Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳಿಗೆ ವಿಭಜನೆಯ ವಿಷ ಉಣಿಸಬೇಡಿ, ಪೂರ್ವಗ್ರಹಗಳೊಂದಿಗೆ ಮಕ್ಕಳು ಬೆಳೆಯಬಾರದು: ಹಿಜಾಬ್ ವಿವಾದ ಬಗ್ಗೆ ಸದ್ಗುರು ಹೇಳಿದ್ದೇನು?

ಹಿಜಾಬ್ ವಿವಾದದಲ್ಲಿ ರಾಜಕೀಯ ತೊಡಗಿಸಿಕೊಂಡಿರುವ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಅವರು “ನೀವು ಶಾಲೆಗಳಲ್ಲಿದ್ದಾಗ ನಿಮ್ಮನ್ನು ಮಗು ಎಂದು ಪರಿಗಣಿಸಲಾಗುತ್ತದೆ. ಮಗುವಿಗೆ ವಿಭಜನೆಯ ವಿಷವನ್ನುಣಿಸಬಾರದು. ನೀವು ಮುಕ್ತವಾಗಿ ಬೆಳೆಯಲು ಬಿಡಬೇಕು.

ಮಕ್ಕಳಿಗೆ ವಿಭಜನೆಯ ವಿಷ ಉಣಿಸಬೇಡಿ, ಪೂರ್ವಗ್ರಹಗಳೊಂದಿಗೆ ಮಕ್ಕಳು ಬೆಳೆಯಬಾರದು: ಹಿಜಾಬ್ ವಿವಾದ ಬಗ್ಗೆ ಸದ್ಗುರು ಹೇಳಿದ್ದೇನು?
ಸದ್ಗುರು ಜಗ್ಗಿ ವಾಸುದೇವ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Feb 22, 2022 | 2:54 PM

ದೆಹಲಿ: ನಮ್ಮನ್ನು ಒಟ್ಟಿಗೆ ಸೇರಿಸುವ ಜೀವನದ ಅಂಶಗಳನ್ನು ನೋಡುವ ಬದಲು ನಾವು ನಿರಂತರವಾಗಿ ನಮ್ಮನ್ನು ವಿಭಜಿಸುವ ಅಂಶಗಳನ್ನು ನೋಡುತ್ತಿದ್ದೇವೆ ಎಂದು ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ಹೇಳಿದ್ದಾರೆ. ಟೈಮ್ಸ್ ನೆಟ್‌ವರ್ಕ್ ಗ್ರೂಪ್ ಎಡಿಟರ್ ಮತ್ತು ಟೈಮ್ಸ್ ನೌ ನವಭಾರತದ ಪ್ರಧಾನ ಸಂಪಾದಕರಾದ ನವಿಕಾ ಕುಮಾರ್ ಅವರೊಂದಿಗೆ ಸೋಮವಾರ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸದ್ಗುರು ಜಗ್ಗಿ ವಾಸುದೇವ್ ಹಿಜಾಬ್ ವಿವಾದದ (hijab controversy) ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಶಾಲೆಗಳಲ್ಲಿ ಡ್ರೆಸ್ ಕೋಡ್‌ನಲ್ಲಿ ಏಕರೂಪತೆ ಇರಬೇಕೇ ಎಂಬ ಪ್ರಶ್ನೆಗೆ “ನೀವು ಹಿಜಾಬ್, ಬುರ್ಖಾ, ಸೀರೆ ಅಥವಾ ನೀವು ತಿನ್ನುವ ಯಾವುದೇ ವಸ್ತು, ಅದು ಖಿಚಡಿ ಅಥವಾ ಬಿರಿಯಾನಿ … ಎಲ್ಲವೂ ಮಣ್ಣಿನಿಂದ ಬರುತ್ತದೆ. ಆದ್ದರಿಂದ ಮಣ್ಣು ಅದ್ಭುತವಾಗಿ ಒಂದುಗೂಡಿಸುವ ಶಕ್ತಿಯಾಗಿದೆ ಎಂದಿದ್ದಾರೆ.  “ನಮ್ಮನ್ನು ಒಟ್ಟಿಗೆ ಸೇರಿಸುವ ಜೀವನದ ಅಂಶಗಳನ್ನು ನೋಡುವ ಬದಲು, ನಾವು ನಿರಂತರವಾಗಿ ನಮ್ಮನ್ನು ವಿಭಜಿಸುವ ಅಂಶಗಳನ್ನು ನೋಡುತ್ತಿದ್ದೇವೆ. ಮಣ್ಣು ಸಾರ್ವತ್ರಿಕ ವಸ್ತುವಾಗಿದೆ. ನೀವು ಯಾರು, ಯಾವ ಧರ್ಮ, ಜನಾಂಗ, ರಾಷ್ಟ್ರೀಯತೆಗೆ ಸೇರಿದವರು ಎಂಬುದು ಮುಖ್ಯವಲ್ಲ. ನೀವು ಮಣ್ಣಿನಿಂದ ಬಂದವರು ನೀವು ಮರಳಿ ಮಣ್ಣಿಗೆ ಹೋಗುತ್ತೀರಿ, ಆದ್ದರಿಂದ ಇದು ಒಂದು ಪ್ರಮುಖ ಒಗ್ಗೂಡಿಸುವ ಮೂಲವಾಗಬಹುದು ”ಎಂದು ಇಶಾ ಫೌಂಡೇಶನ್ ಸಂಸ್ಥಾಪಕರು ಹೇಳಿದರು.

ಹಿಂದಿನ ಪೀಳಿಗೆಯವರು ಬದುಕಿದ ಪೂರ್ವಗ್ರಹಗಳೊಂದಿಗೆ ಮಕ್ಕಳು ಬೆಳೆಯಬಾರದು ಎಂದು ಸದ್ಗುರು ಒತ್ತಿ ಹೇಳಿದ್ದಾರೆ.

ಹಿಜಾಬ್ ವಿವಾದದಲ್ಲಿ ರಾಜಕೀಯ ತೊಡಗಿಸಿಕೊಂಡಿರುವ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಅವರು “ನೀವು ಶಾಲೆಗಳಲ್ಲಿದ್ದಾಗ ನಿಮ್ಮನ್ನು ಮಗು ಎಂದು ಪರಿಗಣಿಸಲಾಗುತ್ತದೆ. ಮಗುವಿಗೆ ವಿಭಜನೆಯ ವಿಷವನ್ನುಣಿಸಬಾರದು. ನೀವು ಮುಕ್ತವಾಗಿ ಬೆಳೆಯಲು ಬಿಡಬೇಕು.

ಹಿಂದಿನ ಪೀಳಿಗೆಯ ಜನರದ್ದೇ ಮಾದರಿಯಲ್ಲಿ ಮಕ್ಕಳು ಬೆಳೆಯಬೇಕಾಗಿಲ್ಲ ಎಂಬುದು ಬಹಳ ಮುಖ್ಯ. ನಮ್ಮಲ್ಲಿ ಯಾವುದೇ ಪೂರ್ವಗ್ರಹಗಳು, ಸಮಸ್ಯೆಗಳು, ದ್ವೇಷ ಅಥವಾ ಪ್ರೀತಿ ಇರಲಿ, ಇದನ್ನು ಮಕ್ಕಳ ಮೇಲೆ ಬಲವಂತವಾಗಿ ಹೇರಬಾರದು. ಮುಂದಿನ ಪೀಳಿಗೆಗೆ ನಾವು ಸೀಮಿತವಾಗಿರಬಾರದು ಮತ್ತು ಮಕ್ಕಳು ನೀವು ಬದುಕಿದ ಪೂರ್ವಾಗ್ರಹಗಳೊಂದಿಗೆ ಬೆಳೆಯಬಾರದು ಎಂದು ಸಂದರ್ಶನದಲ್ಲಿ ಸದ್ಗುರು ಹೇಳಿದ್ದಾರೆ.

ಇದನ್ನೂ ಓದಿಎಲ್ಲಾ ಧರ್ಮದ ಜನರು ಶಾಲಾ ಸಮವಸ್ತ್ರವನ್ನು ಒಪ್ಪಿಕೊಳ್ಳಬೇಕು: ಗೃಹ ಸಚಿವ ಅಮಿತ್ ಶಾ

ಗೆಸ್ಟ್​ ಹೌಸ್​​ನಲ್ಲೇ ತಮ್ಮ ಮಗನನ್ನು ಭೇಟಿಯಾದ ಬಸನಗೌಡ ಯತ್ನಾಳ್
ಗೆಸ್ಟ್​ ಹೌಸ್​​ನಲ್ಲೇ ತಮ್ಮ ಮಗನನ್ನು ಭೇಟಿಯಾದ ಬಸನಗೌಡ ಯತ್ನಾಳ್
VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ
ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ
ಇದು ಸಂಭ್ರಮಿಸುವ ಟೈಮಲ್ಲ, ಯತ್ನಾಳ್ ಕೊರತೆ ನೀಗಿಸುವೆಡೆ ಯೋಚಿಸಬೇಕು: ಸಂಸದ
ಇದು ಸಂಭ್ರಮಿಸುವ ಟೈಮಲ್ಲ, ಯತ್ನಾಳ್ ಕೊರತೆ ನೀಗಿಸುವೆಡೆ ಯೋಚಿಸಬೇಕು: ಸಂಸದ
ನನಗೂ ನೋಟೀಸ್ ಜಾರಿಯಾಗಿದೆ, ಸಮರ್ಪಕ ಉತ್ತರ ನೀಡುತ್ತೇನೆ: ಸೋಮಶೇಖರ್
ನನಗೂ ನೋಟೀಸ್ ಜಾರಿಯಾಗಿದೆ, ಸಮರ್ಪಕ ಉತ್ತರ ನೀಡುತ್ತೇನೆ: ಸೋಮಶೇಖರ್
ಸಿಎಂ ಆಗಲು ಕುಮಾರಸ್ವಾಮಿ ಬೆಂಬಲ ಕೇಳಿರಬಹುದು ಸತೀಶ್: ಜಿಟಿಡಿ
ಸಿಎಂ ಆಗಲು ಕುಮಾರಸ್ವಾಮಿ ಬೆಂಬಲ ಕೇಳಿರಬಹುದು ಸತೀಶ್: ಜಿಟಿಡಿ
ಏರ್ ಕಂಪ್ರೆಸರ್ ಬ್ರೇಕ್​ಗಳು ಏರ್ ಲೀಕಾಗುತ್ತಿದ್ದರೆ ಬ್ರೇಕ್ ಹತ್ತಲ್ಲ?
ಏರ್ ಕಂಪ್ರೆಸರ್ ಬ್ರೇಕ್​ಗಳು ಏರ್ ಲೀಕಾಗುತ್ತಿದ್ದರೆ ಬ್ರೇಕ್ ಹತ್ತಲ್ಲ?
ಕೊಲೆ ಆರೋಪಿಗೆ ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಾತಿಥ್ಯ
ಕೊಲೆ ಆರೋಪಿಗೆ ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಾತಿಥ್ಯ
ತೆಲಂಗಾಣದಲ್ಲಿ ನಿರ್ಮಾಣ ಹಂತದ ಆರು ಅಂತಸ್ತಿನ ಕಟ್ಟಡ ಕುಸಿತ
ತೆಲಂಗಾಣದಲ್ಲಿ ನಿರ್ಮಾಣ ಹಂತದ ಆರು ಅಂತಸ್ತಿನ ಕಟ್ಟಡ ಕುಸಿತ
Daily Devotional: ಪೂಜೆ ಮಾಡುವಾಗ ದೇವರ ಮನೆಯಲ್ಲಿ ಹೂ ಬಿದ್ರೆ ಏನರ್ಥ?
Daily Devotional: ಪೂಜೆ ಮಾಡುವಾಗ ದೇವರ ಮನೆಯಲ್ಲಿ ಹೂ ಬಿದ್ರೆ ಏನರ್ಥ?