AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆಯಿಂದ ತಪ್ಪಿಸಿಕೊಳ್ಳಲು ಸ್ಪೀಡ್ ಆಗಿ ವಾಹನ ಚಲಾಯಿಸುವ ಸವಾರರೇ ಎಚ್ಚರ! ಈ ರಸ್ತೆಗಳಲ್ಲಿ ಬಾಯ್ತೆರೆದು ಕಾಯುತ್ತಿವೆ ಗುಂಡಿಗಳು

ರಾಜಧಾನಿಯಲ್ಲಿ ಕಳೆದ ಒಂದು ವಾರದಿಂದ ಮಳೆ ಆರಂಭವಾಗಿದೆ. ಮಳೆ ಬರುವ ವೇಳೆ ಬೈಕ್ ಮತ್ತು ವಾಹನ ಸವಾರರು ಬೇಗ ಮನೆ ತಲುಪಬೇಕು ಎಂದು ಸ್ಪೀಡ್ ಆಗಿ ವಾಹನ ಚಲಾಯಿಸುತ್ತಾರೆ. ಆದರೆ ವಾಹನ ಸವಾರರೇ ಎಚ್ಚರ ವಹಿಸಿ. ಏಕೆಂದರೆ ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿವೆ ನೂರಾರು ಡೆಡ್ಲಿ ಗುಂಡಿಗಳು.

ಮಳೆಯಿಂದ ತಪ್ಪಿಸಿಕೊಳ್ಳಲು ಸ್ಪೀಡ್ ಆಗಿ ವಾಹನ ಚಲಾಯಿಸುವ ಸವಾರರೇ ಎಚ್ಚರ! ಈ ರಸ್ತೆಗಳಲ್ಲಿ ಬಾಯ್ತೆರೆದು ಕಾಯುತ್ತಿವೆ ಗುಂಡಿಗಳು
ಬಾಯ್ತೆರೆದು ಕಾಯುತ್ತಿವೆ ಗುಂಡಿಗಳು
Kiran Surya
| Edited By: |

Updated on: May 13, 2024 | 10:12 AM

Share

ಬೆಂಗಳೂರು, ಮೇ.13: ಈಗಾಗಲೇ ಕಳೆದ ಒಂದು ವಾರದಿಂದ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ (Bengaluru Rain) ಜೋರಾಗಿ ಗಾಳಿ ಮಳೆ ಆರಂಭವಾಗಿದೆ. ರಾತ್ರಿ ವೇಳೆ ಮಳೆ ಸುರಿಯುವಾಗ ಬೈಕ್ ಸವಾರರು ಮಳೆಯಲ್ಲಿ ನೆನೆಯುವ ಮುನ್ನ ಮನೆ ಸೇರಿಕೊಳ್ಳಬೇಕೆಂದು ಸ್ಪೀಡ್ ಆಗಿ ವಾಹನ ಓಡಿಸಲು ಮುಂದಾಗ್ತಾರೆ. ಆದರೆ ನಗರದಲ್ಲಿರುವ ಡೆಡ್ಲಿ ಗುಂಡಿಗಳು (Potholes) ಗೊತ್ತಾಗದೆ ಗುಂಡಿಯಲ್ಲಿ ಬಿದ್ದು ಕೈಕಾಲು ಮುರಿದುಕೊಳ್ಳುವ ಸಾಧ್ಯತೆ ಹೆಚ್ಚು. ನಾವಿಲ್ಲಿ ನೀಡಿರುವ ಈ ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳಿದ್ದು ಈ ರಸ್ತೆಗಳಲ್ಲಿ ಸಂಚರಿಸುವಾಗ ಕೊಂಚ ಎಚ್ಚರ ವಹಿಸಿ.

ಹೊಸೂರು ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ನೋಡಿದ್ರೆ ಈ ಗುಂಡಿಗಳಲ್ಲಿ ಯಾರಾದರೂ ಬಿದ್ರೆ ಖಂಡಿತವಾಗಿ ಕೈಕಾಲು ಮುರಿದುಕೊಳ್ಳುತ್ತಾರೆ ಅನ್ಸುತ್ತೆ.‌ ಇತ್ತ ಚಿನ್ನಯನಪಾಳ್ಯ ತಿರುವು ರೋಡ್ ನಲ್ಲಿರುವ ಗುಂಡಿಯ ಬಗ್ಗೆಯಂತು ಹೇಳೋದೆ ಬೇಡ ನೋಡಿದ್ರೆ ಗೊತ್ತಾಗುತ್ತದೆ ಅಮಾಯಕರ ಪ್ರಾಣ ತೆಗೆಯಲು ಈ ಗುಂಡಿ ಕಾಯ್ಕೊಂಡಿದೆ ಎಂದು. ಇನ್ನೂ ಲಕ್ಕಸಂದ್ರ ಜಂಕ್ಷನ್ ನಲ್ಲಿರುವ ಗುಂಡಿಗಳಂತೋ ವಾಹನ ಸವಾರರು ಯಾವ ಕಡೆ ಹೋಗಬೇಕೆಂದು ಗೊತ್ತಾಗದಷ್ಟು ಆ್ಯಂಗಲ್​ನಲ್ಲಿ ಗುಂಡಿಗಳು ಬಿದ್ದಿವೆ. ಈ ಗುಂಡಿಗಳಲ್ಲಿ ವಾಹನ ಚಾಲನೆ ಮಾಡಬೇಕಾದ್ರೆ ಚೂರು ನಿರ್ಲಕ್ಷ್ಯ ಮಾಡಿದ್ರು ಆಸ್ಪತ್ರೆ ಸೇರುವುದು ಗ್ಯಾರೆಂಟಿ. ಪ್ರತಿದಿನ ಈ ರೋಡ್ ನಲ್ಲಿ ಓಡಾಡುತ್ತೀನಿ ಯಾವಾಗಲೂ ಯಾರಾದರೂ ವಾಹನ ಸವಾರರು ಈ ಗುಂಡಿಗಳಲ್ಲಿ ಬೀಳುತ್ತಾನೆ ಇರುತ್ತಾರೆ. ದಯವಿಟ್ಟು ಇದನ್ನು ಮೊದಲು ಸರಿ ಪಡಿಸಿ ಎಂದು ಬೈಕ್ ಸವಾರ ಭರತ್ ಮನವಿ ಮಾಡುದ್ರು.

ಇದನ್ನೂ ಓದಿ: ವಯಸ್ಸಿಗೂ ಮೀರಿದ ಸಾಧನೆ; ವಿಶ್ವ ದಾಖಲೆ ಬರೆದ ಬೆಂಗಳೂರಿನ ನಾಲ್ಕು ತಿಂಗಳ ಪುಟ್ಟ ಕಂದ

ಒಟ್ನಲ್ಲಿ ಮಳೆ ಬರುವಾಗ ರೋಡ್ ಮೇಲೆ ನೀರು ಕಮ್ಮಿ ಆದ ಮೇಲೆ ಬೈಕ್ ಚಲಾಯಿಸುವುದು ಒಳ್ಳೆಯದು. ಇಲ್ಲಾಂದ್ರೆ ಗುಂಡಿಗಳು ಕಾಣದೆ ಅದರಲ್ಲಿ ಬೀಳ್ಬೋದು. ಇನ್ನು ಬೈಕ್​ನಲ್ಲಿ ಹಿಂದೆ ಹೆಂಡತಿ, ಮಕ್ಕಳು, ವಯಸ್ಸಾದವರು ಇದ್ರಂತೂ ಬೀ ಕೇರ್ ಫುಲ್. ನಿಮ್ಮ ವೇಗಕ್ಕೆ ಹಿಂದೆ ಕುಳಿತವ್ರು ಮುಗ್ಗರಿಸಿ ಬೀಳಬಹುದು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ