ನಿರ್ಮಾಪಕ ಉಮಾಪತಿ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ; ದರ್ಶನ್ ಫ್ಯಾನ್ ಚೇತನ್​ ಅರೆಸ್ಟ್

| Updated By: ಆಯೇಷಾ ಬಾನು

Updated on: Jun 25, 2024 | 9:39 AM

ಡಿ ಬಾಸ್​ ಬಗ್ಗೆ ಮಾತನಾಡಿದರಲ್ಲಾ ಎಂದು ರೊಚ್ಚಿಗೆದ್ದ ಚೇತನ್ ಉಮಾಪತಿ ಗೌಡಗೆ ಬೆದರಿಕೆ ಹಾಕಿದ್ದ. ಅಷ್ಟೇ ಅಲ್ಲದೆ ಉಮಾಪತಿ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದ. ಹಾಗೂ ದರ್ಶನ್ ಇತರೆ ಅಭಿಮಾನಿಗಳಿಗೆ ಪ್ರಚೋದಿಸುತ್ತಿದ್ದ. ಹೀಗಾಗಿ ಪೊಲೀಸರು ಚೇತನ್​ನನ್ನು ಬಂಧಿಸಿದ್ದಾರೆ.

ನಿರ್ಮಾಪಕ ಉಮಾಪತಿ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ; ದರ್ಶನ್ ಫ್ಯಾನ್ ಚೇತನ್​ ಅರೆಸ್ಟ್
ದರ್ಶನ್ ಅಭಿಮಾನಿ ಚೇತನ್
Follow us on

ಬೆಂಗಳೂರು, ಜೂನ್.25: ಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್ (Darshan Thoogudeepa) ಅವರ ಬಗ್ಗೆ ಅವರ ಅಭಿಮಾನಿಗಳಿಗೆ ಪ್ರಚೋದಿಸುತ್ತಿದ್ದ ಆರೋಪದಲ್ಲಿ ಚೇತನ್ ಎಂಬುವವರನ್ನು ಬಸವೇಶ್ವರ ನಗರ ಪೊಲೀಸರು (Basaveshwara Nagar Police) ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 504, 506 ಅಡಿ ಎಫ್ಐಆರ್ ದಾಖಲಾಗಿದೆ. ಆರೋಪಿ ಚೇತನ್ ಕೂಡ ದರ್ಶನ್ ಫ್ಯಾನ್ ಆಗಿದ್ದು ನಿರ್ಮಾಪಕ ಉಮಾಪತಿಗೆ ಬೆದರಿಕೆ ಹಾಕಿದ್ದ ಹಾಘೂ ದರ್ಶನ್ ಅಭಿಮಾನಿಗಳಿಗೆ ಪ್ರಚೋದನೆ ಮಾಡಿದ್ದ. ಈ ಹಿನ್ನೆಲೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಜೈಲು ಸೇರಿದ ನಟ ದರ್ಶನ್ ಬಗ್ಗೆ ಉಮಾಪತಿ ಗೌಡ ಅವರು ಮಾತಾಡಿದ್ದರು. ಈ ಬಗ್ಗೆ ನಟ ದರ್ಶನ್ ಫ್ಯಾನ್ ಆಗಿರುವ ಚೇತನ್ ಕೋಪಗೊಂಡಿದ್ದು ಡಿ ಬಾಸ್​ ಬಗ್ಗೆ ಮಾತನಾಡಿದರಲ್ಲಾ ಎಂದು ರೊಚ್ಚಿಗೆದ್ದು ಉಮಾಪತಿ ಗೌಡಗೆ ಬೆದರಿಕೆ ಹಾಕಿದ್ದ. ಅಷ್ಟೇ ಅಲ್ಲದೆ ಉಮಾಪತಿ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದ. ಹಾಗೂ ದರ್ಶನ್ ಇತರೆ ಅಭಿಮಾನಿಗಳಿಗೆ ಪ್ರಚೋದಿಸುತ್ತಿದ್ದ. ಈ ಬಗ್ಗೆ ನಿರ್ಮಾಪಕ ಉಮಾಪತಿ ಗೌಡ ದೂರು ನೀಡಿದ್ದು ಸದ್ಯ ಬಸವೇಶ್ವರ ನಗರ ಪೊಲೀಸರು ಚೇತನ್​ನನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್: ನಾಲ್ವರು ಮಾತ್ರ ಬೇರೆ ಜೈಲಿಗೆ ಶಿಫ್ಟ್, ದರ್ಶನ್‌ ಇರೋದು ಎಲ್ಲಿ?

ದರ್ಶನ್ ಖೈದಿ ನಂಬರ್ ಅನ್ನು ಗಾಡಿ ಮೇಲೆ ಹಾಕಿಸಿಕೊಂಡ ಅಭಿಮಾನಿ

ಇನ್ನು ಮತ್ತೊಂದೆಡೆ ಮೈಸೂರಿನಲ್ಲಿ ದರ್ಶನ್ ಅಭಿಮಾನಿ ರಾಜೇಶ್ ತಮ್ಮ ಗಾಡಿ ಮೇಲೆ ದರ್ಶನ್ ಖೈದಿ ನಂಬರ್ ಹಾಕಿಸಿಕೊಂಡಿದ್ದಾರೆ. ಜೈಲಿನಲ್ಲಿ ನಟ ದರ್ಶನ್ ಗೆ ಕೊಟ್ಟಿರುವ ಖೈದಿ ನಂಬರ್ 6106 ಅನ್ನು ಗಾಡಿ ಮೇಲೆ 6106 ಹಾಕಿಸಿಕೊಂಡಿದ್ದಾರೆ. ಇದೇ ಲಕ್ಕಿ ನಂಬರ್ ಎಂದು ಗಾಡಿ ಮೇಲೆ ಬರೆಸಿದ್ದಾರೆ.

ಟಿ.ನರಸೀಪುರ ತಾಲೂಕಿನ ಕರುಹಟ್ಟಿ ಗ್ರಾಮದ ರಾಜೇಶ್, ನಟ ದರ್ಶನ್ ಅಪ್ಪಟ ಅಭಿಮಾನಿ. ಗಾಡಿ ಮೇಲೆ ಖೈದಿ 6106 ಹಾಗೂ ಬೇಡಿ ಚಿತ್ರ ಹಾಕಿಸಿಕೊಂಡಿದ್ದಾರೆ. ಗಾಡಿಗೆ ಈಗಾಗಲೇ ಬೇರೆ ನಂಬರ್ ಇದೆ. ಚೇಂಜ್ ಮಾಡಲು ಆಗದ ಕಾರಣ 6106 ನಂಬರ್ ಎಂದು ಮುಂದೆ ಬರೆಸಿದ್ದಾರೆ. ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲಿಗೆ ಹೋದ ಬಳಿಕ ಅಭಿಮಾನಿಗಳು ಹೊಸ ಟ್ರೆಂಡ್ ಶುರು ಮಾಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ