್ಲಿ ಗುರುಪ್ರಸಾದ್ ಎಂಬುವರನ್ನು ಮದುವೆಯಾಗಿದ್ದರು. 2023ರಲ್ಲಿ ಗುರುಪ್ರಸಾದ್ ಹಾಗೂ ಮೃತ ಕೀರ್ತಿ ಶ್ರೀ ಮದುವೆಯಾಗಿದ್ದರು.ಸುಮಾರು 35 ಲಕ್ಷವನ್ನು ಖರ್ಚು ಮಾಡಿ 400 ಗ್ರಾಂ ಚಿನ್ನ ಹಾಗೂ 5 ಲಕ್ಷ ಹಣವನ್ನು ನಗದಾಗಿ ನೀಡಿ ಮದುವೆಯನ್ನು ಮಾಡಿ ಕೊಟ್ಟಿದ್ದರು. ಆದರೆ ಇಷ್ಟಾದರೂ ಮೃತ ಕೀರ್ತಿ ಶ್ರೀ ಗಂಡ ಗುರುಪ್ರಸಾದ್ ಹಾಗೂ ಆತನ ಮನೆಯವರು ಹಣಕ್ಕಾಗಿ ನಿತ್ಯ ಕಿರುಕುಳವನ್ನು ನೀಡುತ್ತಿದ್ದ. ಹೀಗಾಗಿ ಅವರೇ ಕೊಲೆ ಮಾಡಿದ್ದಾರೆ ಎಂದು ಕೀರ್ತಿಶ್ರೀ ತಂದೆ ಆರೋಪ ಮಾಡಿದ್ದಾರೆ.
ಈ ಹಿಂದೆ ಕೀರ್ತಿ ಶ್ರೀಯನ್ನು ಗಂಡನ ಮನೆಯವರು ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದರಂತೆ. ಇದನ್ನ ಮೃತ ಕೀರ್ತಿ ಶ್ರೀ ತಂದೆ ತಾಯಿಯ ಬಳಿ ಹೇಳಿಕೊಂಡಿದ್ದಳು. ಬರ ಬರುತ್ತಾ ಕೀರ್ತಿಗೆ ಆಕೆಯ ಗಂಡನ ಮನೆಯವರ ಕಿರುಕುಳ ವಿಪರೀತವಾಗಿದ್ದು, ಬಾತ್ರೂಮ್ನಲ್ಲಿ ಕೂಡಿಹಾಕಿ ಆಕೆಗೆ ಹೊಡೆದು ದೈಹಿಕ ಹಿಂಸೆ ನೀಡಿದ್ದರು. ಈ ಸಂಬಂಧ ರ ಕೀರ್ತಿ ಮನೆ ಕಡೆಯವರು ಗುರುಪ್ರಸಾದ್ ಮನೆಯಲ್ಲಿ 3 ಬಾರಿ ಜಗಳವನ್ನು ಶಮನ ಮಾಡುವ ಪಂಚಾಯತಿ ಕೂಡ ಮಾಡಿದ್ದರು.
ಆದ್ರೆ, ನಿನ್(ಜನವರಿ 25)ನ ಮದುವೆ ಸಮಯದಲ್ಲಿ ನಾವು ಕೇಳಿದಷ್ಟು ವರದಕ್ಷಿಣೆ ಕೊಟ್ಟಿಲ್ಲ ಅಂತ ನಿಂದಿಸುತ್ತಾ ಎಲ್ಲರ ಮುಂದೆಯೇ ಆತ ಕೇಳಿದನಂತೆ. ಇದಾದ ನಂತರ ಮನೆ ಕಟ್ಟಲು 10 ಲಕ್ಷ ರೂ. ಕೊಡಿ ಆಮೇಲೆ ಬಾಕಿದು ನೋಡೋಣ ಎಂದು ನೇರವಾಗಿಯೇ ಗಂಡನ ಮನೆಯವರು ಕೇಳಿದರಂತೆ. ಈ ವೇಳೆ ಎಂಟು ಲಕ್ಷ ಹಣವನ್ನು ಕೊಟ್ಟಿದ್ದರೂ ಸಹ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಇದು ಆತ್ಮಹತ್ಯೆ ಅಲ್ಲ ಗಂಡ ಗುರುಪ್ರಸಾದ್ ಹಾಗೂ ಆತನ ಮನೆಯವರು ಕೀರ್ತಿಯನ್ನ ಕೊಲೆ ಮಾಡಿದ್ದಾರೆ ಎಂದು ಕೀರ್ತಿ ತಂದೆ ಬನಶಂಕರಿ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ .
ಒಟ್ಟಾರೆ ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತಂತೆ ಗಂಡ ಹೆಂಡತಿ ನಡ್ಕೋಬೇಕು. ಜಗಳ ಹಾಗೂ ಹಣದ ಆಸೆ ಹೆಚ್ಚಾದರೆ ಈ ರೀತಿಯ ಕೃತ್ಯಗಳನ್ನು ಮಾಡಿಕೊಂಡು ಬಿಡುತ್ತಾರೆ. ಸದ್ಯ ಗಂಡ ಗುರುಪ್ರಸಾದ್ ಸೇರಿ 5 ಜನರ ವಿರುದ್ಧ ಎಫ್ಐಆರ್ ದಾಖಲಾಗಿದ್ದು ಬನಶಂಕರಿ ಠಾಣೆ ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.