ಬೆಂಗಳೂರು: ಪಾರ್ಕ್​ನಲ್ಲಿ ಮಲಗಿದ್ದಾಗ ಮರ ಬಿದ್ದು ವ್ಯಕ್ತಿ ದುರ್ಮರಣ!

ಮನುಷ್ಯನ ಹುಟ್ಟು ಹೇಗೊ ಹಾಗೇ ಸಾವು ಎನ್ನುವುದು ಪ್ರಪಂಚದ ಅಚಲವಾದ ಸತ್ಯ. ಆದ್ರೆ, ಸಾವು ಹೇಗೆ ಯಾವ ರೂಪದಲ್ಲಿ ಬರುತ್ತೆ ಎನ್ನುವುದನ್ನು ಊಹೆ ಮಾಡಲು ಸಾಧ್ಯವಿಲ್ಲ. ಹೌದು...ಪಾರ್ಕ್​ನಲ್ಲಿ ಮಲಗಿದ್ದ ವ್ಯಕ್ತಿ ಮೇಲೆ ಬೃಹತ್ ಮರ ಬಿದ್ದಿದೆ. ಪರಿಣಾಮ ವ್ಯಕ್ತಿ ಮಲಗಿದ್ದಲ್ಲೇ ಉಸಿರು ಚೆಲ್ಲಿದ್ದಾನೆ.

ಬೆಂಗಳೂರು: ಪಾರ್ಕ್​ನಲ್ಲಿ ಮಲಗಿದ್ದಾಗ ಮರ ಬಿದ್ದು ವ್ಯಕ್ತಿ ದುರ್ಮರಣ!
ಬೆಂಗಳೂರಿನ ಅಪಾರ್ಟ್‌ಮೆಂಟ್​ವೊಂದರ 16ನೇ ಫ್ಲೋರ್​​ನಿಂದ ಹಾರಿ ವ್ಯಕ್ತಿ ಆತ್ಮಹತ್ಯೆ
Edited By:

Updated on: Nov 24, 2024 | 10:24 PM

ಬೆಂಗಳೂರು, (ನವೆಂಬರ್ 24): ಮರ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ರಾಜಾಜಿನಗರದ ನವರಂಗ್ ಬಳಿಯ ಬಿಬಿಎಂಪಿ ಪಾರ್ಕ್​ನಲ್ಲಿ ನಡೆದಿದೆ. ಲಕ್ಷ್ಮಣ್(31) ಮೃತ ದುರ್ವೈವಿ. ಕಸದ ಗಾಡಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಲಕ್ಷ್ಮಣ್, ರಾಜಾಜಿನಗರದ ನವರಂಗ್ ಬಳಿ ಪಾರ್ಕ್​ನಲ್ಲಿ ಮಲಗಿದ್ದ ವೇಳೆ ಏಕಾಏಕಿ ಬೃಹತ್ ಮರ ಮರ ಬಿದ್ದಿದೆ. ಪರಿಣಾಮ ಎದೆ ಭಾಗಕ್ಕೆ ಗಂಭೀರವಾಗಿ ಗಾಯವಾಗಿ ಮೃತಪಟ್ಟಿದ್ದಾನೆ. ಈ ಸಂಬಂಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆ ಬಳಿ ಕುಳಿತಿದ್ದ ವ್ಯಕ್ತಿಗೆ ಕಾರು ಡಿಕ್ಕಿ

ಬೆಂಗಳೂರು: ವಾಹನ ಚಲಾಯಿಸುವ ಕೊಂಚ ಯಾಮಾರಿದರೂ ಅಪಾಯ ಎಂಬಂತೆ ಕಾರು ಚಾಲಕ ಬ್ರೇಕ್​ ತುಳಿಯುವ ಬದಲು ಎಕ್ಸ್​ಲೇಟರ್ ತುಳಿದುಬಿಟ್ಟಿದ್ದಾನೆ. ಪರಿಣಾಮ ವೇಗವಾಗಿ ಬಂದ ಕಾರು ಮೊಬೈಲ್​ ನೋಡಿಕೊಂಡು ಮನೆ ಮುಂದೆ ಕುಳಿತತ್ತಿದ್ದ ವ್ಯಕ್ತಿಗೆ ಗುದ್ದಿದೆ. ಇದರಿಂದ ವ್ಯಕ್ತಿಯ ಎರಡೂ ಕಾಲುಗಳಿಗೆ ಗಂಭೀರ ಗಾಯವಾಗಿದೆ. ಬೆಂಗಳೂರಿನ ರಾಜಾಜಿನಗರದ ಮಂಜುನಾಥ ನಗರದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಾರು ಡಿಕ್ಕಿಯಾಗಿ ಮಂಜು ಎಂಬುವರ ಕಾಲುಗಳಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಗುದ್ದಿದ ಏಟಿಗೆ ಕಾರಿನ ಸ್ಟೇರಿಂಗ್ ಎದೆ ಭಾಗಕ್ಕೆ ಬಡಿದಿದ್ದರಿಂದ ಚಾಲಕ ಮಹಾವೀರ್​ ಸಹ ಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಈ ಸಂಬಂಧ ಚಾಲಕ ಮಹಾವೀರ್ ವಿರುದ್ಧ ವಿಜಯನಗರ ಸಂಚಾರಿ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More
Loading...
Unable to load recommendations.
Follow Us