ಬೆಂಗಳೂರು: ಹೆಂಡತಿ (Wife) ಕಾಣುತ್ತಿಲ್ಲವೆಂದು ಗಂಡ (Husband), ಪತಿ ಕಾಣುತ್ತಿಲ್ಲವೆಂದು ಪತ್ನಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣೆಯ ವ್ಯಾಪ್ತಿಯ ಮಾರುತಿ ನಗರನ ಕಟ್ಟಡವೊಂದರಲ್ಲಿ ಎರಡು ಕುಟುಂಬ ವಾಸವಿದ್ದವು. 12 ವರ್ಷದ ಹಿಂದೆ ವಿವಾಹವಾಗಿದ್ದ ನವೀದ್ ಮತ್ತು ಝೀನತ್ ದಂಪತಿ ಕೆಳ ಮಹಡಿಯಲ್ಲಿ ವಾಸವಾಗಿದ್ದರು. 8 ವರ್ಷದ ಹಿಂದೆ ವಿವಾಹವಾಗಿದ್ದ ಮುಬಾರಕ್ ಮತ್ತು ಶಾಜಿಯಾ ದಂಪತಿ ಎರಡನೇ ಮಹಡಿಯಲ್ಲಿ ವಾಸವಾಗಿದ್ದರು.
ಹೀಗೆ ವಾಸವಿದ್ದ ಕುಟುಂಬಗಳ ನಡುವೆ ಅಕ್ರಮ ಸಂಬಂಧದ ಆರೋಪ ಕೇಳಿಬಂದಿದೆ. ಮುಬಾರಕ್ ಪತ್ನಿ ಶಾಜಿಯಾ, ಝೀನತ್ ಪತಿ ನವೀದ್ ಜೊತೆ ಸಂಬಂಧ ಹೊಂದಿದ್ದಾರೆಂದು ಆರೋಪವಿದೆ. ಈ ಹಿನ್ನೆಲೆ ಡಿಸೆಂಬರ್ 9 ,2022 ರಂದು ಶಾಜಿಯಾ ಮತ್ತು ನವೀದ್ ಇಬ್ಬರು ಮನೆಯಿಂದ ಹೊರಹೋದವರು ವಾಪಸ್ ಬರಲೇ ಇಲ್ಲ, ಪರಾರಿಯಾಗಿದ್ದಾರೆ ಆರೋಪ ಕೇಳಿಬಂದಿದ್ದು, ಇಬ್ಬರು ಒಟ್ಟಿಗೆ ಹೋಗಿದ್ದಾರೆಂದು ಝೀನತ್ ಮತ್ತು ಮುಬಾರಕ್ ಆರೋಪಿಸುತ್ತಿದ್ದಾರೆ.
ಇದನ್ನೂ ಓದಿ: ನಾಲ್ಕು ಮಕ್ಕಳ ತಾಯಿ ಮುಸ್ಲಿಂ ಯುವಕನ ಜತೆ ಪರಾರಿ: ಲವ್ ಜಿಹಾದ್ ಆರೋಪ
ಈ ಸಂಬಂಧ ತಿಂಗಳ ಹಿಂದೆ ಝೀನತ್ ಮತ್ತು ಮುಬಾರಕ್ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದಾರೆ. ಆದರೆ ದೂರು ನೀಡಿ ಒಂದು ತಿಂಗಳು ಕಳೆದರು ಪೊಲೀಸರು ಕ್ರಮ ಕೈಗೊಂಡಿಲ್ಲವೆಂದು ಝೀನತ್ ಮತ್ತು ಮುಬಾರಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ತುಮಕೂರು ಜಿಲ್ಲೆಯಲ್ಲಿ ದಾರುಣ ಘಟನೆ: ಮೂವರು ಅನಾಥ ಸಹೋದರಿಯರು ಆತ್ಮಹತ್ಯೆಗೆ ಶರಣು
ಈ ಹಿನ್ನೆಲೆ ಝೀನತ್ ಮತ್ತು ಮುಬಾರಕ್ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ ನಿಂಬರಗಿ ಭೇಟಿ ಮಾಡಿ ಜ್ಞಾನಭಾರತಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ವಿರುದ್ಧ ಮೌಖಿಕ ದೂರು ನೀಡಿದ್ದಾರೆ. ಇನ್ನು ಶಾಜಿಯಾ ಪುಟ್ಟ ಮಗುವನ್ನು ಕರೆದೊಯ್ದಿದ್ದಾಳೆ ಎಂದು ಮುಬಾರಕ್ ಭಾವುಕರಾಗಿದ್ದಾರೆ.
ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:36 am, Fri, 20 January 23