ವಯಸ್ಸಿಗೂ ಮೀರಿದ ಸಾಧನೆ; ವಿಶ್ವ ದಾಖಲೆ ಬರೆದ ಬೆಂಗಳೂರಿನ ನಾಲ್ಕು ತಿಂಗಳ ಪುಟ್ಟ ಕಂದ

ಸಾಧಿಸುವ ಮನಸ್ಸಿದ್ದರೆ ವಯಸ್ಸು ಲೆಕ್ಕಕ್ಕೆ ಬರಲ್ಲ ಎಂಬ ಮಾತು ಮತ್ತೊಮ್ಮೆ ಸಾಭೀತಾಗಿದೆ. ಕೇವಲ ನಾಲ್ಕೇ ನಾಲ್ಕು ತಿಂಗಳ ಬೆಂಗಳೂರಿನ ಪುಟ್ಟ ಕಂದಮ್ಮ ಇಡೀ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾಳೆ. ಭೂವಿಗೆ ಬಂದು ನಾಲ್ಕೇ ತಿಂಗಳಾಗಿದ್ದು ವಿಶ್ವ ದಾಖಲೆ ಬರೆದು ದೇಶಕ್ಕೆ ಕೀರ್ತಿ ತಂದುಕೊಟ್ಟಿದ್ದಾಳೆ. ಹಾಗಾದ್ರೆ ಯಾರು ಆ ಪುಟ್ಟ ಪೋರಿ? ಏನು ಅವಳ ಸಾಧನೆ? ಇಲ್ಲಿ ಓದಿ.

ವಯಸ್ಸಿಗೂ ಮೀರಿದ ಸಾಧನೆ; ವಿಶ್ವ ದಾಖಲೆ ಬರೆದ ಬೆಂಗಳೂರಿನ ನಾಲ್ಕು ತಿಂಗಳ ಪುಟ್ಟ ಕಂದ
ವಿಶ್ವ ದಾಖಲೆ ಬರೆದ ಬೆಂಗಳೂರಿನ ನಾಲ್ಕು ತಿಂಗಳ ಪುಟ್ಟ ಕಂದ
Follow us
Poornima Agali Nagaraj
| Updated By: ಆಯೇಷಾ ಬಾನು

Updated on: May 13, 2024 | 9:37 AM

ಬೆಂಗಳೂರು, ಮೇ.13: ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎನ್ನುವ ಹಾಗೆ ಬೆಂಗಳೂರಲ್ಲಿ ಹುಟ್ಟಿದ ನಾಲ್ಕೇ ತಿಂಗಳಿಗೆ ಪುಟ್ಟ ಕಂದಮ್ಮ ವಿಶ್ವ ದಾಖಲೆ ಬರೆದು (World Record), ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾಳೆ. ಬೆಂಗಳೂರಿನ ಸ್ನೇಹ ಹಾಗೂ ಪ್ರಜ್ವಲ್ ಪುತ್ರಿ ಇಶಾನ್ವಿ.ಪಿ. ಈ ಪುಟ್ಟ ಕಂದಮ್ಮ ಎರಡು ತಿಂಗಳಿದ್ದಾಗಲೇ ಪೋಷಕರು ಎರಡು ಫ್ಲಾಶ್ ಕಾರ್ಡ್‌ ಇಟ್ಟು ಒಂದನ್ನು ಗುರುತಿಸುವಂತೆ ಹೇಳಿದರೆ, ಅದಕ್ಕೆ ಸರಿಯಾದ ಕಾರ್ಡ್‌ ಸೆಲೆಕ್ಟ್ ಮಾಡುತ್ತಿರುವುದನ್ನು ತಾಯಿ ಸ್ನೇಹ ಗುರ್ತಿಸಿದ್ರು. ಈಗ ನಾಲ್ಕು ತಿಂಗಳಲ್ಲಿ ಈ ವಂಡರ್‌ ಕಿಡ್‌ ತನ್ನ ಪ್ರತಿಭೆಯಿಂದ ವರ್ಲ್ಡ್‌ ರೆಕಾರ್ಡ್ ಮಾಡಿದೆ.

4 ತಿಂಗಳ ಇಶಾನ್ವಿ ಒಂದಲ್ಲ, ಎರಡಲ್ಲ ಸುಮಾರು 125 ವಿವಿಧ ರೀತಿಯ ವಸ್ತುಗಳು, ಪ್ರಾಣಿ-ಪಕ್ಷಿಗಳು, ತರಕಾರಿಗಳನ್ನು ಫೋಟೋಗಳ ಮೂಲಕ ಗುರುತಿಸುವ ಸಾಮರ್ಥ್ಯ ಹೊಂದಿದ್ದಾಳೆ. ಪ್ರಮುಖವಾಗಿ ಇಶಾನ್ವಿ 10 ಹಕ್ಕಿಗಳು, 10 ಸಾಕು ಪ್ರಾಣಿಗಳು, 10 ವಿವಿಧ ದೇಶದ ಧ್ವಜಗಳು, 10 ಹೂವುಗಳು, 10 ವಾಹನಗಳು, 10 ಕಾಡು ಪ್ರಾಣಿಗಳು, 11 ಕಲರ್ಸ್, 15 ತರಕಾರಿಗಳು, 14 ಹಣ್ಣುಗಳು, 13 ಜನರಲ್ ಇಮೇಜ್, 12 ಶೇಪ್ಸ್ ಗಳನ್ನು ಗುರುತಿಸುವ ಸಾಮರ್ಥ ಹೊಂದಿದ್ದು, ಇಡೀ ಪ್ರಪಂಚಕ್ಕೆ ನಾಲ್ಕೇ ತಿಂಗಳಿಗೆ ನೂರಾಪ್ಪತ್ತೈದು ಫ್ಲಾಶ್‌ ಕಾರ್ಡ್‌ಗಳನ್ನು ಗುರುತಿಸುವ ಮಗು ಎಂದು ಹೆಸರು ಮಾಡಿದೆ.

A four month old girl baby from Bengaluru who set a world record

ಇದನ್ನೂ ಓದಿ: ಕಬ್ಬನ್ ಪಾರ್ಕ್​ನಲ್ಲಿ ಸಿದ್ಧವಾಗುತ್ತಿದೆ 2 ಅಂತಸ್ತಿನ ಅತಿ ದೊಡ್ಡ ಅಕ್ವೇರಿಯಂ, ಈ ತಿಂಗಳ ಅಂತ್ಯದೊಳಗೆ ಉದ್ಘಾಟನೆ

ಇಶಾನ್ವಿ ಸಾಮರ್ಥ್ಯವನ್ನು ಗಮನಿಸಿದ ಆಕೆ ತಾಯಿ ಸ್ನೇಹಾ ಕುಟುಂಬಸ್ಥರ ಸಹಾಯದಿಂದ ವಿಡಿಯೋ ರೆಕಾರ್ಡ್ ಮಾಡಿ, ನೋಬಲ್ ವರ್ಲ್ಡ್‌ ರೆಕಾರ್ಡ್ಸ್‌ ಗೆ ಕಳುಹಿಸಿದ್ದಾರೆ. ನಂತರ ನೋಬಲ್ ಬುಕ್ ಆಫ್ ರೆರ್ಕಾಂಡ್ ನ ಆಯ್ಕೆ ಮಂಡಳಿ ಮಗುವಿನ ಪ್ರತಿಭೆಯನ್ನು ಗುರುತಿಸಿ ವಿಶ್ವ ದಾಖಲೆಗಳಿಗೆ ಆಯ್ಕೆ ಮಾಡಿದೆ. ಈ ಹಿಂದೆ ಆಂಧ್ರಪ್ರದೇಶದ ಕೈವಲ್ಯ ಎಂಬ ಹೆಣ್ಣು ಮಗು ನಾಲ್ಕು ತಿಂಗಳಿಗೆ 120 ಫ್ಲಾಶ್‌ ಕಾರ್ಡ್ ಗುರುತಿಸಿ ರೆರ್ಕಾಂಡ್ ಮಾಡಿದ್ದಳು. ಇದೀಗ ಇಶಾನ್ವಿ ಕೈವಲ್ಯ ಮಾಡಿದ ರೆರ್ಕಾಂಡ್ ನ್ನು ಬ್ರೇಕ್ ಮಾಡಿದ್ದಾಳೆ.

ಒಟ್ನಲ್ಲಿ ಹುಟ್ಟಿದ 4 ತಿಂಗಳಲ್ಲೇ ಪುಟ್ಟ ಪೋರಿ ವಿಶ್ವ ದಾಖಲೆ ಮಾಡುವ ಮೂಲಕ ತನ್ನ ಮಯಸ್ಸಿಗೂ ಮೀರಿದ ಸಾಧನೆ ಮಾಡಿದ್ದಾರೆ. ಇದು ನಿಜಕ್ಕೂ ಎಲ್ಲರ ಹುಬ್ಬೇರಿಸಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ