ರೇಣುಕಾಸ್ವಾಮಿ ಕೊಲೆ ಕೇಸ್: ನಾಲ್ವರು ಮಾತ್ರ ಬೇರೆ ಜೈಲಿಗೆ ಶಿಫ್ಟ್, ದರ್ಶನ್‌ ಇರೋದು ಎಲ್ಲಿ?

ರೇಣುಕಾಸ್ವಾಮಿ ಕೊಲೆ ಕೇಸ್​ಲ್ಲಿ ಮತ್ತಷ್ಟು ರೋಚಕ ವಿಚಾರಗಳ ಹೊರಬಿದ್ದಿವೆ. ದರ್ಶನ್ ಮೊಬೈಲ್ ರಹಸ್ಯ, ಪವಿತ್ರಾಗೌಡ 2 ಕೋಟಿ ನಿಗೂಢ ಹಣ ಹೀಗೆ ಸಾಲು ಸಾಲು ಮಾಹಿತಿಗಳು ಹೊರಬರುತ್ತಲೇ ಇವೆ. ಈ ನಡುವೆ ಪ್ರಕರಣದ ನಾಲ್ವರು ಆರೋಪಿಗಳಾದ ರವಿಶಂಕರ್, ಕಾರ್ತಿಕ್, ಕೇಶವಮೂರ್ತಿ, ನಿಖಿಲ್​ನ್ನು ತುಮಕೂರು ಸೆಂಟ್ರಲ್ ಜೈಲಿಗೆ ಸ್ಥಳಾಂತರ ಮಾಡಲಾಗಿದೆ.

ರೇಣುಕಾಸ್ವಾಮಿ ಕೊಲೆ ಕೇಸ್: ನಾಲ್ವರು ಮಾತ್ರ ಬೇರೆ ಜೈಲಿಗೆ ಶಿಫ್ಟ್, ದರ್ಶನ್‌ ಇರೋದು ಎಲ್ಲಿ?
ರೇಣುಕಾಸ್ವಾಮಿ ಕೊಲೆ ಕೇಸ್: ನಾಲ್ವರು ಮಾತ್ರ ಬೇರೆ ಜೈಲಿಗೆ ಶಿಫ್ಟ್, ದರ್ಶನ್‌ ಇರೋದು ಎಲ್ಲಿ?
Follow us
Shivaprasad
| Updated By: ಗಂಗಾಧರ​ ಬ. ಸಾಬೋಜಿ

Updated on: Jun 24, 2024 | 8:36 PM

ಬೆಂಗಳೂರು, ಜೂನ್​ 24: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ (Renuka Swamy Murder Case) ಜೈಲು ಪಾಲಾಗಿರುವ ನಟ ದರ್ಶನ್  (Darshan)  ಮತ್ತು ಗ್ಯಾಂಗ್​​ನ ನಾಲ್ವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಿಂದ ತುಮಕೂರು ಸೆಂಟ್ರಲ್ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ರವಿಶಂಕರ್, ಕಾರ್ತಿಕ್, ಕೇಶವಮೂರ್ತಿ, ನಿಖಿಲ್ ಆರೋಪಿಗಳ ಸ್ಥಳಾಂತರಕ್ಕೆ 24ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ. ತುಮಕೂರು ಜೈಲಿಗೆ ಸ್ಥಳಾಂತರಕ್ಕೆ ಆರೋಪಿಗಳ ಪರ ವಕೀಲರ ಆಕ್ಷೇಪ ವ್ಯಕ್ತಪಡಿಸಿದರು. ಆರೋಪಿಗಳ ಸ್ಥಳಾಂತರ ಅಗತ್ಯದ ಬಗ್ಗೆ ಕೋರ್ಟ್​ಗೆ ಎಸ್​ಪಿಪಿ ಪಿ.ಪ್ರಸನ್ನಕುಮಾರ್ ವಿವರಣೆ ನಂತರ ಸ್ಥಳಾಂತರಕ್ಕೆ ಆದೇಶಿಸಲಾಯಿತು.

ರೇಣುಕಾಸ್ವಾಮಿ ನಾವೇ ಕೊಂದಿದ್ದೇವೆಂದು ಹೇಳಿಕೊಂಡು ಮೊದಲು ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ಕಾರ್ತಿಕ್, ಕೇಶವಮೂರ್ತಿ, ನಿಖಿಲ್ ಶರಣಾಗಿದ್ದರು. ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಮೂವರು ಬಾಯ್ಬಿಟ್ಟಿದ್ದರಿಂದ ದರ್ಶನ್ ಮತ್ತು ಗ್ಯಾಂಗ್​ ಬಂಧನವಾಗಿತ್ತು.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್​: ತಾನಾಗಿಯೇ ಬಂದು ಶರಣಾದ ಎ8 ಆರೋಪಿ, ಆತನ ಪಾತ್ರವೇನು?

ನಂತರ ಚಿತ್ರದುರ್ಗ ಡಿವೈಎಸ್​ಪಿ ಕಚೇರಿಗೆ ಕಾರು ಚಾಲಕ ರವಿಶಂಕರ್ ಶರಣಾಗಿದ್ದ. ಇಟಿಯೋಸ್ ಕಾರಿನಲ್ಲಿ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದಿದ್ದ. ಟ್ಯಾಕ್ಸಿ ಸಂಘದವರ ಸಹಾಯ ಕೇಳಿಬಂದಿದ್ದ ಚಾಲಕ ರವಿಶಂಕರ್​​ನನ್ನು ಡಿವೈಎಸ್​ಪಿ ಕಚೇರಿಗೆ ಕರೆತಂದು ಟ್ಯಾಕ್ಸಿ ಸಂಘದ ಮುಖಂಡರು ಶರಣಾಗತಿ ಮಾಡಿಸಿದ್ದರು.

ಪರಪ್ಪನ ಅಗ್ರಹಾರದಲ್ಲಿ ದರ್ಶನ್: ಮೌನಕ್ಕೆ ಶರಣು!

ಪರಪ್ಪನ ಅಗ್ರಹಾರದ ಜೈಲಿನ ಭದ್ರತಾ ವಿಭಾಗದ ಬ್ಯಾರಕ್‌ನ ವಿಶೇಷ ಸೆಲ್‌ನಲ್ಲಿರುವ ದರ್ಶನ್ ಯಾರೊಂದಿಗೂ ಹೆಚ್ಚಿಗೆ ಮಾತನಾಡದೆ ಮೌನಕ್ಕೆ ಶರಣಾಗಿದ್ದರಂತೆ. ನಿನ್ನೆ ಭಾನುವಾರ ಆಗಿದ್ದರಿಂದ ಯಾರ ಭೇಟಿಗೂ ಅವಕಾಶ ಇರಲಿಲ್ಲ. ಇಂದು ದರ್ಶನ್ ಆಪ್ತರು, ಕುಟುಂಬದವರು ಮತ್ತು ಪವಿತ್ರಾ ಗೌಡ ಫ್ಯಾಮಿಯವರು ಭೇಟಿ ಮಾಡಿದ್ದಾರೆ.

ಇದನ್ನೂ ಓದಿ: ಅಂತೂ ಇಂತೂ ಬಂದ ಗೆಳೆಯ; ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ ವಿನೋದ್​ ಪ್ರಭಾಕರ್

ರೇಣುಕಾಸ್ವಾಮಿ ಕೊಲೆ ಕೇಸ್​ನ ಬಗೆದಷ್ಟೂ ಸ್ಫೋಟಕ ಸಂಗತಿಗಳು ಬಯಲಾಗುತ್ತಿವೆ. ಕೇಸ್ ಮುಚ್ಚಿ ಹಾಕಲು ದರ್ಶನ್​ ಗ್ಯಾಂಗ್ ಮಸಲತ್ತು ಮಾಡಿತ್ತು. ಎಲ್ಲೂ ಸಿಕ್ಕಿಹಾಕಿಕೊಳ್ಳಬಾರದು ಅಂತ ವೆಬ್ ಆ್ಯಪ್ ಮೂಲಕ ಮಾತುಕತೆ ನಡೆಸಿದ್ದರು ಅನ್ನೋದು ಗೊತ್ತಾಗಿದೆ. ಹೀಗಾಗಿ ಎಲ್ಲಾ ಮಾತುಕತೆಯ ಡೇಟಾವನ್ನ ರಿಟ್ರೀವ್ ಮಾಡಲು ತನಿಖಾ ತಂಡ ಮುಂದಾಗಿದೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.