ಯುವತಿ ಮೇಲೆ ಆ್ಯಸಿಡ್​ ದಾಳಿ ಪ್ರಕರಣ; ಯುವತಿಯ ಸ್ಟೇಟ್​ಮೆಂಟ್ ಪಡೆದು ಎಫ್​ಐಆರ್ ದಾಖಲಿಸಿದ ಪೊಲೀಸರು

ಯುವತಿ ಮೇಲೆ ಆ್ಯಸಿಡ್​ ದಾಳಿ ಪ್ರಕರಣ; ಯುವತಿಯ ಸ್ಟೇಟ್​ಮೆಂಟ್ ಪಡೆದು ಎಫ್​ಐಆರ್ ದಾಖಲಿಸಿದ ಪೊಲೀಸರು
ಎಫ್​ಐಆರ್

ಕಚೇರಿ ಮುಂದೆ ಕಾದು ಕುಳಿತಿದ್ದ ಆರೋಪಿ, ಯುವತಿ ಬರ್ತಿದ್ದಂತೆ ಪ್ರೀತ್ಸೆ ಎಂದು ಕಾಡಿದ್ದಾನೆ. ಯುವತಿ ಒಪ್ಪದಿದ್ದಾಗ ಆ್ಯಸಿಡ್ ಎರಚಲು ಮುಂದಾಗಿದ್ದು, ಮೆಟ್ಟಿಲಿನಿಂದ ಇಳಿತಿದ್ದಂತೆ ಹಿಂದೆಯಿಂದ ಆರೋಪಿ ಆ್ಯಸಿಡ್ ಎರಚಿದ್ದಾನೆ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Apr 28, 2022 | 5:04 PM

ಬೆಂಗಳೂರು: ಪ್ರೀತಿಸಲು ನಿರಾಕರಿಸಿದ್ದಕ್ಕೆ ಯುವತಿ ಮೇಲೆ ಆ್ಯಸಿಡ್ (Acid) ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಯುವತಿ ಸ್ಟೇಟ್​ಮೆಂಟ್​ ನೀಡಿದ್ದು, ಅವನನ್ನ ಮಾತ್ರ ಬಿಡಬೇಡಿ ಸರ್, ಅವನಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ಯುವತಿ ಹೇಳಿಕೆ ನೀಡಿದ್ದಾಳೆ. ಯುವತಿಯ ಸ್ಟೇಟ್ ಮೆಂಟ್ ಪಡೆದು ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ. ಆಸಿಡ್ ಹಾಕಿ ಸಿಟಿ ಸಿವಿಲ್ ಕೋರ್ಟ್ ಬಳಿ ಆರೋಪಿ ನಾಗೇಶ ಹೋಗಿದ್ದು, ವಕೀಲರನ್ನ ಭೇಟಿ ಮಾಡುವ ಉದ್ದೇಶದಿಂದ ಕೋರ್ಟ್ ಬಳಿ ಹೋಗಿರೊ ಆರೋಪಿ, ಆ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಕಾಮಾಕ್ಷಿಪಾಳ್ಯ ಪೊಲೀಸರಿಂದ ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಆ್ಯಸಿಡ್ ದಾಳಿಗೊಳಗಾಗಿರುವ ಯುವತಿಯ ತಂದೆ ರಾಜಣ್ಣ ಹೇಳಿಕೆ ನೀಡಿದ್ದು, ನಮ್ಮ ಹುಡುಗಿಯನ್ನ ಪ್ರೀತಿಸುವ ಬಗ್ಗೆ ಆರೋಪಿ ಏನೂ ಹೇಳಿರಲಿಲ್ಲ. ನನ್ನ ಭಾವನ ಮನೆ ಹತ್ರ ಬಾಡಿಗೆಗಿದ್ದ ಅನ್ನೋದು ಮಾತ್ರ ಗೊತ್ತು. ನಿನ್ನೆ ಅವಳ ಆಫೀಸ್​ ಬಳಿ ಹೋಗಿ ಪ್ರೀತಿಸ್ತೇನೆ ಎಂದು ಹೇಳಿದ್ದಾನೆ. ನಮ್ಮ ಹುಡುಗಿ ಅವಳ ದೊಡ್ಡಮ್ಮನಿಗೆ ವಿಚಾರವನ್ನು ತಿಳಿಸಿದ್ದಾರೆ. ಕಂಪ್ಲೇಟ್​ ಕೊಡುತ್ತೇವೆ ಎಂದು ಹುಡುಗನ ಅಣ್ಣನಿಗೆ ಹೇಳಿದ್ದಾರೆ. ಬುದ್ಧಿ ಹೇಳ್ತೀನಿ ಅಂದಿದ್ನಂತೆ, ಇವತ್ತು ಈ ರೀತಿ ಮಾಡಿದ್ದಾನೆ. ಯಾವುದೇ ಕಾರಣಕ್ಕೂ ಆರೋಪಿಯನ್ನ ಬಿಡಬಾರದು. ನಮ್ಮ ಕೈಗೊಪ್ಪಿಸಲಿ, ಇಲ್ಲಿದಿದ್ರೆ ನಮ್ಮ ಕಣ್ಮುಂದೆ ಶಿಕ್ಷೆಯಾಗಲಿ ಎಂದು ಯುವತಿಯ ತಂದೆ ರಾಜಣ್ಣ ಹೇಳಿದ್ದಾರೆ.

ಕಚೇರಿ ಮುಂದೆ ಕಾದು ಕುಳಿತಿದ್ದ ಆರೋಪಿ, ಯುವತಿ ಬರ್ತಿದ್ದಂತೆ ಪ್ರೀತ್ಸೆ ಎಂದು ಕಾಡಿದ್ದಾನೆ. ಯುವತಿ ಒಪ್ಪದಿದ್ದಾಗ ಆ್ಯಸಿಡ್ ಎರಚಲು ಮುಂದಾಗಿದ್ದು, ಮೆಟ್ಟಿಲಿನಿಂದ ಇಳಿತಿದ್ದಂತೆ ಹಿಂದೆಯಿಂದ ಆರೋಪಿ ಆ್ಯಸಿಡ್ ಎರಚಿದ್ದಾನೆ. ನಂತರ ಸುಟ್ಟಗಾಯದಿಂದಾಗಿ ಯುವತಿ ಕೆಳಗೆ ಕುಳಿತು ಬಿಟ್ಟಿದ್ದಾಳೆ. ಆದರೂ ಆತನ ಕೋಪ‌ ಕಡಿಮೆ ಆಗಲಿಲ್ಲ. ಕುಳಿತಿದ್ದವಳ ಮೇಲೆ ಆ್ಯಸಿಡ್ ಸುರಿದು, ಘಟನಾ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ನಂತರ ಕವರ್ ತಂದು ಆಕೆಯ ಮೇಲೆ ಸ್ಥಳೀಯರು ಹೊದಿಸಿದ್ದಾರೆ.

ಸಂತ್ರಸ್ತೆಯ ಆರೋಗ್ಯ ವಿಚಾರಿಸಿದ ಬಳಿಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಹೇಳಿಕೆ ನೀಡಿದ್ದು, ಸಂತ್ರಸ್ತೆಯ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದಿದ್ದೇನೆ. ಯುವತಿಗೆ ಶೇಕಡಾ 40ರಿಂದ 50ರಷ್ಟು ಗಾಯಗಳಾಗಿವೆ. ಸದ್ಯ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಯುವತಿಗೆ ಐಸಿಯುನಲ್ಲಿ‌ ಚಿಕಿತ್ಸೆ ಮುಂದುವರಿಸಲಾಗುತ್ತಿದೆ ಎಂದರು. ಘಟನೆ ಬಗ್ಗೆ ಯುವತಿಯ ದೊಡ್ಡಮ್ಮನ ಬಳಿ ಮಾಹಿತಿ ಪಡೆದಿದ್ದೇನೆ. ಹಿಂದೆಯೂ ಯುವತಿಯನ್ನು ಮದುವೆ ಆಗೋದಾಗಿ ಕೇಳಿದ್ದನಂತೆ. ಯುವತಿಯ ದೊಡ್ಡಮ್ಮನ ಬಳಿ ಆರೋಪಿ ನಾಗೇಶ್ ಕೇಳಿದ್ದನಂತೆ. ಯುವತಿಗೆ ಮದುವೆ ನಿಶ್ಚಯವಾಗಿದೆ ತಂಟೆಗೆ ಬರದಂತೆ ಹೇಳಿದ್ರು. ಆರೋಪಿ ನಾಗೇಶ್​ಗೆ ಯುವತಿ ಪೋಷಕರು ಎಚ್ಚರಿಕೆ ನೀಡಿದ್ದರಂತೆ. ಆದರೆ ಆರೋಪಿ ನಾಗೇಶ್​ ಇಂಥ ಕೃತ್ಯವೆಸಗಿದ್ದಾನೆ. ಆರೋಪಿ ಪತ್ತೆಗಾಗಿ ಪೊಲೀಸರಿಂದ 3 ತಂಡ ರಚಿಸಿದ್ದಾರೆ. ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಸಂತ್ರಸ್ತೆಯ ಜೊತೆ ಮಹಿಳಾ ಆಯೋಗ ಇರಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:

ಹಿಂದಿ ಹೇರಿಕೆ ಎಂಬ ದೊಡ್ಡ ಹುನ್ನಾರ: ಇದು ಬರೀ ಭಾಷೆಯ ವಿಷಯ ಅಲ್ಲ, ಭವಿಷ್ಯದ ವಿಷಯ

ಅವಿವೇಕಿ ಅಜಯ ದೇವಗನ್ ದೇಹದಲ್ಲಿ ಅಮಿತ್ ಶಾ ಹೊಕ್ಕಿರುವಂತಿದೆ: ಚಕ್ರವರ್ತಿ ಚಂದ್ರಚೂಡ್

Follow us on

Related Stories

Most Read Stories

Click on your DTH Provider to Add TV9 Kannada