ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ಕ್ಯೂಆರ್ ಕೋಡ್ ವಂಚನೆ ಪ್ರಕರಣ, ಅಂಕಿ ಅಂಶ ಇಲ್ಲಿದೆ

ತಂತ್ರಜ್ಞಾನ ಮುಂದುವರಿದಂತೆ ಕೊಡು ಕೊಳ್ಳುವಿಕೆ ವ್ಯವಹಾರವೂ ಆನ್​ಲೈನ್​ ಆಗಿಬಿಟ್ಟಿವೆ. ಇದನ್ನೇ ಬಂಡವಾಳವನ್ನಾಗಿಸಿಕೊಳ್ಳುತ್ತಿರುವ ಸೈಬರ್ ಅಪರಾಧಿಗಳು, ಜನರನ್ನು ವಂಚಿಸುತ್ತಿದ್ದಾರೆ. ವಾಷಿಂಗ್ ಮಷಿನ್ ಮತ್ತು ವೀಣೆಯನ್ನು ಆನ್​ಲೈನ್​ನಲ್ಲಿ ಮಾರಾಟ ಮಾಡಲು ಹೋಗಿ ವ್ಯಕ್ತಿಗಳಿಬ್ಬರು ಸಾವಿರಾರು ರೂಪಾಯಿ ಕಳೆದುಕೊಂಡ ಘಟನೆ ನಡೆದಿದೆ.

ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ಕ್ಯೂಆರ್ ಕೋಡ್ ವಂಚನೆ ಪ್ರಕರಣ, ಅಂಕಿ ಅಂಶ ಇಲ್ಲಿದೆ
ಬೆಂಗಳೂರಿನಲ್ಲಿ ದಾಖಲಾದ ಸೈಬರ್ ಪ್ರಕರಣಗಳಲ್ಲಿ ಶೇ.40 ರಷ್ಟು ಕೇಸ್​​ಗಳು ಕ್ಯೂಆರ್​​ ಕೋಡ್​​ಗೆ ಸಂಬಂಧಿಸಿದ್ದಾಗಿದೆ
Follow us
Rakesh Nayak Manchi
|

Updated on:Aug 22, 2023 | 8:01 AM

ಬೆಂಗಳೂರು, ಆಗಸ್ಟ್ 22: ತಂತ್ರಜ್ಞಾನ ಮುಂದುವರಿದಂತೆ ಕೊಡು ಕೊಳ್ಳುವಿಕೆ ವ್ಯವಹಾರವೂ ಆನ್​ಲೈನ್​ ಆಗಿಬಿಟ್ಟಿವೆ. ಇದನ್ನೇ ಬಂಡವಾಳವನ್ನಾಗಿಸಿಕೊಳ್ಳುತ್ತಿರುವ ಸೈಬರ್ ಅಪರಾಧಿಗಳು, ಜನರನ್ನು ವಂಚಿಸುತ್ತಿದ್ದಾರೆ. ಬೆಂಗಳೂರಿನಲ್ಲಿ (Bengaluru) ದಾಖಲಾದ ಸೈಬರ್ ಪ್ರಕರಣಗಳ ಪೈಕಿ ಶೇ.40 ರಷ್ಟು ಪ್ರಕರಣಗಳು ಕ್ಯೂಆರ್​​ ಕೋಡ್​ಗೆ ಸಂಬಂಧಿಸಿದ್ದಾಗಿವೆ. ಕಳೆದ ವಾರ ವಾಷಿಂಗ್ ಮೆಷಿನ್ ಮಾರಾಟ ಮಾಡಲು ಮುಂದಾಗಿದ್ದ ಪ್ರೊಫೆಸರ್, ಸೈಬರ್ ಚೋರರು ಕಳುಹಿಸಿದ​​ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಸಾವಿರಾರು ರೂ. ಕಳೆದುಕೊಂಡರೆ, ಇತ್ತ ವೀಣೆ ಮಾರಾಟ ಮಾಡಲು ಮುಂದಾಗಿ ಲಿಂಕ್ ಒತ್ತಿದ ಗೃಹಿಣಿ ಕೂಡ ಹಣ ಕಳೆದುಕೊಂಡಿದ್ದಾರೆ.

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಪ್ರೊಫೆಸರ್ ಒಬ್ಬರು ವಾಷಿಂಗ್ ಮಷಿನ್ ಅನ್ನು ಆನ್​ಲೈನ್ ಮಾರುಕಟ್ಟೆ​ ಮೂಲಕ ಮಾರಾಟ ಮಾಡಲು ಮುಂದಾಗಿದ್ದಾರೆ. ಅದರಂತೆ ಒಂದು ಫೋಟೋ ಕೂಡ ಹಾಕಿದ್ದರು. ಆಗಸ್ಟ್ 11 ರಂದು ದೂರವಾಣಿ ಕರೆ ಮಾಡಿದ ವ್ಯಕ್ತಿಯೊಬ್ಬ ಯಾವುದೇ ಚೌಕಾಸಿ ಮಾಡದೆ ಹೇಳಿದ 60000 ಸಾವಿರ ರೂಪಾಯಿ ನೀಡುವುದಾಗಿ ತಿಳಿಸಿದ್ದಾನೆ.

ಅಬ್ಬಾ.. ನಾನು ಅಂದುಕೊಂಡಿದಷ್ಟು ಹಣ ನೀಡುವ ಗ್ರಾಹಕ ಸಿಕ್ಕಿದ ಎಂದು ಸಂತೋಷಗೊಂಡ ಪ್ರೊಫೆಸರ್​ಗೆ ಆ ವ್ಯಕ್ತಿ ತಾನು ಕ್ಯೂಆರ್ ಕೋಡ್ ಕಳುಹಿಸುತ್ತೇನೆ. ದಯವಿಟ್ಟು ಅದನ್ನು ಸ್ಕ್ಯಾನ್ ಮಾಡಿ ಮತ್ತು ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡುತ್ತೇನೆ ಎಂದು ಹೇಳಿದ್ದಾನೆ. ಇದನ್ನು ನಂಬಿದ ಪ್ರೊಫೆಸರ್, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುತ್ತಿದ್ದಂತೆ ಪ್ರೊಫೆಸರ್ ಖಾತೆಯಲ್ಲಿದ್ದ 63,000 ರೂ.ಗಳನ್ನು ಆ ವ್ಯಕ್ತಿ ತನ್ನ ಅಕೌಂಟ್​​ಗೆ ವರ್ಗಾಯಿಸಿಕೊಂಡಿದ್ದಾನೆ.

ಇದೇ ರೀತಿ, ಆನ್​ಲೈನ್​ ಮಾರುಕಟ್ಟೆಯಲ್ಲಿ ವೀಣೆ ಮಾರಾಟ ಮಾಡಲು ಮುಂದಾಗಿದ್ದ 30 ವರ್ಷದ ಗೃಹಿಣಿಯೊಬ್ಬರು ಸೈಬರ್ ಅಪರಾಧಿಗಳ ವಂಚನೆಗೆ ಸಿಲುಕಿದ್ದರು. ವೀಣೆ ಚಿತ್ರವನ್ನು ಆನ್​ಲೈನ್​ನಲ್ಲಿ ಅಪ್​ಲೋಡ್ ಮಾಡಿದ್ದರು. ಅಂದೇ ಒಬ್ಬ ಮಹಿಳೆ ಕರೆ ಮಾಡಿ ಸಂಗೀತ ವಾದ್ಯವನ್ನು ಖರೀದಿಸುತ್ತೇನೆ ಎಂದು ಹೇಳಿದ್ದಳು.

ಇದನ್ನೂ ಓದಿ: Digital Personal Data Protection Act: ಸೈಬರ್ ಅಪರಾಧಗಳ ತಡೆಗೆ ಕೇಂದ್ರ ಸರ್ಕಾರದಿಂದ ಹೊಸ ಕಾನೂನು ಜಾರಿ

ಅದರಂತೆ, ಗೃಹಿಣಿಯ ಬ್ಯಾಂಕ್ ಖಾತೆ ವಿವರಗಳನ್ನು ಸಂಗ್ರಹಿಸಿದ ನಂತರ ಮಹಿಳೆಯು ಸಂತ್ರಸ್ತೆಯ ಮೊಬೈಲ್​ಗೆ ಲಿಂಕ್ ಕಳುಹಿಸಿದ್ದಾಳೆ ಮತ್ತು ಹಣವನ್ನು ಸ್ವೀಕರಿಸಲು ಅದರ ಮೇಲೆ ಕ್ಲಿಕ್ ಮಾಡುವಂತೆ ಹೇಳಿದ್ದಾಳೆ. ಇದನ್ನು ನಂಬಿ ಲಿಂಕ್ ಕ್ಲಿಕ್ ಮಾಡಿದ ಕೆಲವೇ ಸೆಕೆಂಡುಗಳಲ್ಲಿ ಗೃಹಿಣಿ ತನ್ನ ಖಾತೆಯಿಂದ 20,000 ರೂ.ಗಳನ್ನು ಕಳೆದುಕೊಂಡಿದ್ದಾರೆ.

ಈ ಎರಡೂ ಪ್ರಕರಣಗಳು ಕಳೆದ ವಾರ ನಡೆದಿದ್ದು, ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ. “ಈ ರೀತಿಯ ದೂರುಗಳು ಈಗ ಇದ್ದಕ್ಕಿದ್ದಂತೆ ಹೆಚ್ಚಾಗಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಗರ ಪೊಲೀಸರ ಅಂಕಿಅಂಶಗಳ ಪ್ರಕಾರ, 2017 ಮತ್ತು ಮೇ 31, 2023 ರ ನಡುವೆ ಬೆಂಗಳೂರಿನಲ್ಲಿ 50,027 ಕ್ಕೂ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ ಮತ್ತು ಅವುಗಳಲ್ಲಿ ಶೇ.41 ರಷ್ಟು (20,662 ಪ್ರಕರಣಗಳು) ಕ್ಯೂಆರ್ ಕೋಡ್​​ಗಳು ಅಥವಾ ಲಿಂಕ್​ಗಳು ಅಥವಾ ಡೆಬಿಟ್-ಕ್ರೆಡಿಟ್ ಕಾರ್ಡ್ ವಿವರಗಳಿಗೆ ಸಂಬಂಧಿಸಿವೆ.

ಕಳೆದ ವರ್ಷ ನಗರದಲ್ಲಿ 9,940 ಸೈಬರ್ ಅಪರಾಧ ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ ಸುಮಾರು 1,300 ಕ್ಯೂಆರ್ ಕೋಡ್​ಗಳಿಗೆ ಸಂಬಂಧಿಸಿವೆ. ಈ ವರ್ಷದ ಮೊದಲ ಆರು ತಿಂಗಳಲ್ಲಿ, ನಾವು ಈಗಾಗಲೇ 7,000 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದೇವೆ ಮತ್ತು ಅವುಗಳಲ್ಲಿ 950 ಕ್ಯೂಆರ್ ಕೋಡ್​​ಗಳಿಗೆ ಸಂಬಂಧಿಸಿವೆ” ಎಂದು ಐಪಿಎಸ್ ಅಧಿಕಾರಿ ಹೇಳಿದ್ದಾರೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:00 am, Tue, 22 August 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ