ಶಿವರಾತ್ರಿ ಆಚರಣೆಯಲ್ಲಿ ಡ್ಯಾನ್ಸ್ ಮಾಡುವಾಗ ಮೈ ಟಚ್ ಆಗಿದ್ದಕ್ಕೆ ಯುವಕನ ಕೊಲೆ!

| Updated By: Rakesh Nayak Manchi

Updated on: Mar 09, 2024 | 3:53 PM

ಇಡೀ ದೇಶಾದ್ಯಂತ ನಿನ್ನೆ ಶಿವರಾತ್ರಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಕರ್ನಾಟಕದಲ್ಲಿಯೂ ಶಿವರಾತ್ರಿ ಆಚರಿಸಲಾಗಿದೆ. ಆದರೆ, ಬೆಂಗಳೂರಿನಲ್ಲಿ ಡ್ಯಾನ್ಸ್ ಮಾಡುವ ವೇಳೆ ದೇಹ ತಾಗಿತು ಎಂಬ ಸಣ್ಣ ಕಾರಣಕ್ಕೆ ಯುವಕನೊಬ್ಬನನ್ನು ಕೊಲೆ ಮಾಡಲಾಗಿದೆ. ಗಿರಿನಗರದ ದೇವಸ್ಥಾನದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.

ಶಿವರಾತ್ರಿ ಆಚರಣೆಯಲ್ಲಿ ಡ್ಯಾನ್ಸ್ ಮಾಡುವಾಗ ಮೈ ಟಚ್ ಆಗಿದ್ದಕ್ಕೆ ಯುವಕನ ಕೊಲೆ!
ಬೆಂಗಳೂರಿನ ಗಿರಿನಗರದಲ್ಲಿ ಶಿವರಾತ್ರಿ ಆಚರಣೆಯಲ್ಲಿ ಡ್ಯಾನ್ಸ್ ಮಾಡುವಾಗ ಮೈ ಟಚ್ ಆಗಿದ್ದಕ್ಕೆ ಯುವಕನ ಕೊಲೆ!
Follow us on

ಬೆಂಗಳೂರು, ಮಾ.9: ಇಡೀ ದೇಶಾದ್ಯಂತ ನಿನ್ನೆ ಶಿವರಾತ್ರಿ (Shivratri) ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಕರ್ನಾಟಕದಲ್ಲಿಯೂ ಶಿವರಾತ್ರಿ ಆಚರಿಸಲಾಗಿದೆ. ಆದರೆ, ಬೆಂಗಳೂರಿನಲ್ಲಿ (Bengaluru) ಡ್ಯಾನ್ಸ್ ಮಾಡುವ ವೇಳೆ ದೇಹ ತಾಗಿತು ಎಂಬ ಸಣ್ಣ ಕಾರಣಕ್ಕೆ ಯುವಕನೊಬ್ಬನನ್ನು ಕೊಲೆ (Murder) ಮಾಡಲಾಗಿದೆ. ಗಿರಿನಗರದ ದೇವಸ್ಥಾನದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಯೋಗೇಶ್ (23) ಕೊಲೆಯಾದ ಯುವಕನಾಗಿದ್ದಾನೆ.

ಬೈಕ್ ಸರ್ವೀಸ್ ಸೆಂಟರ್​ನಲ್ಲಿ ಯೋಗೇಶ್ ವಾಷಿಂಗ್ ಕೆಲಸ ಮಾಡುತ್ತಿದ್ದ. ನಿನ್ನೆ ಗಿರಿನಗರದ ದೇವಸ್ಥಾನದ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುವಾಗ ದೇಹ ತಾಗಿತೆಂಬ ವಿಚಾರವಾಗಿ ಗಲಾಟೆ ನಡೆದಿದೆ. ಬಳಿಕ ಡ್ಯಾನ್ಸ್ ಮುಗಿಸಿ ಶ್ರೀನಗರದ ತನ್ನ ಮನೆಗೆ ಬೈಕ್​ ಮೂಲಕ ಯೋಗೇಶ್ ಹೋಗುವಾಗ ನಾಲ್ವರು ಯುವಕರು ಹಿಂಬಾಲಿಸಿದ್ದಾರೆ.

ಇದನ್ನೂ ಓದಿ: ರಾಮನಗರ: 500 ರೂಪಾಯಿಗೆ ಯುವಕನ ಕೊಲೆ; ಮಲಗೋದಕ್ಕೆ ಜಾಗ ಕೊಟ್ಟು, ಹತ್ಯೆ ಮಾಡಿದವ ಅಂದರ್

ಬಳಿಕ ದಾಳಿ ನಡೆಸಿದ ನಾಲ್ವರು, ಚಾಕುವಿನಿಂದ ಯೋಗೀಶ್​ಗೆ ಚುಚ್ಚಿದ್ದಾರೆ. ಹಂತಕರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಯೋಗೇಶ್ ಮನೆಯೊಂದರ ಕಾಂಪೌಂಡ್ ಹಾರಿದ್ದ. ಅಗ ಕಾಂಪೌಂಡ್​ಗೆ ಹಾಕಿದ್ದ ಗ್ಲಾಸ್ ಚುಚ್ಚಿರಬಹುದು ಎಂದು ಕೆಲವರು ಭಾವಿಸಿದ್ದರು. ಆದರೆ ಪೊಲೀಸರು ತನಿಖೆ ಮಾಡಿದಾಗ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

ಪ್ರಕರಣ ದಾಖಲಿಸಿಕೊಂಡ ಬ್ಯಾಟರಾಯನಪುರ ಠಾಣಾ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಬಂಧಿತರನ್ನು ತನಿಖೆ ನಡೆಸಲಾಗುತ್ತಿದ್ದು, ಹಳೆ ದ್ವೇಷ ಏನು ಕೂಡ ಕಂಡು ಬಂದಿಲ್ಲ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ