‘ಕಲ್ಕಿ’ ಸಿನಿಮಾ ಅವಧಿ ಎಷ್ಟು? ಎಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆ? ಮೊದಲ ದಿನ ಗಳಿಸುವುದೆಷ್ಟು?
Kalki 2898 AD: ಪ್ರಭಾಸ್ ಸೇರಿದಂತೆ ಹಲವು ದಿಗ್ಗಜ ನಟರು ಒಟ್ಟಿಗೆ ನಟಿಸಿರುವ ‘ಕಲ್ಕಿ 2898 ಎಡಿ’ ಸಿನಿಮಾ ಇನ್ನೊಂದು ದಿನದಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟಾಗಲಿದೆ? ಇನ್ನಿತರೆ ಮಾಹಿತಿ ಇಲ್ಲಿದೆ.
ಪ್ರಭಾಸ್ (Prabhas) ಸೇರಿದಂತೆ ಕಮಲ್ ಹಾಸನ್ (Kamal Haasan), ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಇನ್ನೂ ಕೆಲವು ಭಾರತದ ಅತ್ಯುತ್ತಮ ನಟರು ನಟಿಸಿರುವ ‘ಕಲ್ಕಿ 2898 ಎಡಿ’ ಸಿನಿಮಾ ಇನ್ನು 48 ಗಂಟೆಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಬುಕಿಂಗ್ ಓಪನ್ ಆಗಿದ್ದು, ಈಗಾಗಲೇ ಬಹುತೇಕ ಕಡೆ ಮೊದಲ ದಿನದ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಸಿನಿಮಾ ಹಲವು ಭಾಷೆಗಳಿಗೆ ಡಬ್ ಆಗಿ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಬಿಡುಗಡೆ ಆಗಿದ್ದು, ಮೊದಲ ದಿನದ ಗಳಿಕೆಯಲ್ಲಿ ಈ ಹಿಂದಿನ ಹಲವು ದಾಖಲೆಗಳನ್ನು ಮುರಿದು ಹಾಕಲಿವೆ ಎನ್ನಲಾಗುತ್ತಿದೆ.
‘ಕಲ್ಕಿ 2898 ಎಡಿ’ ಸಿನಿಮಾದ ಹಿಂದಿ ಆವೃತ್ತಿಯೇ ಸುಮಾರು 3500 ಸ್ಕ್ರೀನ್ಗಳಲ್ಲಿ ಬಿಡುಗಡೆ ಕಾಣುತ್ತಿದೆ. ತೆಲುಗು ಆವೃತ್ತಿ ಸುಮಾರು 2500 ಸ್ಕ್ರೀನ್ಗಳಲ್ಲಿ ಬಿಡುಗಡೆ ಕಾಣುತ್ತಿದೆ. ಅಮೆರಿಕ ಸೇರಿದಂತೆ, ಯುಎಇ ಇನ್ನೂ ಕೆಲವು ದೇಶಗಳಲ್ಲಿ ಸಹ ದೊಡ್ಡ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಿದೆ. ತೆಲುಗು ಸಿನಿಮಾ ಒಂದು ಇಷ್ಟು ದೊಡ್ಡ ಮಟ್ಟದಲ್ಲಿ ಬಿಡುಗಡೆ ಗಳಿಸಿದ ಇತಿಹಾಸವೇ ಇಲ್ಲ ಎನ್ನಲಾಗುತ್ತಿದೆ. ‘RRR’ ಸಿನಿಮಾಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಚಿತ್ರಮಂದಿರಗಳಲ್ಲಿ ‘ಕಲ್ಕಿ’ ಸಿನಿಮಾ ಬಿಡುಗಡೆ ಆಗುತ್ತಿದೆ.
‘ಕಲ್ಕಿ 2898 ಎಡಿ’ ಸಿನಿಮಾದ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆಯೂ ಸಾಕಷ್ಟು ಲೆಕ್ಕಾಚಾರಗಳು ಈಗಾಗಲೇ ಚಾಲ್ತಯಲ್ಲಿವೆ. ಅಮೆರಿಕದಲ್ಲಿ ಅಡ್ವಾನ್ಸ್ ಬುಕಿಂಗ್ನಿಂದಲೇ ‘ಕಲ್ಕಿ’ ಸಿನಿಮಾ 20 ಕೋಟಿ ರೂಪಾಯಿಗೂ ಹೆಚ್ಚು ಹಣ ಗಳಿಕೆ ಮಾಡಿದೆ. ಪ್ರೀಮಿಯರ್ ಶೋನಿಂದಲೂ ದೊಡ್ಡ ಮೊತ್ತದ ಹಣವನ್ನು ‘ಕಲ್ಕಿ’ ತಂಡ ಪಡೆದುಕೊಂಡಿದೆ. ಸಿನಿಮಾ ಬಿಡುಗಡೆಗೆ 48 ಗಂಟೆ ಇರುವಂತೆಯೇ ಭಾರತದಾದ್ಯಂತ ಸುಮಾರು 4 ಲಕ್ಷಕ್ಕೂ ಹೆಚ್ಚು ಟಿಕೆಟ್ಗಳು ಮಾರಾಟವಾಗಿದ್ದು ಇದರಿಂದ ಸುಮಾರು 15 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ಇದನ್ನೂ ಓದಿ:‘ಕಲ್ಕಿ 2898 ಎಡಿ’ ಚಿತ್ರದ ಟಿಕೆಟ್ ದರ ಹೆಚ್ಚಳ; ಹೆಚ್ಚಿತು ಆಕ್ರೋಶ
ಬಾಕ್ಸ್ ಆಫೀಸ್ ತಜ್ಞರ ಪ್ರಕಾರ ‘ಕಲ್ಕಿ 2898 ಎಡಿ’ ಸಿನಿಮಾವು ಮೊದಲ ದಿನ ಭಾರತದಲ್ಲಿ ಸುಮಾರು 40 ಕೋಟಿಗೂ ಹೆಚ್ಚು ಮೊತ್ತವನ್ನು ಕಲೆ ಹಾಕಲಿದೆ. ಇನ್ನು ವಿಶ್ವದಾದ್ಯಂತ ಲೆಕ್ಕಾಚಾರ ಹಾಕಿದರೆ ಈ ಗಳಿಕೆ ದುಪ್ಪಟ್ಟು ಆಗಲಿದೆ. ಅಲ್ಲಿಗೆ ಮೊದಲ ದಿನವೇ ಈ ಸಿನಿಮಾ ಸುಮಾರು 80 ಕೋಟಿ ರೂಪಾಯಿ ಹಣವನ್ನು ಗಳಿಕೆ ಮಾಡಲಿದೆ ಎನ್ನಲಾಗುತ್ತಿದೆ. ಇದು ದಾಖಲೆಯ ಮೊತ್ತವಾಗಿದೆ.
‘ಕಲ್ಕಿ 2898 ಎಡಿ’ ಸಿನಿಮಾದ ರನ್ ಟೈಮ್ 3 ಗಂಟೆ 59 ನಿಮಿಷಗಳಾಗಿದ್ದು, ಉದ್ದನೆಯ ಸಿನಿಮಾ ಇದಾಗಿದೆ. ಸಿನಿಮಾವು ಭವಿಷ್ಯ ಹಾಗೂ ಭೂತಕಾಲದ ಕತೆಯನ್ನು ಒಳಗೊಂಡಿದೆ. ಸಿನಿಮಾದ ಟ್ರೈಲರ್, ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ಹಾಲಿವುಡ್ನ ‘ಡ್ಯೂನ್’, ‘ಟ್ರಾನ್ಸ್ಫಾರ್ಮರ್ಸ್’ ಇನ್ನಿತರೆ ಸಿನಿಮಾಗಳನ್ನು ನೆನಪಿಸುವಂತಿದೆ ದೃಶ್ಯಗಳು. ಸಿನಿಮಾವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದಾರೆ. ಸಿನಿಮಾವನ್ನು ಅಶ್ವಿನ್ ದತ್ ನಿರ್ಮಾಣ ಮಾಡಿದ್ದಾರೆ. ಸಿನಿಮಾ ಜೂನ್ 27ಕ್ಕೆ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ