
ಬೆಂಗಳೂರು, (ಡಿಸೆಂಬರ್ 28): ಮಾಲ್‌ನಲ್ಲಿ ಕ್ರಿಸ್ಮಸ್ ಆಚರಿಸುತ್ತಿದ್ದಾಗ (christmas celebration) ಯುವತಿಯ ಖಾಸಗಿ ಅಂಗ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದ ಡೆಲಿವರಿ ಬಾಯ್‌ನ್ನು ಪೊಲೀಸರು ಬಂಧಿಸಿದ್ದಾರೆ. ಗುವಾಹಟಿ ಮೂಲದ ಮನೋಜ್(27) ಬಂಧಿತ ಆರೋಪಿ. ಬೆಂಗಳೂರಿನ (Bengaluru) ಮಾಲ್‌ನಲ್ಲಿ ಡಿಸೆಂಬರ್ 25ರಂದು ಕ್ರಿಸ್‌ಮಸ್ ಆಚರಣೆ ವೇಳೆ ಡೆಲಿವರಿ ಬಾಯ್ ಮನೋಜ್, ಯುವತಿಯ ಖಾಸಗಿ ಅಂಗ ಮುಟ್ಟಿ ವಿಕೃತಿ ಮೆರೆದಿದ್ದಾನೆ. ಇದರಿಂದ ಮುಜುಗರಕ್ಕೊಳಗಾದ ಯುವತಿ, ಕೂಡಲೇ ಸ್ಥಳದಲ್ಲೇ ಇದ್ದ ಹದೇವಪುರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾಳೆ. ಬಳಿಕ ಪೊಲೀಸರು, ಕಾಮುಕ ಮನೋಜ್ ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಮೊನ್ನೆ ಅಂದರೆ ಡಿಸೆಂಬರ್ 25ರಂದು ಬೆಂಗಳೂರಿನ ಸಿಲ್ಕ್ ಬೋರ್ಡ್ನಲ್ಲಿ ಪುಂಡರ ಗ್ಯಾಂಗ್, ಯುವತಿಯನ್ನು ಫಾಲೋ ಮಾಡಿ ಲೈಂಗಿಕ ಕಿರುಕುಳ ನೀಡಿತ್ತು. ಬೈಕ್‌ನಲ್ಲಿದ್ದ ಯುವತಿಯನ್ನು ಫಾಲೋ ಮಾಡಿ ಲೈಂಗಿಕ ಕಿರುಕುಳ ನೀಡಿದ್ದು, ಹಿಂದೆ ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿ ವಿಡಿಯೋ ಸರೆ ಹಿಡಿದಿದ್ದರು. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಶೇರ್ ಮಾಡಿ ಪೊಲೀಸರಿಗೆ ಟ್ಯಾಗ್ ಮಾಡಿದ್ದರು. ಇದರ ಬೆನ್ನಲ್ಲೇ ಕಾರ್ಯಚರಣೆ ನಡೆಸಿದ ಸುದ್ದಗುಂಟೆಪಾಳ್ಯ ಪೊಲೀಸರು, 3 ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಶೇಕ್ ಅಯನ್ ಮತ್ತು ಶೇಕ್ ರೋಷನ್ ಹಾಗೂ ಓರ್ವ ಅಪ್ರಾಪ್ತನನ್ನು ಬಂಧಿಸಿದ್ದರು.
ಇನ್ನೊಂದು ಪ್ರಕರಣದಲ್ಲಿ ಮಹಿಳಾ ಸಹೋದ್ಯೋಗಿಗಳ ಖಾಸಗಿ ಫೋಟೋ, ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ನಾಗರಭಾವಿ ಖಾಸಗಿ ಆಸ್ಪತ್ರೆ ನೌಕರ ಸುವೆಂದು ಮೊಹಂತ ಎನ್ನುವಾತ ಸಹ ಅರೆಸ್ಟ್ ಆಗಿದ್ದಾನೆ. ಆಸ್ಪತ್ರೆಯ ಆಪರೇಷನ್ ಥಿಯೇಟರ್ನಲ್ಲಿ ಕೆಲಸ ಮಾಡ್ತಿದ್ದ ಕಾಮುಕ, ಲೇಡಿ ನರ್ಸ್ಗಳು ಬಟ್ಟೆ ಬದಲಿಸುವುದನ್ನು ಮೊಬೈಲ್ನಲ್ಲಿ ಸರೆ ಹಿಡಿದುಕೊಳ್ಳುತ್ತಿದ್ದ. ಹೀಗೆ ಓರ್ವ ನರ್ಸ್ ಕಾಮುಕನ ಆಟವನ್ನು ಗಮನಿಸಿ ಕೂಡಲೇ ಆಸ್ಪತ್ರೆ ವಯದ್ಯರ ಗಮನಕ್ಕೆ ತಂದಿದ್ದರು. ಬಳಿಕ ಆಸ್ಪತ್ರೆಯವರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು, ಆರೋಪಿ ಸುವೆಂದು ಮೊಹಂತನನ್ನ ಬಂಧಿಸಿದ್ದಾರೆ.