ವ್ಯಾಪಾರಕ್ಕೆಂದು ಬಂದು ಮಹಿಳೆಯ ಸಹವಾಸ ಮಾಡಿ ಬರ್ಬರ ಹತ್ಯೆಯಾದ ಈರುಳ್ಳಿ ವ್ಯಾಪಾರಿ!

ತಮಿಳುನಾಡು ಮೂಲದ ಈರುಳ್ಳಿ ವ್ಯಾಪಾರಿಯೊಬ್ಬ ಬೆಂಗಳೂರಿನಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದಾನೆ. ವ್ಯಾಪಾರಕ್ಕೆಂದು ಬಂದು ಮಹಿಳೆಯ ಸಹವಾಸ ಮಾಡಿದ್ದ. ಇದೀಗ ಮಹಿಳೆಯ ಸಹವಾಸದಿಂದಲೇ ಈರುಳ್ಳಿ ವ್ಯಾಪಾರಿ ಜೀವ ಕಳೆದುಕೊಂಡಿದ್ದಾನೆ. ಮಹಿಳೆಯ ಮನೆಗೆ ಹೋಗಿದ್ದಾಗಲೇ ಈರುಳ್ಳಿ ವ್ಯಾಪಾರಿ ಕೊಲೆಯಾಗಿದ್ದಾನೆ. ಅಷ್ಟಕ್ಕೂ ಕೊಲೆ ಮಾಡಿದ್ಯಾರು? ನಡೆದಿದ್ದೇನು? ಎನ್ನುವ ಡಿಟೇಲ್ಸ್ ಇಲ್ಲಿದೆ.

ವ್ಯಾಪಾರಕ್ಕೆಂದು ಬಂದು ಮಹಿಳೆಯ ಸಹವಾಸ ಮಾಡಿ ಬರ್ಬರ ಹತ್ಯೆಯಾದ ಈರುಳ್ಳಿ ವ್ಯಾಪಾರಿ!
ರಾಮಚಂದ್ರ ರೆಡ್ಡಿ(ಕೊಲೆಯಾದವ), ಹರೀಶ್(ಹಂತಕ)

Updated on: Apr 25, 2026 | 9:30 PM

ಬೆಂಗಳೂರು, (ಏಪ್ರಿಲ್ 25): ಮಹಿಳೆಯೊಬ್ಬರ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಈರುಳ್ಳಿ ವ್ಯಾಪಾರಿ (onion merchant) ಬರ್ಬರವಾಗಿ ಹತ್ಯೆಯಾಗಿದ್ದಾನೆ. ಬೆಂಗಳೂರಿನ (Bengaluru) ಕಾಡುಗೋಡಿ ಠಾಣೆ ವ್ಯಾಪ್ತಿಯಲ್ಲಿ ಈ ಕೊಲೆ ನಡೆದಿದ್ದು, ರಾಮಚಂದ್ರ ರೆಡ್ಡಿ ಕೊಲೆಯಾದ ವ್ಯಕ್ತಿ. ತಮಿಳುನಾಡು ಮೂಲದ ರಾಮಚಂದ್ರ ರೆಡ್ಡಿ ಈರುಳ್ಳಿ ವ್ಯಾಪಾರಿಯಾಗಿದ್ದು (Tamil nadu onion merchant), ವ್ಯಾಪಾರಕ್ಕೆಂದು ಬೆಂಗಳೂರಿಗೆ  ಮಹಿಳೆಯೊಬ್ಬರ ಪರಿಚಯವಾಗಿ ಅದು ಅನೈತಿಕ ಸಂಬಂಧಕ್ಕೆ ತಿರುಗಿತ್ತು.  ಬಳಿಕ ಬೆಂಗಳೂರಿಗೆ ಬಂದಾಗೆಲ್ಲಾ ಮಹಿಳೆಯ ಮನೆಗೆ ಹೋಗಿ ಬರ್ತಿದ್ದ. ಅದರಂತೆ ನಿನ್ನೆ(ಏಪ್ರಿಲ್ 25) ಸಹ ಮಹಿಳೆಯ ಮನೆಗೆ ತೆರಳಿದ್ದ ವೇಳೆ ಬರ್ಬರವಾಗಿ ಹತ್ಯೆಯಾಗಿದ್ದಾನೆ.  ಮಹಿಳೆಯ ಹೊಸ ಪ್ರಿಯಕರ ಹರೀಶ್ , ಎನ್ನುವಾತನೇ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಈರುಳ್ಳಿ ವ್ಯಾಪಾರಿಯಾಗಿದ್ದ ತಮಿಳುನಾಡು ಮೂಲದ ರಾಮಚಂದ್ರ ರೆಡ್ಡಿ, ವ್ಯಾಪಾರಕ್ಕೆಂದು ಬೆಂಗಳೂರಿಗೆ ಬರುತ್ತಿದ್ದ. ಆ ಸಂದರ್ಭದಲ್ಲಿ ರಾಮಚಂದ್ರ ರೆಡ್ಡಿಗೆ ಮಹಿಳೆಯೊಬ್ಬರ ಪರಿಚಯವಾಗಿದ್ದು, ಬಳಿಕ ಇಬ್ಬರ ಸ್ನೇಹ ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಹೀಗಾಗಿ ಬೆಂಗಳೂರಿಗೆ ಬಂದಾಗೆಲ್ಲ ಮಹಿಳೆಯ ಮನೆಗೆ ಹೋಗಿ ಬರುತ್ತಿದ್ದ. ಈ ನಡುವೆ ಮಹಿಳೆಗೆ ಹರೀಶ್ ಎಂಬಾತನ ಪರಿಚಯವಾಗಿದ್ದು, ಇಬ್ಬರ ಮಧ್ಯೆ ಪ್ರೀತಿ ಕೂಡ ಶುರು ಆಗಿದೆ. ಆದ್ರೆ ಇತ್ತೀಚೆಗೆ ರಾಮಚಂದ್ರ ರೆಡ್ಡಿ ಬಂದು ಹೋಗುವುದು ಹರೀಶ್ ಗೆ ಗೊತ್ತಾಗಿದ್ದು, ಪ್ರೇಯಸಿಯ ಸಂಬಂಧವನ್ನ ಸಹಿಸದೆ ಆಕ್ರೋಶಗೊಂಡಿದ್ದ. ಅಲ್ಲದೇ ಇದಕ್ಕೆ ಅಂತ್ಯಹಾಡಬೇಕೆಂದು ಪ್ಲ್ಯಾನ್ ಮಾಡಿದ್ದ.

ಇದನ್ನೂ ಓದಿ: ಮೈಸೂರು: ಕುಡಿತದ ಚಟಕ್ಕೆ ದಾಸನಾದ ಮಗ, ಕಾಟ ತಾಳಲಾರದೇ ಕೊಂದೇ ಬಿಟ್ಲು ಹೆತ್ತಮ್ಮ

ಈ ಸಂದರ್ಭದಲ್ಲಿ ರಾಮಚಂದ್ರ ರೆಡ್ಡಿ  ಸಹ ನಿನ್ನೆ (ಏಪ್ರಿಲ್ 25) ಮಹಿಳೆಯ ಮನೆಗೆ ಬಂದಿದ್ದು,  ಬಳಿಕ ಅಲ್ಲೇ ಇದ್ದ ದೇವಸ್ಥಾನವೊಂದರ ಬಳಿ ಮಲಗಿದ್ದ. ಇದೇ ಸಮಯಕ್ಕೆ ಮಹಿಳೆಯ ಪ್ರಿಯಕರ ಹರೀಶ್ ಬಂದು ರಾಮಚಂದ್ರ ರೆಡ್ಡಿ ಮೇಲೆ ಕಲ್ಲು ಎತ್ತಿ ಹಾಕಿ ಕೊಂದಿದ್ದಾನೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕಾಡುಗೋಡಿ ಪೊಲೀಸರು, ಹಂತಕ ಹರೀಶ್​​ನನ್ನು ಬಂಧಿಸಿದ್ದಾರೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Loading...
Unable to load recommendations.
Follow Us