Chetan kumar: ‘ಆ ದಿನಗಳು’ ಖ್ಯಾತಿಯ ನಟ ಚೇತನ್‌ಗೆ 14 ದಿನ ನ್ಯಾಯಾಂಗ ಬಂಧನ

| Updated By: ಸಾಧು ಶ್ರೀನಾಥ್​

Updated on: Feb 23, 2022 | 10:09 AM

Aa Dinagalu Chetan kumar: ನಟ ಚೇತನ್​ ಗೆ 8ನೇ ಎಸಿಎಂಎಂ ಕೋರ್ಟ್‌ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ. ಜಾಮೀನಿಗಾಗಿ ಚೇತನ್ ಪರ ವಕೀಲ ಕೆ. ಬಾಲನ್ ಅರ್ಜಿ ಸಲ್ಲಿಸಿದ್ದು, ಇಂದು ಆಕ್ಷೇಪಣೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

Chetan kumar: ‘ಆ ದಿನಗಳು’ ಖ್ಯಾತಿಯ ನಟ ಚೇತನ್‌ಗೆ 14 ದಿನ ನ್ಯಾಯಾಂಗ ಬಂಧನ
‘ಆ ದಿನಗಳು’ ಖ್ಯಾತಿಯ ನಟ ಚೇತನ್‌ಗೆ 14 ದಿನ ನ್ಯಾಯಾಂಗ ಬಂಧನ
Follow us on

ಬೆಂಗಳೂರು: ಅಕ್ಷೇಪಾರ್ಹ ಟ್ವೀಟ್ ಮಾಡಿರುವ ಆರೋಪದ ಮೇರೆಗೆ ಬೆಂಗಳೂರು ಪೊಲೀಸರು (Bengaluru Police) ಆ ದಿನಗಳು ಖ್ಯಾತಿಯ ನಟ ಚೇತನ್​ನನ್ನು (Aa Dinagalu Chetan kumar) ನಿನ್ನೆ ಮಂಗಳವಾರ ಬಂಧಿಸಿದ್ದು, 8ನೇ ಎಸಿಎಂಎಂ ಕೋರ್ಟ್‌ ಅವರಿಗೆ 14 ದಿನ ನ್ಯಾಯಾಂಗ ಬಂಧನ (judicial custody) ವಿಧಿಸಿದೆ. ಜಾಮೀನಿಗಾಗಿ ಚೇತನ್ ಪರ ವಕೀಲ ಕೆ. ಬಾಲನ್ ಅರ್ಜಿ ಸಲ್ಲಿಸಿದ್ದು, ಇಂದು ಆಕ್ಷೇಪಣೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಈ ಮಧ್ಯೆ, ಚೇತನ್ ಪತ್ನಿ ಮೇಘಾ ಪ್ರತಿಕ್ರಿಯೆ ನೀಡಿದ್ದು, ಚೇತನ್ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಶ್ನಿಸುವ ಅವಕಾಶ ಎಲ್ಲರಿಗೂ ಇದೆ. ಪೊಲೀಸ್, ಜಡ್ಜ್, ಮೋದಿ ಯಾರೇ ಆಗಿರಲಿ ಪ್ರಶ್ನಿಸುವ ಅಧಿಕಾರವಿದೆ. ಯಾವುದೇ ಆಕ್ಷೇಪಾರ್ಹ ಪದಗಳನ್ನ‌ ಬಳಸಿ ಚೇತನ್ ಮಾತನಾಡಿಲ್ಲ. ಚೇತನ್ ಜೊತೆ ಮಾತನಾಡಿದ್ದೇನೆ, ಆತ್ಮವಿಶ್ವಾಸದಿಂದಿದ್ದಾರೆ. ಬಂಧನದ ವಿರುದ್ಧವಾಗಿ ನಾವು ಕಾನೂನು ಹೋರಾಟ ಕೈಗೊಳ್ಳಲಿದ್ದೇವೆ ಎಂದಿದ್ದಾರೆ.

ಫೆಬ್ರವರಿ 16 ರಂದು ನಟ ಚೇತನ್​ ಟ್ವೀಟ್, ಶೇಷಾದ್ರಿಪುರಂ ಪೊಲೀಸರಿಂದ ಎಫ್​ಐಆರ್ ದಾಖಲು
ನಟ ಚೇತನ್​ ಫೆಬ್ರವರಿ 16 ರಂದು ಟ್ವೀಟ್​ ಮಾಡಿದ್ದು, ಅದರಲ್ಲಿ ಹಿಜಾಬ್​ ವಿಚಾರವನ್ನು ಪ್ರಸ್ತಾಪಿಸುತ್ತಾ ಹೈಕೋರ್ಟ್​ ಜಡ್ಜ್​​ ಒಬ್ಬರ ವಿರುದ್ಧ ಅಕ್ಷೇಪಾರ್ಹ ವ್ಯಾಖ್ಯಾನ ಮಾಡಿದ್ದರು ಎನ್ನಲಾಗಿದೆ. ಇದರ ವಿರುದ್ಧ ಶೇಷಾದ್ರಿಪುರಂ ಪೊಲೀಸರು ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡಿದ್ದರು. ಬಳಿಕ ಐಪಿಸಿ ಸೆಕ್ಷನ್​ 505(2) ಮತ್ತು 504 ಅಡಿ ಎಫ್​ಐಆರ್ ( FIR – Cr No40/2022) ದಾಖಲಿಸಿದ್ದಾರೆ.​

ನಟ ‘ಆ ದಿನಗಳು’ ಚೇತನ್ (Chetan) ಸದಾ ವಿವಾದದ ಮೂಲಕವೇ ಸುದ್ದಿ ಆಗುತ್ತಿರುತ್ತಾರೆ. ಈ ಮೊದಲು ಅವರು ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು. ಇಂದು (ಫೆಬ್ರವರಿ 22) ನಟ ಚೇತನ್‌ ಅವರನ್ನು ಶೇಷಾದ್ರಿಪುರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿತ್ತು. ಹೀಗಿರುವಾಗಲೇ ಅವರ ಪತ್ನಿ ಮೇಘಾ ಅವರು ಮಂಗಳವಾರ ರಾತ್ರಿ ಫೇಸ್​ಬುಕ್​ ಲೈವ್​ ಬಂದು ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದರು. ‘ನನ್ನ ಪತಿಯ ಅಪಹರಣವಾಗಿದೆ’ ಎಂದು ಹೇಳಿಕೊಂಡಿದ್ದರು ಮೇಘಾ. ಇದಕ್ಕೆ ಪೊಲೀಸರಿಂದ ಸ್ಪಷ್ಟನೆ ಸಿಕ್ಕಿ, ಅವರನ್ನು ಬಂಧಿಸಲಾಗಿದೆ ಎಂದಿದ್ದರು.

‘ಶೇಷಾದ್ರಿಪುರಂ ಠಾಣೆಯ ಪೊಲೀಸರು ಚೇತನ್​ರನ್ನು ಬಂಧಿಸಿದ್ದಾರೆ. ನ್ಯಾಯಾಧೀಶರಿಗೆ ನಿಂದಿಸಿದ ಆರೋಪ ಪ್ರಕರಣದಡಿ ಬಂಧನ ನಡೆದಿದೆ. ಸ್ವಯಂಪ್ರೇರಿತ ಕೇಸ್‌ ದಾಖಲಿಸಿ ನಟ ಚೇತನ್‌ನನ್ನ ಬಂಧಿಸಿದ್ದೇವೆ’ ಎಂದು ಬೆಂಗಳೂರಿನ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್​.ಅನುಚೇತ್ ಸ್ಪಷ್ಟನೆ ನೀಡಿದರು.

ಚೇತನ್​ ಅವರಿಗೆ ಯಾವುದೇ ನೋಟಿಸ್ ನೀಡಿಲ್ಲ. ನೇರವಾಗಿ ಬಂದು ಚೇತನ್​ ಅವರನ್ನು ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ಚೇತನ್​ ಎಲ್ಲಿದ್ದಾರೆ ಎಂದೂ ಹೇಳುತ್ತಿಲ್ಲ. ಇದೊಂದು ರೀತಿ ಕಿಡ್ನ್ಯಾಪ್​ ಮಾಡಿದಂತೆ. ನಮಗೆ ಅನ್ಯಾಯ ಆಗಿದೆ. ಪೊಲೀಸ್​ ಆದರೂ ನಮಗೆ ಮಾಹಿತಿ ನೀಡಬಹುದಿತ್ತು. ಅದನ್ನೂ ಮಾಡುತ್ತಿಲ್ಲ’ ಎಂದು ಮೇಘಾ ಆರೋಪಿಸಿದ್ದರು.

Also Read:
Hijab Row: ಹಿಜಾಬ್ ಹಾಕುವುದು ಅಥವಾ ಹಾಕದಿರುವುದು ಮುಸ್ಲಿಂ ಮಹಿಳೆಯರ ಹಕ್ಕು: ಹೈಕೋರ್ಟ್​ನಲ್ಲಿ ಎಜಿ ವಾದ

Also Read:
ಮಕ್ಕಳಿಗೆ ವಿಭಜನೆಯ ವಿಷ ಉಣಿಸಬೇಡಿ, ಪೂರ್ವಗ್ರಹಗಳೊಂದಿಗೆ ಮಕ್ಕಳು ಬೆಳೆಯಬಾರದು: ಹಿಜಾಬ್ ವಿವಾದ ಬಗ್ಗೆ ಸದ್ಗುರು ಹೇಳಿದ್ದೇನು?

 

Published On - 6:30 am, Wed, 23 February 22