ಹೊಸ ವರ್ಷ ನಿಮ್ಮ ಬಾಳು ಕತ್ತಲಾದಿತು ಹುಷಾರ್, ನ್ಯೂ ಇಯರ್ ಆಫರ್ ಬಗ್ಗೆ ಇರಲಿ ಎಚ್ಚರ
2025ಕ್ಕೆ ವಿದಾಯ ಹೇಳಿ 2026ನ್ನು ಸ್ವಾಗತಿಸುವ ಕ್ಷಣಕ್ಕೆ ಜನರು ಸಜ್ಜಾಗಿದ್ದಾರೆ. ಇದನ್ನೇ ಸೈಬರ್ ಖದೀಮರು ಬಂಡವಾಳ ಮಾಡಿಕೊಳ್ಳುತ್ತಿದ್ದು, ನ್ಯೂ ಇಯರ್ ಆಫರ್ ಹೆಸರಿನಲ್ಲಿ ಜನಸಾಮಾನ್ಯರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಾರೆ. ಇನ್ನು ಹೊಸ ವರ್ಷದ ಶುಭಾಶಯಗಳನ್ನು ಕೋರಲು ಎಪಿಕೆ ಫೈಲ್ ಬಳಸುತ್ತಾರೆ. ಈ ಬಗ್ಗೆ ಜನರು ಎಚ್ಚರದಿಂದ ಇರಬೇಕು. ಈ ಬಗ್ಗೆ ಪೊಲೀಸ್ ಇಲಾಖೆ ಸಹ ಎಚ್ಚರಿಸಿದೆ.

ಬೆಂಗಳೂರು, (ಡಿಸೆಂಬರ್ 28): ಹೊಸ ವರ್ಷದ ಟೈಮ್ನಲ್ಲಿ ಕಲರ್ ಪುಲ್ ಶುಭಾಶಯಗಳನ್ನ ( New Year Cyber Scams) ಕಳಿಸಲು ಎಪಿಕೆ ಫೈಲ್ ಬಳಸುತ್ತಾರೆ. ಇದು ಅಪಾಯಕ್ಕೆ ಅವಕಾಶ ಮಾಡಿಕೊಡಬಹುದು. ಯಾಕಂದ್ರೆ ಈ ಫೈಲ್ ಅಥವಾ ಅ್ಯಪ್ ಮೂಲಕ ಹ್ಯಾಕ್ ಮಾಡಿ ನಿಮ್ಮ ಖಾತೆಗೆ ಕನ್ನ ಹಾಕಬಹುದು. ಇನ್ನು ಕೆಲವು ಶುಭಾಶಯದ ಗಿಫ್ಟ್ ಹಾಗೂ ಹೊಸ ವರ್ಷದ ಟೈಮ್ನಲ್ಲಿ ಆಫರ್ ಅಂತಾ ನಕಲಿ ಕಂಪನಿಗಳು, ಅಪರಿಚಿತ ವೆಬ್ ಸೈಟ್ ಗಳು ನಿಮ್ಮ ಖಾತೆಗೆ ಕನ್ನ ಹಾಕುತ್ತಾರೆ. ಅಪ್ಪಿ ತಪ್ಪಿ ಗಿಫ್ಟ್ ಕೋಪನ್ ಸಿಗುತ್ತೆ ಆಫರ್ ಸಿಗುತ್ತೆ ಅಂತಾ ಹಿಂದೆ ಮುಂದೆ ನೋಡದೇ ಅಪರಿಚಿತ ವೆಬ್ ಸೈಟ್ ಮೇಲೆ ಲಿಂಕ್ ಕ್ಲಿಕ್ ಮಾಡಿದ್ರೆ ಮೋಸದ ಜಾಲಕ್ಕೆ ಬೀಳೋದು ಫಿಕ್ಸ್.
ಮೆಸೇಜ್ ಓಪನ್ ಮಾಡೋ ಮುನ್ನ ಎಚ್ಚರ
ಹೊಸ ವರ್ಷದ ವಿಶ್ ಮೆಸೇಜ್ ಓಪನ್ ಮಾಡೋ ಮುನ್ನ ಎಚ್ಚರಕೆ ವಹಿಸಬೇಕಿದೆ. ಹಿಂದೆ ಮುಂದೆ ನೋಡದೇ ಮೆಸೇಜ್ ಓಪನ್ ಮಾಡಿದ್ರೆ ಖಾತೆಗೆ ಕನ್ನ ಬೀಳುವುದು ಫಿಕ್ಸ್ . ಡಿಫೆರೆಂಟ್ ಡಿಫೆರೆಂಟ್ ಕಲರ್ ಪುಲ್ ಹೊಸ ವರ್ಷದ ಶುಭಾಶಯಗಳ ಎಪಿಕೆ ಓಪನ್ ಬಗ್ಗೆ ಸೈಬರ್ ತಜ್ಞರು ಎಚ್ಚರಿಕೆ ನೀಡಿದ್ದು, ಹೊಸ ವರ್ಷದ ಸಂಭ್ರಮದಲ್ಲಿ ನಿಮ್ಮ ಬಾಳು ಕತ್ತಲಾದಿತು ಹುಷಾರ್ ಎಂದಿದ್ದಾರೆ. ಎಪಿಕೆ ಫೈಲ್ ಮೂಲಕ ಹೊಸ ವರ್ಷದ ಶುಭಾಶಯಗಳ ಕಳಸಿ ನಿಮ್ಮ ಖಾತೆಗೆ ಕನ್ನ ಹಾಕುತ್ತಾರೆ. ಅಪ್ಪಿ ತಪ್ಪಿ ಹೊಸ ವರ್ಷದ ಶುಭಾಶಯಗಳು ಎಪಿಕೆ ಫೈಲ್ ನಲ್ಲಿ ಓಪನ್ ಮಾಡದಂತೆ ತಜ್ಞರ ಸಲಹೆ ನೀಡಿದ್ದಾರೆ. ಇನ್ನು ಹೊಸ ವರ್ಷದ ಗಿಫ್ಟ್ ಕೂಪನ್ ಸಿಗುತ್ತೆ ಆಫರ್ ಸಿಗುತ್ತೆ ಅಂತಾ ಹಿಂದೆ ಮುಂದೆ ನೋಡದೆ ಅಪರಿಚಿತ ವೆಬ್ ಸೈಟ್ ಮೇಲೆ ಲಿಂಕ್ ಕ್ಲಿಕ್ ಮಾಡಬೇಡಿ ಅಂತಿದ್ದಾರೆ ಸೈಬರ್ ತಜ್ಞರು.
ಇದನ್ನೂ ನೋಡಿ; ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ನಾರ್ಮಲ್ ಶುಭಾಶಯ ಬೆಸ್ಟ್
ದೊಡ್ಡ ದೊಡ್ಡ ಹಬ್ಬಗಳಿಗಾಗಿ ನಕಲಿ ಸೈಬರ್ ಜಾಲ ಕಾದು ಕುಳಿತ್ತಿರುತ್ತೆ. ಜನರಿಗೆ ಈತರ ಆಫರ್ ಗಿಫ್ಟ್ ವಾಟ್ಸ್ ಆಫ್ ಮೆಸೇಜ್ ಸಾಮಾಜಿಕ ಜಾಲತಾಣಗಳ ಮೂಲಕ ಕಳಿಸುತ್ತಾರೆ . ಜನರು ತಿಳಿಯದೇ ಒಂದು ಸರಿ ಕ್ಲಿಕ್ ಮಾಡಿದ್ರೂ ಬ್ಯಾಂಕ್ ಅಕೌಂಟ್ ಲೂಟಿಯಾಗುತ್ತೆ. ಹೀಗಾಗಿ ಮೋಸದ ಜಾಲಕ್ಕೆ ಬಲಿಯಾಗದಂತೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ. ಹೊಸ ವರ್ಷದಂದು ನಾರ್ಮಲ್ ಟೆಕ್ಸ್ಟ್ ಮೆಸೇಜ್ ಮೂಲಕ ಶುಭಾಶಯಗಳನ್ನ ಕಳಿಸುವುದು ಬೆಸ್ಟ ಅಂತ ಪೊಲೀಸ್ ಇಲಾಖೆ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ ಮೂಡಿಸುತ್ತಿದೆ.
ಒಟ್ಟಿನಲ್ಲಿ ಸೋಷಿಯಲ್ ಮೀಡಿಯಾ ಎನ್ನುವುದು ಓಡೋ ಕುದುರೆ ರೀತಿ. ಆದ್ರೆ ಅದನ್ನು ಕಂಟ್ರೋಲ್ ಮಾಡಬೇಕಾದ ಜಾಕಿಗಳು ಅಂದ್ರೆ ಯೂಸರ್ಸ್ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕುರುಡಾಗಿ ದಾರಿ ತಪ್ಪುತಿರೋದು ವಿಪರ್ಯಾಸವೆ ಸರಿ. ಇನ್ನಾದರೂ ಜನ ಕೊಂಚ ಎಚ್ಚರಿಕೆ ವಹಿಸಬೇಕಿದೆ.



