ಟೆಕ್ ಸಮಿಟ್​ನಲ್ಲಿ ಪ್ರತ್ಯಕ್ಷರಾದ ಸದ್ಗುರು.. ಟೆಕ್ಕಿಗಳಿಗೆ ಹೇಳಿದ ಕಿವಿಮಾತು ಏನು?

ಟೆಕ್ ಸಮಿಟ್​ನಲ್ಲಿ ಪ್ರತ್ಯಕ್ಷರಾದ ಸದ್ಗುರು.. ಟೆಕ್ಕಿಗಳಿಗೆ ಹೇಳಿದ ಕಿವಿಮಾತು ಏನು?

ನೀವೊಂದು ಅಮೀಬಾ ಆಗಿದ್ದರೆ ಸಿಟ್ಟು, ಸ್ಪರ್ಧೆ, ಭಯಗಳು ಕಾಡುತ್ತಿದ್ದವೆ? ಇಂಥದ್ದೊಂದು ಪ್ರಶ್ನೆ ಕೇಳಿದವರು ಮತ್ಯಾರೂ ಅಲ್ಲ, ಸದ್ಗುರು. ಹೌದು, ಬೆಂಗಳೂರು ಟೆಕ್ ಸಮಿಟ್ Bengaluru Tech Summit 2020 ಕೊನೆಯ ದಿನದ ಬೆಳ್ಳಂಬೆಳಿಗ್ಗೆ ಸದ್ಗುರು ಪ್ರತ್ಯಕ್ಷರಾಗಿದ್ದರು. ತಂತ್ರಜ್ಞಾನಕ್ಕೆ ಮಾನವೀಯತೆ ಕಲಿಸೋಣ! ನಮ್ಮ ದೇಹವೇ ಇದುವರೆಗಿನ ಅತಿ ದೊಡ್ಡ ತಂತ್ರಜ್ಞಾನ. ಈ ತಂತ್ರಜ್ಞಾನವನ್ನು ಅರಿತರೆ ಮಾತ್ರ ಏನನ್ನು ಬೇಕಾದರೂ ಸಾಧಿಸಬಹುದು. ಭಯದ ನೆರಳಲ್ಲೇ ಪ್ರತಿ ಕ್ಷಣ ಕಳೆಯುತ್ತಿದ್ದೇವೆ. ಪುಟ್ಟ ಪುಟ್ಟ ಮಕ್ಕಳನ್ನು ನೋಡಿ, ಯಾವ ಆತಂಕವಿಲ್ಲ, ಭಯವಿಲ್ಲ. ಅವರು […]

sadhu srinath

|

Nov 21, 2020 | 3:00 PM

ನೀವೊಂದು ಅಮೀಬಾ ಆಗಿದ್ದರೆ ಸಿಟ್ಟು, ಸ್ಪರ್ಧೆ, ಭಯಗಳು ಕಾಡುತ್ತಿದ್ದವೆ? ಇಂಥದ್ದೊಂದು ಪ್ರಶ್ನೆ ಕೇಳಿದವರು ಮತ್ಯಾರೂ ಅಲ್ಲ, ಸದ್ಗುರು. ಹೌದು, ಬೆಂಗಳೂರು ಟೆಕ್ ಸಮಿಟ್ Bengaluru Tech Summit 2020 ಕೊನೆಯ ದಿನದ ಬೆಳ್ಳಂಬೆಳಿಗ್ಗೆ ಸದ್ಗುರು ಪ್ರತ್ಯಕ್ಷರಾಗಿದ್ದರು.

ತಂತ್ರಜ್ಞಾನಕ್ಕೆ ಮಾನವೀಯತೆ ಕಲಿಸೋಣ! ನಮ್ಮ ದೇಹವೇ ಇದುವರೆಗಿನ ಅತಿ ದೊಡ್ಡ ತಂತ್ರಜ್ಞಾನ. ಈ ತಂತ್ರಜ್ಞಾನವನ್ನು ಅರಿತರೆ ಮಾತ್ರ ಏನನ್ನು ಬೇಕಾದರೂ ಸಾಧಿಸಬಹುದು. ಭಯದ ನೆರಳಲ್ಲೇ ಪ್ರತಿ ಕ್ಷಣ ಕಳೆಯುತ್ತಿದ್ದೇವೆ. ಪುಟ್ಟ ಪುಟ್ಟ ಮಕ್ಕಳನ್ನು ನೋಡಿ, ಯಾವ ಆತಂಕವಿಲ್ಲ, ಭಯವಿಲ್ಲ. ಅವರು ನಮಗೆ ಮಾದರಿಯಾಗಬೇಕು. ತಂತ್ರಜ್ಞಾನ ನಮ್ಮ ಮನಸ್ಸನ್ನು ಅರಳಿಸಬೇಕು. ತಂತ್ರಜ್ಞಾನಕ್ಕೆ ಮಾನವೀಯತೆ ಕಲಿಸಬೇಕು ಎಂದರು.

ಸೂಪರ್ ಕಂಪ್ಯೂಟರ್ ಸಹ ಏನಲ್ಲ.. ನಾವು ಅಮೀಬಾ ಆಗಿದ್ದರೆ ಅಸ್ಮಿತೆಯ ಕುರಿತು ಯೋಚಿಸಲು ಅವಕಾಶವೇ ಇರುತ್ತಿರಲಿಲ್ಲ. ಕೃತಕ ಬುದ್ಧಿಮತ್ತೆಯಿಂದ ನೈತಿಕತೆ, ಮಾನವೀಯತೆಯ ಕೊರತೆ ಉಂಟಾಗುತ್ತಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಮೊದಲು ಅಮೀಬಾದಂತಹ ಏಕಕೋಶ ಜೀವಿಯಿತ್ತು.

ನಿಧಾನವಾಗಿ ಮನುಷ್ಯನಂತಹ ಸಂಕೀರ್ಣ ದೇಹದವರೆಗೆ ಜೈವಿಕತೆ ಬೆಳೆದಿದೆ. ನಮ್ಮ ದೇಹದ ಮುಂದೆ ಸೂಪರ್ ಕಂಪ್ಯೂಟರ್ ಸಹ ಸಣ್ಣದೇ. ನಮ್ಮ ಬುದ್ಧಿಮತ್ತೆ, ನಮ್ಮ ನಮ್ಮೊಳಗೇ ಹುಟ್ಟುವ ಸ್ಪರ್ಧೆ, ಕ್ಷುಲ್ಲಕತೆಗಳಿಂದ ದೇಹದ ತಂತ್ರಜ್ಞಾನವನ್ನು ಹಾಳುಗೆಡವುತ್ತಿದ್ದೇವೆ ಎಂದು ತಿಳಿಸಿದರು.

ಇದ್ದಷ್ಟು ದಿನ ಖುಷಿಯಾಗಿ.. ತಂತ್ರಜ್ಞಾನದಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ. ಆದರೆ ನಮಗೆ ಅದರ ಬಳಕೆ ಮಾಡುವ ಮನಸ್ಥಿತಿಯಿರಲಿಲ್ಲ. ಕೊವಿಡ್ ಪಿಡುಗು ವೈಯಕ್ತಿಕ ಕಾಳಜಿಗೆ ಒತ್ತು ನೀಡುವುದನ್ನು ಕಲಿಸಿದೆ. ವೈಯಕ್ತಿಕ ಕಾಳಜಿ ಎಂದರೆ ನಿಧಾನವಾಗಿ ನಮ್ಮ ದೇಹದ ತಂತ್ರಜ್ಞಾನ ಅರಿಯುತ್ತಾ ಹೋಗುವುದೇ..ಇದ್ದಷ್ಟು ದಿನ ಖುಷಿಯಾಗಿ ಬದುಕುವುದೇ ತಂತ್ರಜ್ಞಾನದ ಸದುಪಯೋಗ ಪಡೆಯುವ ಮಾರ್ಗ ಎಂದು ಅವರು ವಿವರಿಸಿದರು.

Follow us on

Related Stories

Most Read Stories

Click on your DTH Provider to Add TV9 Kannada