ಬೆಂಗಳೂರು, ಸೆ.26: ಹಾಲೋ ಬ್ಲಾಕ್ ತುಂಬಿದ್ದ ಟೆಂಪೋ ಪಲ್ಟಿಯಾಗಿ ಮೂವರು ಮೃತಪಟ್ಟ (Death) ಘಟನೆ ರಾಜ್ಯ ಗಡಿಭಾಗ ತಮಿಳುನಾಡಿನ ಡೆಂಕಣಿಕೋಟೆ ಬಳಿಯ ಅಂಚೆಟ್ಟಿ ರಸ್ತೆಯಲ್ಲಿ ನಡೆದಿದೆ (Accident). ಘಟನೆಯಲ್ಲಿ ಓರ್ವನಿಗೆ ಗಂಭೀರ ಗಾಯಗಳಾಗಿವೆ. ಹಾಲೋ ಬ್ಲಾಕ್ ತುಂಬಿದ್ದ ಟೆಂಪೋ ಬೈಕ್ ಮೇಲೆ ಪಲ್ಟಿಯಾಗಿದೆ. ಈ ಪರಿಣಾಮ ಬೈಕ್ನಲ್ಲಿ ತೆರಳುತ್ತಿದ್ದ ಮಾದೇಶ್ ಹಾಗೂ ಜಯಲಕ್ಷ್ಮೀ ದಂಪತಿ ಮತ್ತು ಟೆಂಪೋದಲ್ಲಿದ್ದ ಕೂಲಿ ಕಾರ್ಮಿಕ ಗೋವಿಂದ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ರಸ್ತೆಯ ತಿರುವಿನಲ್ಲಿ ಹಾಲೋಬ್ಲಾಕ್ ತುಂಬಿದ್ದ ಟೆಂಪೋ ಪಲ್ಟಿಯಾಗಿದೆ. ಡೆಂಕಣಿಕೋಟೆ ಸರ್ಕಾರಿ ಆಸ್ಪತ್ರೆಗೆ ಮೃತದೇಹಗಳನ್ನು ರವಾನಿಸಲಾಗಿದ್ದು ಗಾಯಾಳುಗೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಂಚೆಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಗೌಡಯ್ಯನಪಾಳ್ಯದಲ್ಲಿ ಉಳುಮೆ ಮಾಡುವಾಗ ಹೆಜ್ಜೇನು ದಾಳಿಯಾಗಿ ರೈತ ಮೃತಪಟ್ಟ ಘಟನೆ ನಡೆದಿದೆ. ರಾಜಣ್ಣ(48) ಮೃತ ದುರ್ದೈವಿ. ಹೊಲ ಉಳುಮೆ ಮಾಡುವ ವೇಳೆ ರೈತನ ಮೇಲೆ ಹೆಜ್ಜೇನು ದಾಳಿ ಮಾಡಿತ್ತು. ನೂರಾರು ಹೆಜ್ಜೇನು ಹುಳುಗಳು ಕಡಿದು ರೈತ ಅಸ್ವಸ್ಥನಾಗಿ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ಜಾಮ್ ಬಿಸಿ ರೈಲಿಗೂ ತಟ್ಟಿತಾ? ಪೊಲೀಸರು ಹೇಳುವುದೇ ಬೇರೆ!
ಮನೆಗೆ ಕನ್ನ ಹಾಕಲು ಕಳ್ಳರು ಬಂದಿದ್ದು ಅವರಿಂದ ತಪ್ಪಿಸಿಕೊಳ್ಳಲು ಹೋಗಿ ಕೊಳ್ಳದಲ್ಲಿ ಬಿದ್ದು ಮಹಿಳೆ ಮೃತಪಟ್ಟ ಘಟನೆ ಬೆಳಗಾವಿ ತಾಲೂಕಿನ ಶಿಂದೋಳ್ಳಿ ಗ್ರಾಮದಲ್ಲಿ ನಡೆದಿದೆ. ಭರಮಕ್ಕಾ ಪೂಜಾರಿ ಕೊಳ್ಳದಲ್ಲಿ ಕಾಲು ಜಾರಿ ಬಿದ್ದ ಮಹಿಳೆ. ನಿನ್ನೆ ಮಧ್ಯೆ ರಾತ್ರಿ ಕಳ್ಳರ ಗ್ಯಾಂಗೊಂದು ಮನೆಗೆ ಕನ್ನ ಹಾಕಲು ಭರಮಕ್ಕಾ ಅವರ ಮನೆಗೆ ಎಂಟ್ರಿಯಾಗಿತ್ತು. ಇದನ್ನ ಗಮನಿಸಿ ಮನೆಯ ಹಿತ್ತಲು ಬಾಗಿಲಿನಿಂದ ಭರಮಕ್ಕಾ ಹೊರ ಬಂದಿದ್ದು ಗಾಬರಿಯಲ್ಲಿ ಓಡಿ ಬರುವಾಗ ಕೊಳ್ಳದಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಸ್ಥಳೀಯ ನಿವಾಸಿಗಳು ಮೃತದೇಹ ಹೊರ ತೆಗೆದಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮಹಿಳೆ ಮೃತದೇಹವನ್ನು ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ