AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಸಿಎಂ ಡಿಕೆ ಶಿವಕುಮಾರ್​ ಸಿಟಿ ರೌಂಡ್ಸ್​ ವೇಳೆ ಪಾಲಿಕೆ ವಾಹನಗಳ ನಡುವೆ ಅಪಘಾತ

ಇಂದು(ಜು.9) ಮುಂಜಾನೆಯಿಂದ ಸರ್ಪ್ರೈಸ್ ವಿಸಿಟ್ ​ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಿಟಿ ರೌಂಡ್ಸ್​ ಹಾಕುತ್ತಿದ್ದಾರೆ. ಅದರಂತೆ ಇದೀಗ ಡಿಸಿಎಂ ರೌಂಡ್ಸ್​ ವೇಳೆ ಆಯುಕ್ತರ ವಾಹನಕ್ಕೆ ಹಿಂಬದಿಯಿಂದ ಬರುತ್ತಿದ್ದ ಮತ್ತೊಂದು ಪಾಲಿಕೆ ವಾಹನ ಗುದ್ದಿದೆ.

ಡಿಸಿಎಂ ಡಿಕೆ ಶಿವಕುಮಾರ್​ ಸಿಟಿ ರೌಂಡ್ಸ್​ ವೇಳೆ ಪಾಲಿಕೆ ವಾಹನಗಳ ನಡುವೆ ಅಪಘಾತ
ಡಿಕೆ ಶಿವಕುಮಾರ್​
Anil Kalkere
| Updated By: ಕಿರಣ್ ಹನುಮಂತ್​ ಮಾದಾರ್|

Updated on:Jul 09, 2023 | 12:17 PM

Share

ಬೆಂಗಳೂರು: ಇಂದು(ಜು.9) ಮುಂಜಾನೆಯಿಂದ ಸರ್ಪ್ರೈಸ್ ವಿಸಿಟ್ ​ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್(Dk Shivakumar) ಸಿಟಿ ರೌಂಡ್ಸ್​ ಹಾಕುತ್ತಿದ್ದಾರೆ. ಅದರಂತೆ ಇದೀಗ ಡಿಸಿಎಂ ರೌಂಡ್ಸ್​ ವೇಳೆ ಆಯುಕ್ತರ ವಾಹನಕ್ಕೆ ಹಿಂಬದಿಯಿಂದ ಬರುತ್ತಿದ್ದ ಮತ್ತೊಂದು ಪಾಲಿಕೆ ವಾಹನ ಗುದ್ದಿದೆ. ಹೌದು ಮಾಗಡಿ ರೋಡ್​ನಲ್ಲಿ ಡಿಕೆ ಶಿವಕುಮಾರ್​ ಅವರನ್ನ ಹಿಂಬಾಲಿಸುತ್ತಿದ್ದ ಬಿಬಿಎಂಪಿ(BBMP) ಮುಖ್ಯ ಆಯುಕ್ತರು ಹಾಗೂ ವಿಶೇಷ ಆಯುಕ್ತರ ವಾಹನಗಳ ನಡುವೆ ಅಪಘಾತವಾಗಿದೆ. ಇನ್ನು ಈ ಘಟನೆ ಸಡನ್ ಬ್ರೇಕ್ ಹಾಕಿದ್ದಕ್ಕೆ ಸಂಭವಿಸಿದ್ದು, ಅದೃಷ್ಟವಶಾತ್ ಡಿಕ್ಕಿ ಹೊಡೆದ ವಾಹನದಲ್ಲಿ ಕಮಿಷನರ್ ಇರಲಿಲ್ಲ.

ಇಂದಿರಾ ಕ್ಯಾಂಟೀನ್​ಗೆ ಭೇಟಿ ನೀಡಿ, ಉಪಹಾರ ಸೇವಿಸಿದ್ದ ಡಿಕೆ ಶಿವಕುಮಾರ್​

ಇನ್ನು ಮುಂಜಾನೆ ತಮ್ಮ ಮನೆಯಿಂದ ಹೊರಟ್ಟಿದ್ದ ಡಿಸಿಎಂ ಡಿಕೆಶಿ ಅವರು ಇಂದಿರಾ ಕ್ಯಾಂಟೀನ್​ಗೆ ಉಪಹಾರ ಸೇವಿಸಲು ಹೋಗಿದ್ದು, ಅಲ್ಲಿನ ಸಿಬ್ಬಂದಿ, ಹಾಗೂ ಗ್ರಾಹಕರ ಜೊತೆ ಮಾತನಾಡುತ್ತಾ ತಿಂಡಿ ತಿಂದಿದ್ದರು. ಬಳಿಕ ಅಲ್ಲಿಂದ ಹೊರಟ ಅವರು ‘ದೊಡ್ಡಬಿದರುಕಲ್ಲು ಘನತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಮಾಸ್ಕ್, ತಲೆಗೆ ಹೆಲ್ಮೆಟ್ ಧರಿಸಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.

ಇದನ್ನೂ ಓದಿ:ಬಾಲಸೋರ್ ರೈಲು ಅಪಘಾತ ಪ್ರಕರಣ: 3 ರೈಲ್ವೆ ಅಧಿಕಾರಿಗಳನ್ನು ಬಂಧಿಸಿದ ಸಿಬಿಐ

ದಾರಿ ತಪ್ಪಿದ್ದ ಡಿಕೆ ಶಿವಕುಮಾರ್ ಎಸ್ಕಾರ್ಟ್ ವಾಹನ

ಬೆಂಗಳೂರಿನ 2 ಸ್ಥಳಗಳಿಗೆ ಡಿಕೆ ಶಿವಕುಮಾರ್ ಸರ್ಪ್ರೈಸ್ ವಿಸಿಟ್ ಮಾಡಲು ಹೊರಟು ಅವರು, ರಸ್ತೆಯಲ್ಲಿ ತೆರೆಳುವ ವೇಳೆ ಬೆಂಗಾವಲು ವಾಹನ ದಾರಿ ತಪ್ಪಿದ ಘಟನೆ ನಡೆದಿತ್ತು. ಡಿಕೆ ಶಿವಕುಮಾರ್​ ಅವರ ವಾಹನ ಬಿಟ್ಟು ಮುಂದೆ ಹೋಗಿದ್ದು, ಬಳಿಕ ತಿರುವು ತೆಗೆದುಕೊಂಡು ಬಂದಿದ್ದು, ಅಲ್ಲಿಯವರೆಗೆ ಮಾರ್ಗ ಮಧ್ಯೆ ಡಿಕೆ ಶಿವಕುಮಾರ್ ವಾಹನ ನಿಲ್ಲಿಸಿದ ಘಟನೆ ನಡೆದಿತ್ತು.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:16 pm, Sun, 9 July 23

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!