AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗಳ ಮುಂದೆಯೇ ಪತ್ನಿಗೆ 11 ಬಾರಿ ಇರಿದು ಕೊಂದ ಪತಿ: ಇಷ್ಟಪಟ್ಟು ಮದ್ವೆಯಾಗಿದ್ದವಳನ್ನ ಹತ್ಯೆಗೈದಿದ್ಯಾಕೆ?

ಬೆಂಗಳೂರಿನ ಸುಂಕದಕಟ್ಟೆ ಬಸ್ ನಿಲ್ದಾಣದಲ್ಲಿ ರೇಖಾ ಎಂಬ ಮಹಿಳೆಯನ್ನು ಮಗಳ ಕಣ್ಣೆದುರೇ ಕೊಲೆ ಮಾಡಿದ್ದಾರೆ. ಲೋಹಿತಾಶ್ವ ಕೊಲೆ ಮಾಡಿದವ. ಕೆಲವು ತಿಂಗಳ ಹಿಂದೆ ರೇಖಾಳನ್ನು ಮದುವೆಯಾಗಿದ್ದ ಲೋಹಿತಾಶ್ವ, ಆಕೆಯ 12 ವರ್ಷದ ಮಗಳು ಅವರ ಮನೆಯಲ್ಲಿರುವುದನ್ನು ವಿರೋಧಿಸಿ ಜಗಳವಾಡುತ್ತಿದ್ದ. ಇದೇ ಉದ್ವೇಗದಲ್ಲಿ ಮಗಳ ಕಣ್ಣೆದುರೇ ರೇಖಾಳ ಹತ್ಯೆಗೈದಿದ್ದಾನೆ.

ಮಗಳ ಮುಂದೆಯೇ ಪತ್ನಿಗೆ 11 ಬಾರಿ ಇರಿದು ಕೊಂದ ಪತಿ: ಇಷ್ಟಪಟ್ಟು ಮದ್ವೆಯಾಗಿದ್ದವಳನ್ನ ಹತ್ಯೆಗೈದಿದ್ಯಾಕೆ?
Lohitashwa And Rekha
ಭಾವನಾ ಹೆಗಡೆ
|

Updated on: Sep 23, 2025 | 6:31 PM

Share

ಬೆಂಗಳೂರು, (ಸೆಪ್ಟೆಂಬರ್ 23: ಬೆಂಗಳೂರಿನ ಸುಂಕದಕಟ್ಟೆ ಬಸ್ ನಿಲ್ದಾಣದ ಬಳಿ ವಿವಾಹಿತ ಮಹಿಳೆಯೊಬ್ಬಳನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಆಕೆಯ 12 ವರ್ಷದ ಮಗಳೆದುರಿಗೇ ಈ ಭೀಕರ ಘಟನೆ ನಡೆದಿದೆ. ಕೊಲೆ ಮಾಡಿದಾತನ ಹೆಸರು ಲೋಹಿತಾಶ್ವ ಅಲಿಯಾಸ್ ಲೋಕೇಶ್. ರೇಖಾ(35) ಕೊಲೆಯಾದ ದುರ್ದೈವಿ. ಹಂತಕ ಲೋಹಿತಾಶ್ವ ಮತ್ತು ಕೊಲೆಯಾದ ರೇಖಾ ಇಬ್ಬರೂ ಗಂಡ ಹೆಂಡತಿಯಾಗಿದ್ದು, ಆಕೆಯ ಮಗಳ ವಿಷಯದಲ್ಲಿ ನಡೆದ ಕಲಹ ಕೊಲೆಯಲ್ಲಿ ದುರಂತ ಅಂತ್ಯ ಕಂಡಿದೆ.

ಆಗಿದ್ದೇನು?

ಹಂತಕ ಲೋಹಿತಾಶ್ವ ಮತ್ತು ರೇಖಾ ಇತ್ತೀಚೆಗಷ್ಟೆ ಮದುವೆಯಾಗಿದ್ದರು. ಇಬ್ಬರಿಗೂ ಇದು ಎರಡನೇ ಮದುವೆಯಾಗಿತ್ತು. ರೇಖಾಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಕಿರಿಯವಳನ್ನು ಆಕೆಯ ತಂದೆ ತಾಯಿಯ ಬಳಿ ಬಿಟ್ಟಿದ್ದಳು. ಆದರೆ  12 ವರ್ಷದ  ಹಿರಯ ಮಗಳನ್ನು ಮಾತ್ರ ತನ್ನೊಟ್ಟಿಗೆ ಇರಿಸಿಕೊಂಡಿದ್ದಳು. ಇದರಿಂದಾಗಿಯೇ ರೇಖಾ ಮತ್ತು ಹಂತಕನ ನಡುವೆ ವೈಮನಸ್ಸುಂಟಾಗಿತ್ತು. ಇದರ ಸಲುವಾಗಿಯೇ ಸುಂಕದಕಟ್ಟೆ ಬಸ್ ನಿಲ್ದಾಣಕ್ಕೆ ಬಂದ ತಾಯಿಯನ್ನು ಮಗಳ ಕಣ್ಣೆದುರೇ ಭೀಕರವಾಗಿ ಹತ್ಯೆಗೈದಿದ್ದಾನೆ.

ಈ ಪ್ರಕರಣ ಸೋಮವಾರ ಬೆಳಿಗ್ಗೆ 11.30 ರ ಸುಮಾರಿಗೆ ಸಾರ್ವಜನಿಕರ ಕಣ್ಣೆದುರಿಗೇ ನಡೆದಿದೆ. ರೇಖಾಳ ಎದೆಗೆ ಮತ್ತು ಹೊಟ್ಟಗೆ ಸುಮಾರು 11 ಬಾರಿ ಚಾಕುವಿನಿಂದ ಇರಿದ ಲೋಕೇಶ್​ನನ್ನು ಸಾರ್ವಜನಿಕರು ತಡೆಯಲು ಪ್ರಯತ್ನ ಪಟ್ಟರೂ ಲೆಕ್ಕಿಸದೆ ಅವರೆಡೆಗೆ ಚಾಕು ಎಸೆದು ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಹಂತಕ ಲೋಹಿತಾಶ್ವನನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಇಷ್ಟ ಪಟ್ಟು ಮದ್ವೆಯಾಗಿದ್ದವಳನ್ನು ಕೊಂದಿದ್ಯಾಕೆ?

ತುಮಕೂರು ತಾಲೂಕಿನ ಶಿರಾ ಮೂಲದ ಲೋಹಿತಾಶ್ವ, ಹಾಸನದ ಚನ್ನರಾಯಪಟ್ಟನದ ರೇಖಾಳನ್ನು ತನ್ನ ಸ್ನೇಹಿತರ ಮೂಲಕ ಪರಿಚಯ ಮಾಡಿಕೊಂಡಿದ್ದ. ರೇಖಾ ಕಾಲ್ ಸೆಂಟರ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದಳು. ಅವರ ಕಛೇರಿಯಲ್ಲೇ ಲೋಹಿತಾಶ್ವ ಕಾರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ.  ಮುರಿದು ಬಿದ್ದ ಮದುವೆಯನ್ನು ಬದಿಗಿಟ್ಟು ಹೊಸ ಜೀವನವನ್ನು ಶುರು ಮಾಡಲು ಬಯಸಿದ್ದರು. ಒಂದೂ ವರೆ ವರ್ಷದಿಂದ ಲಿವಿನ್ ಸಂಬಂಧದಲ್ಲಿದ್ದ ಇಬ್ಬರೂ 3 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಬಳಿಕ ಸುಂಕದಕಟ್ಟೆಯ ಬಳಿಯೇ ಬಾಡಿಗೆ ಮನೆಯೊಂದರಲ್ಲಿ ಜೀವಿಸುತ್ತಿದ್ದರು. ರೇಖಾಳ ಹಿರಿಯ ಮಗಳು ಅವಿಬ್ಬರ ಜೊತೆ ಇರುವುದು ಲೋಹಿತಾಶ್ವನಿಗೆ ಇಷ್ಟವಿರಲಿಲ್ಲ. ಮಗಳನ್ನು ಬೇರೆ ಕಡೆ ಕಳುಹಿಸು ಎಂದು ರೇಖಾಗೆ ಸಾಕಷ್ಟು ಬಾರಿ ದುಂಬಾಲು ಬಿದ್ದಿದ್ದ. ಆದರೆ ರೇಖಾ ಮಾತ್ರ ಮಗಳನ್ನು ಕಳುಹಿಸಲು ಒಪ್ಪಿರಲಿಲ್ಲ. ಈ ಕಾರಣಕ್ಕಾಗಿಯೇ ಪದೇ ಪದೇ ಇಬ್ಬರೂ ಜಗಳವಾಡುತ್ತಿದ್ದರು.ಕೊಲೆಯಾದ ದಿನ ಬೆಳಿಗ್ಗೆಯೂ ರೇಖಾ ಅವನೊಂದಿಗೆ ಜಗಳವಾಡಿಕೊಂಡೇ ಬಂದಿದ್ದಳು. ಇದೇ ಉದ್ವೇಗದಲ್ಲಿ ಬಸ್ ನಿಲ್ಧಾಣಕ್ಕೆ ಬಂದ ಹಂತಕ ಹೀನ ಕೃತ್ಯವೆಸಗಿದ್ದಾನೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!