ಬೆಂಗಳೂರಲ್ಲಿ ನಿಲ್ಲದ ಬೀದಿ ಪುಂಡರ ಹಾವಳಿ: ಯುವತಿ ಎದೆ ಮುಟ್ಟಿ ವಿಕೃತಿ ಮರೆದ ಕಾಮುಕ

ರಾಜಧಾನಿ ಬೆಂಗಳೂರು ಹೆಣ್ಮಕ್ಕಳಿಗೆ ಸೇಫ್‌ ಸಿಟಿ ಎಂಬ ಮಾತಿದೆ. ಆದರೆ ಕೆಲ ಬೀದಿ ಪುಂಡರು ಈ ಹೆಸರನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಜನಜಂಗುಳಿ ಮಧ್ಯೆಯೇ ಯಾರ ಭಯವು ಇಲ್ಲದೇ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಹಿಂದೊಮ್ಮೆ ನಮ್ಮ ಮೆಟ್ರೋ ರೈಲಿನಲ್ಲಿ ಯುವತಿಯರಿಗೆ ಬೇಕಂತೆ ಸ್ಪರ್ಶಿಸಿ ವಿಕೃತಿ ಮೆರೆದಿದ್ದರು. ಇದೀಗ ಯುವತಿಯ ಎದೆ ಮುಟ್ಟಿ ವಿಕೃತಿ ಮರೆದಿರುವ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಲ್ಲಿ ನಿಲ್ಲದ ಬೀದಿ ಪುಂಡರ ಹಾವಳಿ: ಯುವತಿ ಎದೆ ಮುಟ್ಟಿ ವಿಕೃತಿ ಮರೆದ ಕಾಮುಕ
Follow us
ಬಿ ಮೂರ್ತಿ, ನೆಲಮಂಗಲ
| Updated By: ರಮೇಶ್ ಬಿ. ಜವಳಗೇರಾ

Updated on:Jul 01, 2024 | 7:44 PM

ಬೆಂಗಳೂರು, (ಜುಲೈ 01): ಜ್ಯೂಸ್ ಕುಡಿದುಕೊಂಡು ವಾಪಸ್ ಬರುತ್ತಿದ್ದ ಯುವತಿಯ ಎದೆ ಮುಟ್ಟಿ ವಿಕೃತಿ ಮರೆದಿರುವ ಘಟನೆ ಬೆಂಗಳೂರಿನ ಪೀಣ್ಯಾದ HMTಲೇಔಟ್​​ನಲ್ಲಿ ನಡೆದಿದೆ. 8ನೇ ಮೈಲಿಯ ಪ್ರತಿಷ್ಟಿತ ಕಾಲೇಜಿನಲ್ಲಿ ಬಿಬಿಎ ವಿದ್ಯಾರ್ಥಿಯಾಗಿರುವ ಯುವತಿ, ಪೀಣ್ಯಾದ HMTಲೇಔಟ್‌ ನಲ್ಲಿ ರಾತ್ರಿ 9:45ರ ಸುಮಾರಿಗೆ ಜ್ಯೂಸ್ ಕುಡಿದು ವಾಪಸ್ ಪಿಜಿಗೆ ತೆರಳುವಾಗ ದುರುಳನೋರ್ವ ಆಕೆಯ ಎದೆ ಭಾಗಕ್ಕೆ ಮುಟ್ಟಿದ್ದಾನೆ. ಬಳಿಕ ಯುವತಿ ಕಿರುಚಾಡಿದ್ದರಿಂದ ಕಾಮುಕ ಬೈಕ್​ನಲ್ಲಿ ಎಸ್ಕೇಪ್ ಆಗಿದ್ದಾನೆ. ಇನ್ನು ಯುವತಿಯ ಎದೆಯನ್ನು ಟಚ್​ ಮಾಡಿ ವಿಕೃತಿ ಮೆರೆದು ಪರಾರಿಯಾಗಿರುವ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಯುವತಿ ದೂರಿನ ಮೇರೆಗೆ ಇದೀಗ ಪರಾರಿಯಾಗಿರುವ ಆರೋಪಿ ವಿರುದ್ಧ IPC 354(a),354 ಅಡಿಯಲ್ಲಿ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

ಇದೇ ರೀತಿ ಬೆಂಗಳೂರಿನಲ್ಲಿ ಈ ಹಿಂದೆ ನಡೆದಿತ್ತು

ಇನ್ನು ಜನವರಿಯಲ್ಲಿ ಇದೇ ರೀತಿಯ ಪ್ರಕರಣ ಬೆಂಗಳೂರಿನಲ್ಲಿ ನಡೆದಿತ್ತು. ಬೆಂಗಳೂರಿನ ವಿಜಯನಗರದ ಕೃಷ್ಣ ಸಾಗರ್ ಹೋಟೆಲ್ ಬಳಿ ಯುವತಿಗೆ ಲೈಂಗಿಕ‌ ಕಿರುಕುಳ ನೀಡಿದ್ದರು. ಯುವತಿಯೊಬ್ಬಳು ತನ್ನ ಸ್ನೇಹಿತೆಯೊಂದಿಗೆ ತಿಂಡಿ ಪಾಸರ್ಲ್‌ ಪಡೆಯಲು ನಿಂತಿದ್ದಾಗ ವೇಳೆ ಅಲ್ಲಿಗೆ ಬಂದಿದ್ದ ಮೂವರು ಪುಂಡರು, ಕೀಟಲೆ ಮಾಡುತ್ತ ಯುವತಿಯನ್ನು ಹಿಂದಿನಿಂದ ಟಚ್​ ಮಾಡಿದ್ದರು.

ಫೋನ್‌ನಲ್ಲಿ ಮಾತಾಡುತ್ತಿದ್ದ ಯುವತಿಗೆ ಹಿಂದಿನಿಂದ ಬಂದ ಕಾಮುಕ ಬೇಕು ಬೇಕಂತಲೇ ಟಚ್‌ ಮಾಡಿದ್ದ. ಯುವಕನಿಂದ ಸ್ಪರ್ಶಿಸುತ್ತಿದ್ದಂತೆ ಯುವತಿ ಬೆಚ್ಚಿದ್ದಾಳೆ, ನಂತರ ಪ್ರಶ್ನಿಸಲು ಮುಂದಾಗಿದ್ದಾಳೆ. ತಮ್ಮದೇನು ತಪ್ಪೇ ಇಲ್ಲ ಎಂಬಂತೆ ಪುಂಡರು ವಾದ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:41 pm, Mon, 1 July 24

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್