ಬೆಂಗಳೂರು, (ಮಾರ್ಚ್ 17): ಲಂಚ ಕೊಡದೇ ದಂಡವನ್ನು ಕೋರ್ಟ್ಗೆ ಕಟ್ಟಿದ್ದಕ್ಕೆ ಬೆಂಗಳೂರಿನ ವಿಜಯನಗರ ಟ್ರಾಫಿಕ್ ಪೊಲೀಸ್ ಇನ್ಸ್ಪೆಕ್ಟರ್ ಶಾಂತರಾಮ್, ಬೈಕ್ ಸವಾರನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಡ್ರಿಂಕ್ ಆ್ಯಂಡ್ ಡ್ರೈವ್ ಕೇಸ್ನಲ್ಲಿ ಸಿಕ್ಕಿಬಿದ್ದ ಬೈಕ್ ಸವಾರ ಈಶ್ವರ್, ದಂಡದ ಮೊತ್ತವನ್ನು ಕೋರ್ಟ್ಗೆ ಕಟ್ಟಿ ಬಳಿಕ ಸೀಜ್ ಆಗಿದ್ದ ಬೈಕ್ ವಾಪಸ್ ಪಡೆದುಕೊಳ್ಳಲು ಠಾಣೆಗ ಆಗಮಿಸಿದ್ದ ವೇಳೆ ಇನ್ಸ್ಪೆಕ್ಟರ್ ಶಾಂತರಾಮ್ ಹಾಗೂ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ. ಇದರಿಂ ಬೈಕ್ ಸವಾರ ಈಶ್ವರ್ ಆಸ್ಪತ್ರೆಗೆ ದಾಖಲಾಗಿದ್ದಾನೆ. ಮತ್ತೊಂದೆಡೆ ನ್ಯಾಯಕೊಡಿಸಿ ಎಂದು ಪ್ರಕಾಶ್ ಎನ್ನುವರು ಪರಪ್ಪನ ಅಗ್ರಹಾರ ಠಾಣೆ ಮೆಟ್ಟಿಲೇರಿದ್ದಾರೆ. ಆದ್ರೆ, ಪೊಲೀಸರು ಯಾವುದೇ ರೀತಿಯ ಸ್ಪಂದಿಸಿಲ್ಲ. ಬದಲಿಗೆ ಕೊಂಕು ಮಾತುಗಳಿಂದ ದೂರುದಾರನಿಗೆ ನಿಂದಿಸಿದ್ದಾರೆ. ಇದರಿಂದ ಈಗ ಪ್ರಕಾಶ್ ಕಮಿಷನರ್ ಕಚೇರಿ ಮೆಟ್ಟಿಲೇರಿದ್ದಾರೆ,
ಈತನ ಹೆಸರು ಸೂರ್ಯ ಪ್ರಕಾಶ್. ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯ ನಿವಾಸಿ. ಕಳೆದ ಒಂದು ವರ್ಷದ ಹಿಂದೆ ವಿನಯ್ ಕುಮಾರ್ ಎಂಬಾತನ ಬಳಿ ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡಿದ್ದರು. 6 ಲಕ್ಷ ರೂ. ಲೋನ್ ಬ್ಯಾಲನ್ಸ್ ಇದ್ದ ಕಾರನ್ನ ಒಂದು ಲಕ್ಷ ಕೊಟ್ಟು ಲೋನ್ ಕಟ್ಟಿಕೊಳ್ಳೋದಾಗಿ ಖರೀದಿ ಮಾಡಿದ್ದ. ಮೂರು ತಿಂಗಳ ಲೋನ್ ಹಣವನ್ನ ವಿನಯ ಕುಮಾರ್ ಗೂ ಕಳಿಸಿದ್ದ. ಆದ್ರೆ ವಿನಯ್ ಕುಮಾರ್ ಲೋನ್ ಹಣ ಕಟ್ಟದ ಕಾರಣಕ್ಕೆ ಬ್ಯಾಂಕ್ ನವರು ಈತನ ಕಾರು ಸೀಜ್ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ್ರೆ ವಿನಯ್ ಹಣ ಕೊಡುತ್ತೇನೆಂದು ಹೇಳಿ ವಂಚನೆ ಮಾಡಿದ್ದ. ಹೀಗಾಗಿ ಅನಿವಾರ್ಯವಾಗಿ ಸೂರ್ಯ ಪ್ರಕಾಶ್. ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ನ್ಯಾಯಕೊಡಿಸಿ ಎಂದು ಮನವಿ ಮಾಡಿದ್ದಾರೆ. ಆದ್ರೆ, ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಯಾವುದೇ ರೀತಿಯ ಸ್ಪಂದಿಸಿಲ್ಲ. ಬದಲಿಗೆ ಕೊಂಕು ಮಾತುಗಳಿಂದ ದೂರುದಾರನಿಗೆ ನಿಂದಿಸಿದ್ದಾರೆ. ಇದರಿಂದ ಬೆಸತ್ತ ಪ್ರಕಾಶ್ ನ್ಯಾಯಕ್ಕಾಗಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಮೊರೆ ಹೋಗಿದ್ದಾರೆ.
ಇನ್ನು ಈ ವಂಚನೆ ಬಗ್ಗೆ ಸೂರ್ಯ ಪ್ರಕಾಶ್ ಪರಪ್ಪನ ಅಗ್ರಹಾರ ಠಾಣೆಗೆ ದೂರು ನೀಡಲು ಹೋಗಿದ್ದ ವೇಳೆ ಪೊಲೀಸರು ಇವರ ದೂರು ಸ್ವೀಕರಿಸಿದೇ ಕಳೆದ 8 ತಿಂಗಳಿಂದ ಸತಾಯಿಸಿದ್ದಾರಂತೆ. ಅದರಲ್ಲೂ PSI ಧರಣೇಶ್ ಎಂಬುವರು ಠಾಣೆಯಲ್ಲಿ ಸೂರ್ಯ ಪ್ರಕಾಶ್ ನೋಡಿದ್ರೆ ದಿನ ನಿನ್ನ ಮುಖ ನೋಡಬೇಕಲ್ಲ ಎಂದು ಕೊಂಕು ಮಾತಾಡಿ ನಿಂದಿಸಿದ್ದಾರೆ ಎಂದು ಪ್ರಕಾಶ್ ಆರೋಪ ಮಾಡಿದ್ದಾರೆ.
ಸದ್ಯ ಪರಪ್ಪನ ಅಗ್ರಹಾರ ಪೊಲೀಸರ ವರ್ತನೆಗೆ ಬೇಸತ್ತ ಸೂರ್ಯ ಪ್ರಕಾಶ್ ಕುಟುಂಬ ಸಮೇತ ನಗರ ಪೊಲೀಸ್ ಆಯುಕ್ತರ ಕಚೇರಿ ಬಾಗಿಲು ಬಡಿದಿದ್ದಾರೆ. ತನಗಾದ ಅನ್ಯಾಯ ಸರಿಪಡಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ. ಸದ್ಯ ಈತನ ದೂರು ಕಮಿಷನರ್ ಗೆ ತಲುಪಿದ್ದು ಈಗಲಾದರೂ ನ್ಯಾಯ ಸಿಗುತ್ತಾ ಕಾದು ನೋಡಬೇಕು.
ವರದಿ: ಪ್ರದೀಪ್ ಚಿಕ್ಕಾಟೆ, ಟಿವಿ9 ಬೆಂಗಳೂರು
Published On - 10:35 pm, Mon, 17 March 25