ನಂದಿಬೆಟ್ಟದ ಬಳಿ ಸದ್ಗುರು ಜಗ್ಗಿ ವಾಸುದೇವ್ ಪ್ರತ್ಯಕ್ಷ; ಜಿಲ್ಲಾಡಳಿತ ಸಾಥ್​, ಬೆಟ್ಟಕ್ಕೆ ನೀರು ಹೊತ್ತ ಇಶಾ ಫೌಂಡೇಷನ್ ಅನುಯಾಯಿಗಳು

Sadhuguru Jaggi Vasudev: ನಂದಿ ಗಿರಿಧಾಮದ ಬಳಿ ಹಸಿರುಕರಣ ಕಾರ್ಯಕ್ರಮದಲ್ಲಿ ನೂರಾರು ಜನ ಸದ್ಗುರು ಭಕ್ತರು ಭಾಗಿಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ ಆರ್ ಮತ್ತು ಪೊಲೀಸ್​ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಪಾಲ್ಗೊಂಡಿದ್ದಾರೆ.

ನಂದಿಬೆಟ್ಟದ ಬಳಿ ಸದ್ಗುರು ಜಗ್ಗಿ ವಾಸುದೇವ್ ಪ್ರತ್ಯಕ್ಷ; ಜಿಲ್ಲಾಡಳಿತ ಸಾಥ್​, ಬೆಟ್ಟಕ್ಕೆ ನೀರು ಹೊತ್ತ ಇಶಾ ಫೌಂಡೇಷನ್ ಅನುಯಾಯಿಗಳು
ನಂದಿಬೆಟ್ಟದ ಬಳಿ ಸದ್ಗುರು ಜಗ್ಗಿ ವಾಸುದೇವ್ ಪ್ರತ್ಯಕ್ಷ; ಜಿಲ್ಲಾಡಳಿತ ಸಾಥ್​
Follow us
TV9 Web
| Updated By: ಸಾಧು ಶ್ರೀನಾಥ್​

Updated on:Sep 18, 2021 | 12:14 PM

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮದ ಬಳಿ ಆಧ್ಯಾತ್ಮಿಕ ಸದ್ಗುರು ಜಗ್ಗಿ ವಾಸುದೇವ್ ಪ್ರತ್ಯಕ್ಷರಾಗಿದ್ದಾರೆ. ಬೆಟ್ಟದ ಬಳಿ ಹಸಿರುಕರಣಕ್ಕೆ ಚಾಲನೆ ನೀಡಿದ್ದಾರೆ. ಸಸಿ ನೆಡುವುದರ ಮೂಲಕ ಹಸಿರುಕರಣಕ್ಕೆ ಚಾಲನೆ ನೀಡಲಾಗಿದೆ. ಹಸಿರುಕರಣ ಕಾರ್ಯಕ್ರಮದಲ್ಲಿ ನೂರಾರು ಜನ ಸದ್ಗುರು ಭಕ್ತರು ಭಾಗಿಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ ಆರ್ ಮತ್ತು ಪೊಲೀಸ್​ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಪಾಲ್ಗೊಂಡಿದ್ದಾರೆ.

ಇಶಾ ಫೌಂಡೇಷನ್ ಸಂಸ್ಥಾಪಕ, ಆಧ್ಯಾತ್ಮ ಹಾಗೂ ಯೋಗ ಗುರು ಜಗ್ಗಿ ವಾಸುದೇವ್ ಅವರು ಪ್ರೇಮಿಗಳ ಅಚ್ಚುಮೆಚ್ಚಿನ ತಾಣ, ಪ್ರೇಮಿಗಳ ಸ್ವರ್ಗ, ಪ್ರಕೃತಿ ಪ್ರಿಯರ ನೆಚ್ಚಿನ ತಾಣ ಎಂದೆ ಖ್ಯಾತಿಯಾಗಿರುವ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗಿರಿಧಾಮದಲ್ಲಿ ಇಂದು ಬೆಳ್ಳಂಬೆಳಗ್ಗೆ ಪ್ರತ್ಯಕ್ಷರಾದರು. ತಮ್ಮ ನೂರಾರು ಜನ ಅನುಯಾಯಿಗಳ ಜೊತೆ ಗಿರಿಧಾಮದ ಬುಡದಲ್ಲಿ ಆಗಮಿಸಿ ಪ್ರಕೃತಿ ಜೊತೆ ಕೆಲಕಾಲ ಹಾಡಿ ನಲಿದರು. ಗಿರಿಧಾಮದ ಅರಣ್ಯದಲ್ಲಿ ಖಾಲಿ ಇರುವ ಜಾಗವನ್ನು ಹಸಿರುಮಯ ಮಾಡಲು ಮುಂದಾಗಿರುವ ಸದ್ಗುರು ಜಗ್ಗಿ ವಾಸುದೇವ್, ತಮ್ಮ ಫೌಂಡೇಷನ್ ನಿಂದ ಇಂದು ನೆಲ್ಲಿ ಆಲ, ನಿಂಬೆ, ಹೊಂಬೆ, ಬೇವು, ಮಾವಿನ ಇನ್ನೂರಕ್ಕೂ ಹೆಚ್ಚು ಸಸಿಗಳನ್ನು ಗಿರಿಧಾಮಕ್ಕೆ ತಂದಿದ್ದರು.

ನಂದಿಗಿರಿಧಾಮದಲ್ಲಿ ಹಸಿರುಕರಣಕ್ಕೆ ಚಾಲನೆ: ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮಕ್ಕೆ ಹೊಂದಿಕೊಂಡಿರುವ ಪಂಚಗಿರಿಗಳ ಸಾಲನ್ನು ಹಸಿರುಕರಣ ಮಾಡಲು ಮುಂದಾಗಿರುವ ಇಶಾ ಫೌಂಡೇಷನ್ ಸಂಸ್ಥಾಪಕ ಜಗ್ಗಿ ವಾಸುದೇವ್, ತಮ್ಮ ಅನಿಯಾಯಿಗಳ ಜೊತೆ ಅರಣ್ಯದ ಖಾಲಿ ಜಾಗ ಗುರ್ತಿಸಿ, ಅಲ್ಲಿ ಇನ್ನೂರಕ್ಕೂ ಹೆಚ್ಚು ಗುಂಡಿಗಳನ್ನು ತೆಗೆಸಿದ್ರು. ಗಿರಿಧಾಮಕ್ಕೆ ಆಗಮಿಸಿದ ಸದ್ಗುರು, ಪ್ರಕೃತಿ ರಕ್ಷಣೆ, ಪ್ರಕೃತಿ ಮಹತ್ವದ ಬಗ್ಗೆ ತಮ್ಮ ಅನುಯಾಯಿಗಳಿಗೆ ಕೆಲಕಾಲ ಪ್ರವಚನ ನೀಡಿದ್ರು. ನಂತರ ಪ್ರತಿಯೊಬ್ಬರೂ ಪ್ರಕೃತಿ ರಕ್ಷಣೆಗೆ ತಮ್ಮ ಕೈಲಾದ ಸೇವೆ ಮಾಡುವಂತೆ ಕರೆ ನೀಡಿದ್ರು. ನಂತರ ಗಿರಿಧಾಮದಲ್ಲಿ ನಿಂಬೆ ಗಿಡ ನಾಟಿ ಮಾಡುವುದರ ಮೂಲಕ ಹಸಿರುಕರಣಕ್ಕೆ ಚಾಲನೆ ನೀಡಿದ್ರು.

ಇಶಾ ಫೌಂಡೇಷನ್ ಗೆ ಜಿಲ್ಲಾಡಳಿತ ಸಾಥ್: ನಂದಿಗಿರಿಧಾಮ ಪಂಚಗಿರಿಗಳ ಸಾಲಿನಲ್ಲಿ ಹಸಿರುಕರಣ ಮಾಡಲು ಮುಂದಾಗಿರುವ ಇಶಾ ಫೌಂಡೇಷನ್ ಅನುಯಾಯಿಗಳಿಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಸಾಥ್ ನೀಡಿದ್ದು, ಸ್ವತಃ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ ಆರ್, ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಉಪ ಅರಣ್ಯಸಂರಕ್ಷಣಾಧಿಕಾರಿ ಅರಸಲನ್ ಸೇರಿದಂತೆ ಸ್ಥಳಿಯ ಅರಣ್ಯಾಧಿಕಾರಿಗಳು ಸಿಬ್ಬಂದಿ, ಹಸಿರುಕರಣಕ್ಕೆ ಸಾಥ್ ನೀಡಿದ್ರು.

ಬೆಟ್ಟದಲ್ಲಿ ನೀರು ಹೊತ್ತ ಇಶಾ ಅನುಯಾಯಿಗಳು: ನಂದಿ ಗಿರಿಧಾಮದ ಬುಡದಲ್ಲಿ ಕೆಲವರು ಗುಂಡಿ ತೆಗೆದು ತರಹೇವಾರಿ ಸಸಿಗಳನ್ನು ನಾಟಿ ಮಾಡಿದ್ರು. ಇನ್ನೂ ಕೆಲವರು ರಸ್ತೆಯಲ್ಲಿ ನಿಲ್ಲಿಸಿದ್ದ ಟ್ಯಾಂಕರ್ ನಿಂದ ಬಿಂದಿಗೆಯಲ್ಲಿ ನೀರು ಹೊತ್ತುತಂದು ಬೆಟ್ಟದಲ್ಲಿ ನೂತನವಾಗಿ ನಾಟಿ ಮಾಡಿದ ಸಸಿಗಳಿಗೆ ನೀರು ಹಾಕಿ ಸಂತಸಪಟ್ಟರು. ಬಹುತೇಕರು ಐಟಿ, ಬಿಟಿ ಸಾಫ್ಟ್​​ವೇರ್ ಇಂಜಿನಿಯರ್ ಗಳೆ ಇದ್ದ ಕಾರಣ ಪ್ರಥಮ ಬಾರಿಗೆ ಗಿರಿಧಾಮದಲ್ಲಿ ನಡೆದಾಡಿ ಸಸಿ ನಾಟಿ ಮಾಡಿ ತಮ್ಮ ಖುಷಿ ಹಂಚಿಕೊಂಡರು.

ಪ್ರೇಮಿಗಳ ಬದಲು ಇಶಾ ಕಲರವ: ಪ್ರತಿದಿನ ಪ್ರೇಮಿಗಳು ಪ್ರಕೃತಿ ಪ್ರಿಯರು ಹಾಗೂ ಪುಂಡರಿಂದ ತುಂಬುತ್ತಿದ್ದ ನಂದಿ ಗಿರಿಧಾಮದಲ್ಲಿ ಇಂದು ಗಿಡ ಮರ ಬಳ್ಳಿ ಹುಲ್ಲಗಾವಲಿನ ಮಧ್ಯೆ ಇಶಾ ಫೌಂಡೇಷನ್ ನ ಸದ್ಗುರು ವಾಸುದೇವ್ ರ ಅನುಯಾಯಿಗಳು ಸಂತಸ ಸಂಭ್ರಮದಿಂದ ಸಸಿಗಳನ್ನು ನಾಟಿ ಮಾಡಿದರು. ಸಸಿಗಳ ನಾಟಿಯಲ್ಲಿ ಆಧ್ಯಾತ್ಮ ಹಾಗೂ ಸೇವಾ ಮನೋಭಾವ ಇದ್ದ ಕಾರಣ ಕೀಲೋ ಮೀಟರ್ ಗಟ್ಟಲೆ ಬಿಂದಿಗೆಯಲ್ಲಿ ನೀರು ಹೊತ್ತರೂ ಯಾರಿಗೂ ಧಣಿವಾಗಲಿಲ್ಲ.

ನಂದಿ ಗಿರಿಧಾಮದಲ್ಲಿ ಯಾಕೆ ಹಸಿರುಕರಣ?: ಇತ್ತಿಚಿನ ದಿನಗಳಲ್ಲಿ ನಂದಿ ಗಿರಿಧಾಮಕ್ಕೆ ಬಂದು ಹೋಗುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಪ್ರಕೃತಿ ಸವಿಯುವುದರ ಬದಲು ಪ್ರಕೃತಿ ಹಾಳು ಮಾಡುವ ಕಾಯಕ ನಡೆಯುತ್ತಿದೆ, ಮತ್ತೊಂದೆಡೆ ಗಿರಿಧಾಮದ ಸುತ್ತಲೂ ಎಲ್ಲಿ ನೋಡಿದರೂ ವಸತಿ ಬಡಾವಣೆಗಳು ತಲೆ ಎತ್ತಿವೆ. ಇದ್ರಿಂದ ಪ್ರಕೃತಿ ರಕ್ಷಣೆ ಮಾಡಬೇಕಾದ ಕೆಲಸ ನಮ್ಮೆಲ್ಲರ ಮೇಲಿದೆ. ದೇವರು ದೇವಸ್ಥಾನದಲ್ಲಿ ಅಷ್ಟೆ ಅಲ್ಲದೆ, ಪ್ರಕೃತಿಯ ಗಿಡ ಮರಗಳಲ್ಲಿಯೂ ಇದ್ದಾನೆ. ಪ್ರಕೃತಿಯನ್ನು ಹಾಳು ಮಾಡೋದು ಬೇಡ. ಆದಷ್ಟೂ ರಕ್ಷಣೆ ಮಾಡೋಣ. ಬೆಂಗಳೂರಿಗೆ ಹತ್ತಿರ ಇರುವ ಕಾರಣ ಇಶಾ ಫೌಂಡೇಷನ್ ನಿಂದ ಸಾವಿರಾರು ಸ್ವಯಂ ಸೇವಕರನ್ನು ರೆಡಿ ಮಾಡಿ ಗಿರಿಸಾಲುಗಳನ್ನು ಹಸಿರುಮಯ ಮಾಡೋಣ ಎಂದು ಸದ್ಗುರು ತಿಳಿಸಿದರು.

-ಭೀಮಪ್ಪ ಪಾಟೀಲ್

sadhuguru jaggi vasudev at nandi hills for afforestation chikkaballapur administration accompany him

ಆಧ್ಯಾತ್ಮಿಕ ಸದ್ಗುರು ಜಗ್ಗಿ ವಾಸುದೇವ್ ತಂಡದಿಂದ ‘ನಮ್ಮ ನಂದಿ‘ ಕಾರ್ಯಕ್ರಮದಡಿ ನಂದಿ ಗಿರಿಧಾಮದ ಬಳಿ ಹಸಿರುಕರಣ

ಇದನ್ನೂ ಓದಿ: ಟೆಕ್ ಸಮಿಟ್​ನಲ್ಲಿ ಪ್ರತ್ಯಕ್ಷರಾದ ಸದ್ಗುರು.. ಟೆಕ್ಕಿಗಳಿಗೆ ಹೇಳಿದ ಕಿವಿಮಾತು ಏನು? (sadhuguru jaggi vasudev at nandi hills for afforestation chikkaballapur administration accompany him)

Nandihills ಬಳಿ ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ ಪ್ರತ್ಯಕ್ಷ, ವಿಡಿಯೋ ನೋಡಿ

Published On - 8:41 am, Sat, 18 September 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ