ಎಲ್ಲಾ ಧರ್ಮದ ಜನರು ಶಾಲಾ ಸಮವಸ್ತ್ರವನ್ನು ಒಪ್ಪಿಕೊಳ್ಳಬೇಕು: ಗೃಹ ಸಚಿವ ಅಮಿತ್ ಶಾ
ಅಂತಿಮವಾಗಿ, ದೇಶವು ಸಂವಿಧಾನದ ಮೇಲೆ ಅಥವಾ ಆಶಯಗಳ ಮೇಲೆ ಕಾರ್ಯನಿರ್ವಹಿಸುತ್ತದೆಯೇ ಎಂಬುದನ್ನು ನಿರ್ಧರಿಸಬೇಕು. ನನ್ನ ವೈಯಕ್ತಿಕ ನಂಬಿಕೆಯು ನ್ಯಾಯಾಲಯವು ನಿರ್ಧಾರವನ್ನು ತೆಗೆದುಕೊಳ್ಳುವವರೆಗೆ ಮಾತ್ರ ಉಳಿದಿದೆ ಮತ್ತು ನ್ಯಾಯಾಲಯವು ನಿರ್ಧಾರವನ್ನು ನೀಡಿದ ನಂತರ ನಾನು ಅದನ್ನು ಒಪ್ಪಿಕೊಳ್ಳಬೇಕು.
ದೆಹಲಿ: ಯಾವುದೇ ಧಾರ್ಮಿಕ ಉಡುಗೆಗಿಂತ ಶಾಲೆಯಲ್ಲಿ ವಿದ್ಯಾರ್ಥಿಗಳು ಸಮವಸ್ತ್ರವನ್ನು ಧರಿಸುವುದರ ಬಗ್ಗೆ ಒಲವು ತೋರಿದ್ದಾರೆ ಗೃಹ ಸಚಿವ ಅಮಿತ್ ಶಾ (Amit Shah). ಆದರೆ ಕರ್ನಾಟಕ ರಾಜ್ಯದ ಶಾಲೆಗಳಲ್ಲಿ ಹಿಜಾಬ್ (Hijab) ಅನ್ನು ನಿಷೇಧಿಸುವ ಬಗ್ಗೆ ನ್ಯಾಯಾಲಯವು ನಿರ್ಧರಿಸಿದ ನಂತರ ಈ ನಿಲುವು ಬದಲಾಗಬಹುದು ಎಂದು ಅವರು ಹೇಳಿದ್ದಾರೆ. ಫೆಬ್ರವರಿ 5 ರಂದು ಕರ್ನಾಟಕವು ವಿಧಿಸಿದ ಶಾಲೆಗಳಲ್ಲಿ ಹಿಜಾಬ್ ನಿಷೇಧವು ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಪೋಷಕರ ಪ್ರತಿಭಟನೆಗೆ ಕಾರಣವಾಗಿದೆ. ಈ ನಡುವೆ ಹಿಂದೂ ವಿದ್ಯಾರ್ಥಿಗಳೂ ಹಿಜಾಬ್ ವಿರುದ್ಧ ಪ್ರತಿಭಟನೆ (Hijab row) ನಡೆಸಿದ್ದರು. ಈ ತಿಂಗಳ ಆರಂಭದಲ್ಲಿ ಕರ್ನಾಟಕದ ಶಾಲೆಗಳನ್ನು ಮುಚ್ಚಲಾಗಿತ್ತು. ದೇಶದ 1.35 ಶತಕೋಟಿ ಜನಸಂಖ್ಯೆಯ ಸುಮಾರು 13 ಪ್ರತಿಶತದಷ್ಟು ಇರುವ ಮುಸ್ಲಿಮರು, ಕೂದಲು ಮತ್ತು ಕುತ್ತಿಗೆಯನ್ನು ಆವರಿಸುವ ಮುಸ್ಲಿಂ ಮಹಿಳೆಯರು ಧರಿಸುವ ಸಾಂಪ್ರದಾಯಿಕ ಉಡುಗೆಯಾದ ಹಿಜಾಬ್‌ನ ಮೇಲಿನ ನಿರ್ಬಂಧಗಳನ್ನು ಖಂಡಿಸಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ರಾತ್ರಿ ಪ್ರಸಾರವಾಗಲಿರುವ ನೆಟ್‌ವರ್ಕ್ 18 ಗ್ರೂಪ್‌ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯದ ಕುರಿತು ಮಾತನಾಡಿದ್ದು ನ್ಯಾಯಾಲಯದ ತೀರ್ಪನ್ನು ಸ್ವೀಕರಿಸುವುದಾಗಿ ಹೇಳಿದ್ದಾರೆ. ಎಲ್ಲಾ ಧರ್ಮದವರೂ ಶಾಲೆಯ ಡ್ರೆಸ್ ಕೋಡ್ ಅನ್ನು ಒಪ್ಪಿಕೊಳ್ಳಬೇಕು ಎಂಬುದು ನನ್ನ ವೈಯಕ್ತಿಕ ನಿಲುವು ಎಂದು ಅವರು ಹೇಳಿದರು.
“ಅಂತಿಮವಾಗಿ, ದೇಶವು ಸಂವಿಧಾನದ ಮೇಲೆ ಅಥವಾ ಆಶಯಗಳ ಮೇಲೆ ಕಾರ್ಯನಿರ್ವಹಿಸುತ್ತದೆಯೇ ಎಂಬುದನ್ನು ನಿರ್ಧರಿಸಬೇಕು. ನನ್ನ ವೈಯಕ್ತಿಕ ನಂಬಿಕೆಯು ನ್ಯಾಯಾಲಯವು ನಿರ್ಧಾರವನ್ನು ತೆಗೆದುಕೊಳ್ಳುವವರೆಗೆ ಮಾತ್ರ ಉಳಿದಿದೆ ಮತ್ತು ನ್ಯಾಯಾಲಯವು ನಿರ್ಧಾರವನ್ನು ನೀಡಿದ ನಂತರ ನಾನು ಅದನ್ನು ಒಪ್ಪಿಕೊಳ್ಳಬೇಕು ಮತ್ತು ಎಲ್ಲರೂ ಅದನ್ನು ಒಪ್ಪಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಈ ವಿಷಯದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಒಳಗೊಳ್ಳುವಿಕೆಯ ಬಗ್ಗೆ ಕೇಳಲಾದ ಪ್ರಶ್ನೆಗೆ, ಅಮಿತ್ ಶಾ ಅವರು “ಈ ಜನರು ತಮ್ಮ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಹೊಂದಿರಬಹುದು, ಆದರೆ ಅವರ ಉದ್ದೇಶಗಳು ಕಾರ್ಯರೂಪಕ್ಕೆ ಬರುವುದಿಲ್ಲ ಎಂದು ನಾನು ಹೇಳುತ್ತೇನೆ. ನ್ಯಾಯಾಲಯದ ತೀರ್ಪು ಬಂದ ನಂತರ ಭಾರತದ ಜನರು ಅದನ್ನು ಸ್ವೀಕರಿಸುತ್ತಾರೆ ಎಂದಿದ್ದಾರೆ,
ಕರ್ನಾಟಕದಲ್ಲಿ ಫೆಬ್ರವರಿ 19 ರಂದು ಮಧ್ಯಂತರ ನ್ಯಾಯಾಲಯದ ಆದೇಶದ ಹೊರತಾಗಿಯೂ ರಾಜ್ಯದ ಹಲವೆಡೆ ಹೆಣ್ಣುಮಕ್ಕಳು ಹಿಜಾಬ್ ಧರಿಸಿ ಬಂದಿದ್ದರಿಂದ ಆಯಾ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ನಿರಾಕರಿಸಿದಾಗ ವಿವಾದ ಭುಗಿಲೆದ್ದಿತ್ತು. ಸುದ್ದಿ ಸಂಸ್ಥೆ ಪಿಟಿಐ ವರದಿಯ ಪ್ರಕಾರ, ತುಮಕೂರಿನಲ್ಲಿ 15 ಮುಸ್ಲಿಂ ಹುಡುಗಿಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ಶಿವಮೊಗ್ಗದಲ್ಲಿ 58 ವಿದ್ಯಾರ್ಥಿಗಳನ್ನು ತಮ್ಮ ಕಾಲೇಜುಗಳ ಹೊರಗೆ ಪ್ರತಿಭಟನೆ ನಡೆಸಿದ್ದಕ್ಕಾಗಿ ಅಮಾನತುಗೊಳಿಸಲಾಗಿದೆ.
ಕರ್ನಾಟಕದ ಹಿಜಾಬ್ ನಿಷೇಧ ಕ್ರಮವು ದೇಶದ ಇತರ ಕೆಲವು ಭಾಗಗಳಲ್ಲಿ ಪ್ರತಿಭಟನೆಗೆ ಕಾರಣವಾಗಿದೆ ಮತ್ತು ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ಲಾಮಿಕ್ ಸಹಕಾರ ಸಂಘಟನೆಯಿಂದ ಟೀಕೆಗೆ ಗುರಿಯಾಗಿದೆ.
ಇದನ್ನೂ ಓದಿ: Hijab Row: ಹಿಜಾಬ್ ತೆಗೆದು ಬನ್ನಿ; ಹಣ ಡ್ರಾ ಮಾಡಲು ಬಂದ ಮುಸ್ಲಿಂ ಮಹಿಳೆಯನ್ನು ತಡೆದ ಬ್ಯಾಂಕ್ ಸಿಬ್ಬಂದಿ