ಚಾಮರಾಜಪೇಟೆಯಲ್ಲಿ ಸ್ಮಶಾನಕ್ಕಾಗಿ ಎಎಪಿಯಿಂದ ಹೋರಾಟ ಆರಂಭ!

ಬಿಜೆಪಿ ಸರ್ಕಾರ ಹಿಂದುತ್ವ ಅಂತಾರೆ, ಇದೇನಾ ನಿಮ್ಮ ಹಿಂದುತ್ವ? ಹಿಂದೂಗಳಿಗಂತ ಇರುವ ರುದ್ರಭೂಮಿಯನ್ನ ಹಾಗೇ ಉಳಿಸಿ. ಯತಾಸ್ಥಿತಿಗೆ ಹಿಂದೂ ರುದ್ರಭೂಮಿಯನ್ನಾಗೇ ಇರಲು ಬಿಡಿ.

ಚಾಮರಾಜಪೇಟೆಯಲ್ಲಿ ಸ್ಮಶಾನಕ್ಕಾಗಿ ಎಎಪಿಯಿಂದ ಹೋರಾಟ ಆರಂಭ!
ಆಮ್ ಆದ್ಮಿ ಪಾರ್ಟಿ ಪ್ರತಿಭಟನೆ ನಡೆಸಿದರು
Edited By:

Updated on: Jul 17, 2022 | 1:10 PM

ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನ (Idgah Maidan) ವಿವಾದ ಮುಗಿಯುವಂತೆ ಕಾಣುತ್ತಿಲ್ಲ. ಮೈದಾನ ಬಿಬಿಎಂಪಿ (BBMP) ಸ್ವತ್ತೆಂದು ಘೋಷಿಸುವಂತೆ ನಾಗರಿಕ ಒಕ್ಕೂಟ ಈಗಾಗಲೇ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರಕ್ಕೆ ಗಡುವು ನೀಡಿದೆ. ಈ ನಡುವೆ ಹಿಂದೂ ರುದ್ರಭೂಮಿ ಉಳಿಸುವಂತೆ ಒತ್ತಾಯ ಕೇಳಿಬಂದಿದ್ದು, ಹೋರಾಟ ಆರಂಭವಾಗಿದೆ. ಆಮ್ ಆದ್ಮಿ ಪಾರ್ಟಿ ಜೆ.ಜೆ ಆರ್. ನಗರದ ಪಾಲಿಕೆ ಸೌಧ ಮುಂದೆ ಪ್ರತಿಭಟನೆ ನಡೆಸುತ್ತಿದೆ. ಬಿಬಿಎಂಪಿ ದಾಖಲೆಗಳಲ್ಲೇ ಇದು ಸ್ಮಶಾನ ಎಂದು ಉಲ್ಲೇಖವಾಗಿದೆ. ಹೀಗಿದ್ದರೂ, ಇಲ್ಲಿ ಬಿಬಿಎಂಪಿ ಸೌಧ ನಿರ್ಮಾಣ ಮಾಡಿದೆ. ಅನಧಿಕೃತವಾಗಿ ನಿರ್ಮಾಣವಾಗಿರುವ ಕಟ್ಟಡ ತೆರವಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಬಿಜೆಪಿ ಸರ್ಕಾರ ಹಿಂದುತ್ವ ಅಂತಾರೆ, ಇದೇನಾ ನಿಮ್ಮ ಹಿಂದುತ್ವ? ಹಿಂದೂಗಳಿಗಂತ ಇರುವ ರುದ್ರಭೂಮಿಯನ್ನ ಹಾಗೇ ಉಳಿಸಿ. ಯತಾಸ್ಥಿತಿಗೆ ಹಿಂದೂ ರುದ್ರಭೂಮಿಯನ್ನಾಗೇ ಇರಲು ಬಿಡಿ. ಬೊಮ್ಮಾಯಿಯವರಿಗೆ ಇದು ಗೊತ್ತಿಲ್ವಾ? ಮಾಜಿ ಮಾಲಿಕೆ ಸದಸ್ಯರು, ಶಾಸಕ ಜಮೀರ್ ಅವರು ಏನ್ ಮಾಡುತ್ತಿದ್ದಾರೆ? ಎಂದು ಧರಣಿನಿರತರು ಸರ್ಕಾರ ಹಾಗೂ ಶಾಸಕ ಜಮೀರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: Viral Video: ಸಿಗ್ನಲ್ ಲೈಟ್​ನಲ್ಲಿ ನಟಿ ಕರೀನಾ ಕಪೂರ್ ವಿಡಿಯೋ, “ನನ್ನನ್ನು ತಿರುಗಿ ನೋಡದವನು ಯಾರು?”; ಮೀಮ್ ವಿಡಿಯೋ ವೈರಲ್

ಇದನ್ನೂ ಓದಿ
Sanchari Vijay: ಸಂಚಾರಿ ವಿಜಯ್​ ಹುಟ್ಟುಹಬ್ಬ: ಪ್ರತಿಭಾನ್ವಿತ ನಟನ ನೆನೆದು ‘ಮಿಸ್​ ಯೂ’ ಎನ್ನುತ್ತಿದೆ ಸ್ಯಾಂಡಲ್​ವುಡ್​
Karnataka Rain: ಕರ್ನಾಟಕದ ವಿವಿಧೆಡೆ ಇನ್ನೆರಡು ದಿನ ಮಳೆ: 8 ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್
IND vs ENG: ತೃತೀಯ ಏಕದಿನಕ್ಕೆ ಟೀಮ್ ಇಂಡಿಯಾ ಸಜ್ಜು: ಮೈದಾನದಲ್ಲಿ ಕೊಹ್ಲಿ ಭರ್ಜರಿ ಅಭ್ಯಾಸ
Viral Video: 8ಲಕ್ಷಕ್ಕೆ ಮಾರಾಟವಾದ ಮೇಕೆ ಮಾಲೀಕನನ್ನು ತಬ್ಬಿಕೊಂಡು ಮನುಷ್ಯರಂತೆ ಕೂಗಿದ ವಿಡಿಯೋ ವೈರಲ್

ಸಹಿ ಸಂಗ್ರಹ ಅಭಿಯಾನ ಆರಂಭ:
ಮೈದಾನದ ಉಳಿವಿಗಾಗಿ ಸಹಿ ಸಂಗ್ರಹ ಅಭಿಯಾನ ಆರಂಭವಾಗಿದೆ. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಾಗರಿಕರ ಒಕ್ಕೂಟ ಸಹಿ ಸಂಗ್ರಹ ಅಭಿಯಾನ ನಡೆಸುತ್ತಿದೆ. ಮೈದಾನ ರಕ್ಷಿಸಿ, ಸರ್ಕಾರಿ ಸ್ವತ್ತು ಎಂದು ಘೋಷಿಸಲು ಒತ್ತಾಯಿಸಿರುವ ನಾಗರಿಕರ ಒಕ್ಕೂಟ, ಬಿಬಿಎಂಪಿಗೆ 15 ದಿನಗಳ ಕಾಲ ಡೆಡ್​ಲೈನ್ ನೀಡಿದೆ.

ಇದನ್ನೂ ಓದಿ: Yash: ‘ಹೋಗಲೇ, ಇವನೊಬ್ಬ ಬಾಕಿ ಇದ್ದ’: ಬ್ಯಾಡ್​ ಬಾಯ್​ ಎಂದು ಆರೋಪಿಸಿದ ಮಗನಿಗೆ ಯಶ್​ ಪ್ರೀತಿಯ ಆವಾಜ್​

ಮತ್ತೊಂದು ದಾಖಲೆ‌ ರಿಲೀಸ್:
ಚಾಮರಾಜಪೇಟೆ ನಾಗರಿಕ ಒಕ್ಕೂಟ ಮತ್ತೊಂದು ದಾಖಲೆ‌ ರಿಲೀಸ್ ಮಾಡಿದೆ. ಈ ದಾಖಲೆಯಲ್ಲಿ ಮೈಸೂರು ಸಂಸ್ಥಾನದ ಅಧೀನಕ್ಕೆ‌ ಒಳಪಡುವ ಸ್ವತ್ತು ಎಂದು ಉಲ್ಲೇಖ ಮಾಡಿದೆ. 1950ರಲ್ಲೇ ಈ ಮೈದಾನ ಮೈಸೂರು ಸಂಸ್ಥಾನದ ಅಧೀನಕ್ಕೆ ಒಳಪಟ್ಟಿತ್ತು. ಬೆಂಗಳೂರಿಗೆ ಮೊಟ್ಟ ಮೊದಲ ಲೇಔಟ್ ಆಗಿದ್ದೇ ಚಾಮರಾಜಪೇಟೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತದಲ್ಲಿ ಆದ ಲೇಔಟ್. ತನ್ನ ತಂದೆಯ ನೆನಪಿನಲ್ಲಿ ಲೇಔಟ್ ನಿರ್ಮಿಸಲಾಗುತ್ತದೆ. ಈಗಿರುವ ಮೈದಾನ 2.10 ಎಕರೆ ಜಾಗದಲ್ಲಿ ಮೊದಲು ಸಂತೆಗೆ ಎಂದು ಮೀಸಲಿರಿಸಲಾಗುತ್ತೆ. ಆನಂತರ ಇದು ಆಟದ ಮೈದಾನವಾಗಿ ಬಳಕೆಯಾಗುತ್ತದೆ. ಇದಕ್ಕಾಗಿ ಮೈಸೂರು ಅರಸರ ಹೆಸರಿನಲ್ಲಿ ಮೈದಾನ‌ ನಾಮಕರಣ ಮಾಡಿ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರುಕ್ಮಾಂಗದ ಆಗ್ರಹಿಸಿದ್ದಾರೆ.