Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಬ್ಬನ್ ಪಾರ್ಕ್​ನಲ್ಲಿ ಸಿದ್ಧವಾಗುತ್ತಿದೆ 2 ಅಂತಸ್ತಿನ ಅತಿ ದೊಡ್ಡ ಅಕ್ವೇರಿಯಂ, ಈ ತಿಂಗಳ ಅಂತ್ಯದೊಳಗೆ ಉದ್ಘಾಟನೆ

ಕಬ್ಬನ್ ಪಾರ್ಕ್ ಅದೆಷ್ಟೋ ಮಂದಿಗೆ ಸ್ವಚ್ಛಂದವಾಗಿರೋ ಗಾಳಿ ನಿಡೋ ಉದ್ಯಾನವನ‌. ವೀಕೆಂಡ್ ಬಂತು ಅಂದ್ರೆ ಜನ ಆರಾಮಾಗಿ‌‌ ಒಂದ್ ರೌಂಡ್ ಹೋಗೊಣ ಅಂತಾ ಕಬ್ಬನ್ ಪಾರ್ಕ್ ಬರ್ತಾರೆ. ಹಾಯಾಗಿ ಸಮಯ ಕಳೆಯೋಕೆ ಇರೋ ಪೀಸ್ ಫುಲ್ ಜಾಗ ಅಂದ್ರೆ ಅದು ಕಬ್ಬನ್ ಪಾರ್ಕ್. ಇದೀಗ ಕಬ್ಬನ್ ಪಾರ್ಕ್ ಪ್ರೇಮಿಗಳನ್ನ ಇನ್ನಷ್ಟು ಸೆಳೆಯೋಕೆ ಅಂತ ಫಿಶ್ ಆಕ್ವೇರಿಯಮ್ ಕೂಡ ರೆಡಿಯಾಗ್ತಿದೆ.

ಕಬ್ಬನ್ ಪಾರ್ಕ್​ನಲ್ಲಿ ಸಿದ್ಧವಾಗುತ್ತಿದೆ 2 ಅಂತಸ್ತಿನ ಅತಿ ದೊಡ್ಡ ಅಕ್ವೇರಿಯಂ, ಈ ತಿಂಗಳ ಅಂತ್ಯದೊಳಗೆ ಉದ್ಘಾಟನೆ
ಕಬ್ಬನ್ ಪಾರ್ಕ್​ನಲ್ಲಿ ಸಿದ್ಧವಾಗುತ್ತಿದೆ 2 ಅಂತಸ್ತಿನ ಅತಿ ದೊಡ್ಡ ಅಕ್ವೇರಿಯಂ
Follow us
Poornima Agali Nagaraj
| Updated By: ಆಯೇಷಾ ಬಾನು

Updated on:May 13, 2024 | 8:58 AM

ಬೆಂಗಳೂರು, ಮೇ.13: ಬೆಂಗಳೂರಿಗರಿಗೆ ಕಬ್ಬನ್ ಪಾರ್ಕ್ (Cubbon Park) ಒಂದೊಳ್ಳೆ ಜಾಗ. ಒಂದು ಕಡೆ ಪಾರ್ಕ್ ನಲ್ಲಿ ಕುಳಿತು ರಿಲ್ಯಾಕ್ಸ್ ಆಗ್ತಾಯಿದ್ರೆ. ಮತ್ತೊಂದು ಕಡೆ ಪೋಷಕರ ಜೊತೆ ಪುಟಾಣಿಗಳ ಆಟೋಟ. ಇದೆಲ್ಲ ನೋಡಿದ್ರೆ ನಮ್ಮ ಬೆಂಗಳೂರು ಎಷ್ಟು ಚಂದ ಅನಿಸುತ್ತೆ. ಈಗ ಕಬ್ಬನ್ ಪಾರ್ಕ್​ಗೆ ಮತ್ತಷ್ಟು ಪುಷ್ಟಿ ನೀಡೋಕೆ ಅಂತ 2 ಅಂತಸ್ತಿನಲ್ಲಿ ಅತಿ ದೊಡ್ಡ ಅಕ್ಟೇರಿಯಂ (Fish Aquarium) ರೆಡಿಯಾಗಿದೆ.

ಕಸ್ತೂರಬಾ ರಸ್ತೆಯ ಕಬ್ಬನ್ ಪಾರ್ಕ್ ಆವರಣದಲ್ಲಿ ಹೊಸ ರೂಪದೊಂದಿಗೆ ಮತ್ಸ್ಯಾಲಯ ಕಂಗೊಳಿಸಲಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಮ್ಮ ಬೆಂಗಳೂರು ಅಕ್ವೇರಿಯಂ ಎಂಬ ಖಾಸಗಿ ಸಂಸ್ಥೆ ಹಳೆಯ ಮತ್ಸ್ಯಾಲಯಕ್ಕೆ ಆಧುನಿಕ ಸ್ಪರ್ಶ ನೀಡಿದೆ. ಶೇ 95ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ತಿಂಗಳಾಂತ್ಯದಲ್ಲಿ ಉದ್ಘಾಟನೆಗೊಳ್ಳಲಿದೆ. ನಂತರ ಸಾರ್ವಜನಿಕರು ಈ ಮತ್ಸ್ಯ ಲೋಕವನ್ನು ಕಣ್ತುಂಬಿಕೊಳ್ಳಬಹುದು.

1983ರಲ್ಲಿ ಈ ಮತ್ಸ್ಯಾಲಯವನ್ನು 17,500 ಚದರಡಿಯಲ್ಲಿ ನಿರ್ಮಿಸಲಾಗಿತ್ತು. ಸದ್ಯ ಇದನ್ನು ಪಿಪಿಪಿ ಯೋಜನೆಯ ಅಡಿಯಲ್ಲಿ ಸುಮಾರು ₹15 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತಿದೆ. ಎರಡು ಅಂತಸ್ತಿನ ಮತ್ಯಾಲಯದ ಹಳೆಯ ಕಟ್ಟಡದ ವಿನ್ಯಾಸವನ್ನು ಹಾಗೆಯೇ ಉಳಿಸಿಕೊಂಡು ಅಭಿವೃದ್ಧಿ ಮಾಡಲಾಗಿದೆ. ಕಲರ್ ಕಲರ್ ಲೈಟಿಂಗ್ಸ್ ನೊಂದಿಗೆ ವಿಭಿನ್ನವಾಗಿ ಡಿಸೈನ್ ಮಾಡಲಾಗ್ತಿದೆ. ಇನ್ನು ಇಲ್ಲಿಗೆ ಎಂಟ್ರಿ ಟಿಕೆಟ್ ನ್ನು ಒಂದು ಗಂಟೆಗೆ 300 ರೂಪಾಯಿ ನಿಗದಿ ಪಡಿಸಲಾಗಿದೆ.

ಇದನ್ನೂ ಓದಿ: ಅನಧಿಕೃತ ಶಾಲೆಗಳ ಪಟ್ಟಿ ಪ್ರಕಟಿಸದ ಶಿಕ್ಷಣ ಇಲಾಖೆ! ವಿದ್ಯಾರ್ಥಿ, ಪೋಷಕರ ಜೊತೆ ಚೆಲ್ಲಾಟ

ಇನ್ನು ಅಕ್ವೇರಿಯಂ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಅವರಿಗೆ ತರಬೇತಿ ಕೂಡ ನೀಡಲಾಗುತ್ತಂತೆ. ವಿಶೇಷವೆಂದರೆ ಕಟ್ಟಡದ ಆವರಣದಲ್ಲಿ 75 ಸಾವಿರ ಲೀಟರ್ ಸಾಮರ್ಥ್ಯದ ಉಪ್ಪು ನೀರಿನ ಅಂತರರಾಷ್ಟ್ರೀಯ ಮಟ್ಟದ ಟನಲ್ ನಿರ್ಮಿಸಲಾಗಿದೆ. ಇದರ ಜೊತೆಗೆ ಮತ್ಸ್ಯಾಲಯ ಒಳಹೊಕ್ಕುವವರಿಗೆ ಸಮುದ್ರದ ಆಳದಲ್ಲಿದ್ದಂತೆ ಅನುಭವವಾಗಲಿದೆ. ಅದರಲ್ಲೂ ಮಕ್ಕಳಿಗೆ ಇದು ಫೇವರೇಟ್ ಸ್ಪಾಟ್ ಆಗಲಿದ್ದು, ಹೊಸದಾಗಿ ನವೀಕರಣಗೊಳ್ಳುತ್ತಿರುವ ಮತ್ಸಲಯದ ಬಗ್ಗೆ ಜರನು ಸಂತೋಷ ವ್ಯಕ್ತಪಡಿಸಿದ್ರು.

ಇನ್ನು, ಬೇರೆ ಕಡೆ ಮ್ಯುಸಿಯಂಗಳಿಗೆ ಹೋಗಬೇಕು ಎಂದ್ರೆ ಜಾಸ್ತಿ ಹಣವನ್ನ ಕೊಟ್ಟು ಹೋಗಬೇಕಾಗುತ್ತೆ.‌ ಇಲ್ಲಿಯಾದ್ರೆ ಸರ್ಕಾರಿ ಹಣವನ್ನ ಮೀಸಲಿಡ್ತಾರೆ. ಮುಂಚೆ ಮ್ಯುಸಿಯಂ ಓಪನ್ ಇದ್ದಾಗಾ ಫ್ಯಾಮೀಲಿ ಸಮೇತ ಬರ್ತಿದ್ವಿ. ಒಂದು ವರ್ಷದಿಂದ ಎಲ್ಲಾವೂ ಮಿಸ್ ಆಗಿತ್ತು. ಈಗಾ ಓಪನ್ ಆದ್ರೆ ಬರ್ತಿವಿ ಅಂತ ಪ್ರವಾಸಿಗರು ಹೇಳ್ತಿದ್ದಾರೆ.

ಇನ್ನು ಅಕ್ವೇರಿಯಂ ಕೆಲಸ 90% ರಷ್ಟು ಮುಗಿದಿದ್ದು, ಮುಂದಿನ ತಿಂಗಳು ಉದ್ಘಾಟನೆಯಾಗುವ ಸಾಧ್ಯತೆ ಇದೆ ಅಂತ ನಮ್ಮ‌ ಬೆಂಗಳೂರು ಅಕ್ವೇರಿಯಂ ಡೈರೆಕ್ಷರ್ ನಂದಕುಮಾರ್ ಅವರು ಮಾಹಿತಿ ನೀಡಿದ್ರು. ಒಟ್ನಲ್ಲಿ ಕಬ್ಬನ್ ಪಾರ್ಕ್ ಪ್ರೇಮಿಗಳನ್ನು ಸೆಳೆಯೋಕೆ ಈ ಅಕ್ವೇರಿಯಂ ಸಿಂಗಾರಗೊಳ್ಳುತ್ತಿದೆ. ಕೇವಲ ಸಿಟಿ ಜನಕ್ಕೆ ವಾಕಿಂಗ್ ಸ್ಪಾಟ್, ಮಕ್ಕಳಿಗೆ ಬಾಲಭವನದ ಜೊತೆಗೆ ಅಕ್ವೇರಿಯಂ ಕೂಡ ಆ್ಯಡ್ ಆಗಲಿದ್ದು, ಜನರು ಹೊಸ ಆಕ್ವೇರಿಯಮ್ ನೋಡುವುದಕ್ಕೆ ಕಾಯುತ್ತಿರುವುದು ಮಾತ್ರ ಸುಳ್ಳಲ್ಲ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:56 am, Mon, 13 May 24

ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಯಾರಾದ್ರೂ ಸತ್ರಾ? ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು
ಯಾರಾದ್ರೂ ಸತ್ರಾ? ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ