ಶಾಸಕ ಗೂಳಿಹಟ್ಟಿ ಶೇಖರ್​ಗೆ ಸೇರಿದ 8 ಕೋಟಿ ಮೌಲ್ಯದ ಸೈಟ್​ ಅನ್ಯರ ಪಾಲು, 8 ಜನರ ವಿರುದ್ಧ ಎಫ್​ಐಆರ್

ಹೊಸದುರ್ಗ ಕ್ಷೇತ್ರದ ಶಾಸಕ ಗೂಳಿಹಟ್ಟಿ ಶೇಖರ್ ಅವರಿಗೆ ಮಂಜೂರಾಗಿದ್ದ ಬಿಡಿಎ ಜಿ ಕೆಟಗರಿ ಸೈಟ್ ನ ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆ.

ಶಾಸಕ ಗೂಳಿಹಟ್ಟಿ ಶೇಖರ್​ಗೆ ಸೇರಿದ 8 ಕೋಟಿ ಮೌಲ್ಯದ ಸೈಟ್​ ಅನ್ಯರ ಪಾಲು, 8 ಜನರ ವಿರುದ್ಧ ಎಫ್​ಐಆರ್
ಶಾಸಕ ಗೂಳಿಹಟ್ಟಿ ಶೇಖರ್
Follow us
TV9 Web
| Updated By: ಆಯೇಷಾ ಬಾನು

Updated on:Jan 20, 2023 | 12:15 PM

ಬೆಂಗಳೂರು: ಸಿಲಿಕಾನ್ ಸಿಟಿಯಂತಹ ದೊಡ್ಡ ನಗರದಲ್ಲಿ ಭೂಗಳ್ಳರು ಬಡವರ ಸೈಟ್​ಗಳನ್ನು ಕಂಡ ಕಂಡವರಿಗೆ ಮಾರಾಟ ಮಾಡಿ, ಮೋಸ ಮಾಡೋದು ಸಾಮಾನ್ಯವಾಗಿದೆ. ಬೆಂಗಳೂರಿನಲ್ಲಿ ನಕಲಿ ದಾಖಲೆ ಸೃಷ್ಟಿ ಮಾಡೋದು ಎಲ್ಲರಿಗೂ ತಿಳಿದಿರುವ ವಿಚಾರ. ಆದ್ರೀಗ, ರಾಜ್ಯದ ಶಾಸಕರುಗಳಿಗೆ ಮಂಜೂರಾದ ನಿವೇಶನಗಳನ್ನೂ ಭೂಗಳ್ಳರು ಬಿಟ್ಟಿಲ್ಲ. ನಕಲಿ ದಾಖಲೆ‌ ಸೃಷ್ಟಿಸಿ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆ. ಶಾಸಕ ಗೂಳಿಹಟ್ಟಿ ಶೇಖರ್(Goolihatti Shekar) ಅವರಿಗೆ ಇಂತಹ ಮಹಾ ಮೋಸವಾಗಿದ್ದು ಈ ಸಂಬಂಧ 8 ಜನರ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಬೆಂಗಳೂರು.. ಇಲ್ಲಿ‌ ಒಂದಿಡಿ ಜಾಗಕ್ಕೂ ಚಿನ್ನದ ಬೆಲೆಯಿದೆ ಇಂತಹ ಚಿನ್ನದ ಬೆಲೆಯ ಭೂಮಿಯನ್ನ ಎಗರಿಸಲು ಭೂಗಳ್ಳರು ಸಾಲು ಸಾಲು ನಿಂತಿದ್ದಾರೆ. ಅದೇಷ್ಟೋ ಜನರ ಸೈಟ್ ಗಳನ್ನ ಯಾರಿಗೂ ತಿಳಿಯದೆ ಕಂಡವರಿಗೆ ಸೇಲ್ ಮಾಡಿದುಂಟು. ಅಂತಹದೆ ಒಂದು ಅನುಭವ ಎಂಎಲ್​ಎಗಳಿಗೂ ಆಗಿದೆ. ಹೊಸದುರ್ಗ ಕ್ಷೇತ್ರದ ಶಾಸಕ ಗೂಳಿಹಟ್ಟಿ ಶೇಖರ್ ಅವರಿಗೆ ಮಂಜೂರಾಗಿದ್ದ ಬಿಡಿಎ ಜಿ ಕೆಟಗರಿ ಸೈಟ್ ನ ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆ. ನಕಲಿ ದಾಖಲೆಗಳ ಆಧಾರದ ಮೇಲೆ ಬ್ಯಾಟರಾಯನಪುರ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ನೋಂದಣಿ ಮಾಡಿಸಿಕೊಟ್ಟಿದ್ದಾರೆ.

ಶಾಸಕ ಗೂಳಿಹಟ್ಟಿ ಶೇಖರ್ ಗೆ ಬಿಡಿಎ 50*80 ವಿಸ್ತೀರ್ಣದ ಜಿ ಕೆಟಗೇರಿ ಸೈಟ್ ಮಂಜೂರಾಗಿತ್ತು. ಲೊಟ್ಟೆಗೊಲ್ಲಹಳ್ಳಿ ಅಂದ್ರೆ ಸಂಜಯನಗರದ ಆರ್ ಎಂವಿ 2 ಸ್ಟೇ ನಲ್ಲಿ ನಿವೇಶನ ಸಂಖ್ಯೆ 3 ಹಂಚಿಕೆ ಆಗಿತ್ತು. ಇದಕ್ಕೆ ಬೇಕಾದ ಬಿಡಿಎ ಸಂಪೂರ್ಣ ದಾಖಲೆಗಳು ಶಾಸಕರ ಬಳಿಯಿತ್ತು. ಸದ್ಯ ಮಾರ್ಕೆಟ್ ಬೆಲೆ ಪ್ರಕಾರ ಹತ್ತತ್ರಾ 7-8 ಕೋಟಿ ಬೆಲೆಯ ಸೈಟು. ಇಂತಹ ಸೈಟ್ ನ ರಾಮಮೂರ್ತಿ ಅಲಿಯಾಸ್ ಮಣಿವನನ್, ಅನುರಾಧಾ, ದೀಪಿಕಾ ಸೇರಿದಂತೆ 10 ಜನ ಡೆವಲಪರ್ಸ್ ಹಾಗೂ ಬಿಲ್ಡರ್ಸ್ ಹಾಗೂ ಇನ್ನಿತರು ಸೇರಿಕೊಂಡು ನಕಲಿ ದಾಖಲೆ ಸೃಷ್ಟಿಸಿ ಬ್ಯಾಟರಾಯನಪುರ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೋಂದಣಿ ಮಾಡ್ಕೊಂಡಿದ್ದಾರೆ. ಅಷ್ಟೇ ಅಲ್ಲದೆ ಶಾಸಕ ಗೊಳ್ಳಿಹಟ್ಟಿ ಶೇಖರ್ ಗೆ ಸೇರಿದ ಜಾಗವಕ್ಕೆ ಬೇಲಿ ಕೂಡಾ ಹಾಕಿದ್ರಂತೆ. ಈ ಬಗ್ಗೆ ಶಾಸಕರಿಗೆ ಮಾಹಿತಿ ಬರ್ತಿದ್ದಂಗೆ ಕಳೆದ ತಿಂಗಳು ಸಂಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸ್ ಠಾಣೆ ಯಲ್ಲಿ ಐಪಿಸಿ ಸೆಕ್ಷನ್ 420,465,468,471 ಸೇರಿದಂತೆ ಇತರೆ ಸೆಕ್ಷನ್ ಅಡಿ ಎಫ್​ಐಆರ್ ದಾಖಲಾಗಿದೆ. ಶಾಸಕರಿಗೆ ಮಂಜೂರಾಗಿದ್ದ ಸೈಟ್ ನ ಶಾಸಕರಿಗೆ ಗೊತ್ತಿಲ್ಲದೆ ನಕಲಿ ದಾಖಲೆಗಳ ಆಧಾರದ ಮೇಲೆ ಕಂಡವರಿಗೆ ಸಬ್ ರಿಜಿಸ್ಟರ್ ನೊಂದಣಿ ಮಾಡಿಕೊಟ್ಟಿದ್ದಾರಂತೆ

ಇದನ್ನೂ ಓದಿ: ಅತ್ತ ಮೋದಿ ಬಿಗ್ ಗಿಫ್ಟ್, ಇತ್ತ ಮಲೆನಾಡಿಗೆ ದೊಡ್ಡ ನಿರಾಸೆ: ದಶಕಗಳ ಸಮಸ್ಯೆಗೆ ಸಿಗದ ಪರಿಹಾರ

ಇನ್ನೂ ಶಾಸಕ ಗೊಳಿಹಟ್ಟಿ ಶೇಖರ್ ಅವರು ನೀಡಿರುವ ದೂರಿನಲ್ಲಿ ಬೆಳಗಾವಿ ಶಾಸಕ ಅಭಯ್ ಪಾಟೀಲ್ ಅವರ ನಿವೇಶನ ಬಗ್ಗೆನೂ ಉಲ್ಲೇಖ ಮಾಡಲಾಗಿದೆ. ಶಾಸಕ ಅಭಯ್ ಪಾಟೀಲ್ ಅವರಿಗೆ ಮಂಜೂರ್ ಆಗಿರುವ ನಿವೇಶನವನ್ನು ಯಾರೋ ಗುಪ್ತಾ ಅನ್ನೋರು ಸೈಟ್ ನಮ್ಮದು ಅಂತಾ ಕಾಂಪೌಂಡ್ ಹಾಕಿದ್ದಾರಂತೆ. ಸದ್ಯ ನಕಲಿ‌ ದಾಖಲೆ ಆಧಾರದ ಮೇಲೆ ಶಾಸಕರ ಸೈಟ್ ನ ಖಾಸಗಿ ವ್ಯಕ್ತಿ ಹೆಸರಿಗೆ ನೋಂದಣಿ ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ ಶುರುವಾಗಿದೆಯಂತೆ. ಸಚಿವ ಅಶೋಕ್ ಅವರ ನಿರ್ದೇಶನದ ಮೇರೆಗೆ ತನಿಖೆ ಶುರುವಾಗಿದೆಯಂತೆ.

ಶಾಸಕರ ಸೈಟ್ ಗಳನ್ನೇ ನಕಲಿ ದಾಖಲೆ ಸೃಷ್ಟಿಮಾಡಿ ಎಗರಿಸುವ ಖದೀಮರ ತಂಡಗಳು ಎಂಟ್ರಿಯಾಗಿದ್ದು ಸದ್ಯ ಶಾಸಕರ ದೂರಿನ ಆಧಾರದ ಮೇಲೆ‌ ಕೆಲ ಬಿಲ್ಡರ್​ಗಳನ್ನ ಪೊಲೀಸ್ರು ಅರೆಸ್ಟ್ ಮಾಡಿದ್ದಾರೆ ಎನ್ನಲಾಗ್ತಿದೆ. ಆದರೆ ನಕಲಿ ದಾಖಲೆಗಳ ಆಧಾರದ ಮೇಲೆ ಹೇಗೆ ನೊಂದಣಿ ಮಾಡಿಕೊಟ್ರು ಎನ್ನುವ ಪ್ರಶ್ನೆ ಕಾಡ್ತಿದೆ.

ವರದಿ: ಮುತ್ತಪ್ಪ ಲಮಾಣಿ, ಟಿವಿ9 ಬೆಂಗಳೂರು

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:07 am, Fri, 20 January 23

ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ