ಪ್ರಭಾಸ್, ದೀಪಿಕಾ ಸೇರಿ ‘ಕಲ್ಕಿ 2898 ಎಡಿ’ ಚಿತ್ರದ ಕಲಾವಿದರ ಸಂಭಾವನೆ ವಿವರ ಇಲ್ಲಿದೆ
ಈ ಸಿನಿಮಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಕಲಾವಿದ ಎನ್ನುವ ಖ್ಯಾತಿ ಅವರಿಗೆ ಸಿಕ್ಕಿದೆ. ದೀಪಿಕಾ ಪಡುಕೋಣೆ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಇತ್ತೀಚೆಗೆ ಚಿತ್ರದ ಪ್ರಮೋಷನ್ನಲ್ಲೂ ಭಾಗಿ ಆಗಿದ್ದರು. ಅವರು ಅವರು ಈ ಚಿತ್ರಕ್ಕೆ 20 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದಾರೆ.
‘ಕಲ್ಕಿ 2898 ಎಡಿ’ ಸಿನಿಮಾ (Kalki 2898 AD) ರಿಲೀಸ್ಗೆ ರೆಡಿ ಇದೆ. ಈ ಸಿನಿಮಾ ಹೊಸ ರೀತಿಯಲ್ಲಿ ಮೂಡಿ ಬರಲಿದೆ ಎಂಬುದು ಸಿನಿಮಾ ಟ್ರೇಲರ್ ನೋಡಿದವರ ಅಭಿಪ್ರಾಯ. ಸೆನ್ಸಾರ್ ಮಂಡಳಿಯವರು ಕೂಡ ಈ ಚಿತ್ರವನ್ನು ಹೊಗಳಿದ್ದಾಗಿ ವರದಿ ಆಗಿದೆ. ಹೀಗಾಗಿ ಚಿತ್ರದ ಬಗ್ಗೆ ಭರವಸೆ ಹೆಚ್ಚಿದೆ. ಮೇ 9ರಂದು ಸಿನಿಮಾ ರಿಲೀಸ್ ಆಗಲಿದೆ ಎಂದು ಈ ಮೊದಲು ಹೇಳಲಾಗಿತ್ತು. ಈಗ ರಿಲೀಸ್ ದಿನಾಂಕ ಜೂನ್ 27ಕ್ಕೆ ಮುಂದೂಡಲ್ಪಟ್ಟಿದೆ. ಈ ಮಧ್ಯೆ ಚಿತ್ರದ ಕಲಾವಿದರು ಪಡೆದ ಸಂಭಾವನೆ ಬಗ್ಗೆ ಇಲ್ಲಿದೆ ಮಾಹಿತಿ.
ದೊಡ್ಡ ಬಜೆಟ್ ಸಿನಿಮಾಗಳ ಶೂಟಿಂಗ್ ವರ್ಷಾನುಗಟ್ಟಲೆ ನಡೆಯುತ್ತದೆ. ಹೀಗಾಗಿ, ಸಹಜವಾಗಿಯೇ ಹೆಚ್ಚಿನ ಮೊತ್ತವನ್ನು ಸೆಲೆಬ್ರಿಟಿಗಳು ಚಾರ್ಜ್ ಮಾಡುತ್ತಾರೆ. ‘ಕಲ್ಕಿ 2898 ಎಡಿ’ ಸಿನಿಮಾ ಕೂಡ ದೊಡ್ಡ ಬಜೆಟ್ ಸಿನಿಮಾ. ಈ ಚಿತ್ರದ ಶೂಟಿಂಗ್ ಕಳೆದ ಎರಡು ವರ್ಷಗಳಿಂದ ನಡೆಯುತ್ತಲೇ ಇತ್ತು. ಈ ಚಿತ್ರದ ಸಂಭಾವನೆಯೇ ನಿರ್ಮಾಪಕರಿಗೆ ದೊಡ್ಡ ಹೊರೆ ಎನಿಸಿದೆ.
ಪ್ರಭಾಸ್ ಅವರು ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ. ಅವರು ಈ ಚಿತ್ರಕ್ಕೆ ಪಡೆದಿದ್ದು ಬರೋಬ್ಬರಿ 150 ಕೋಟಿ ರೂಪಾಯಿ. ಈ ಸಿನಿಮಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಕಲಾವಿದ ಎನ್ನುವ ಖ್ಯಾತಿ ಅವರಿಗೆ ಸಿಕ್ಕಿದೆ. ದೀಪಿಕಾ ಪಡುಕೋಣೆ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಇತ್ತೀಚೆಗೆ ಚಿತ್ರದ ಪ್ರಮೋಷನ್ನಲ್ಲೂ ಭಾಗಿ ಆಗಿದ್ದರು. ಅವರು ಅವರು ಈ ಚಿತ್ರಕ್ಕೆ 20 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದಾರೆ.
ಅಮಿತಾಭ್ ಬಚ್ಚನ್ ಹಾಗೂ ಕಮಲ್ ಹಾಸನ್ ಅವರು ಈ ಚಿತ್ರದಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಅವರು ಈ ಚಿತ್ರಕ್ಕಾಗಿ ತಲಾ 20 ಕೋಟಿ ರೂಪಾಯಿ ಸಂಭಾನವೆ ಪಡೆದಿದ್ದಾರೆ ಎಂದು ಹೇಳುತ್ತದೆ ವರದಿ. ಬಾಲಿವುಡ್ ಬೆಡಗಿ ದಿಶಾ ಪಟಾಣಿ ಕೂಡ ಚಿತ್ರದಲ್ಲಿ ನಟಿಸಿದ್ದು ಅವರ ಸಂಭಾವನೆ ರೂಪದಲ್ಲಿ 5 ಕೋಟಿ ರೂಪಾಯಿ ಪಡೆದಿದ್ದರು. ಇನ್ನೂ ಸಣ್ಣ-ಪುಟ್ಟ ಕಲಾವಿದರು ನಟಿಸಿದ್ದು, ಅವರು ಲಕ್ಷಗಳಲ್ಲಿ ಸಂಭಾವನೆ ಪಡೆದಿದ್ದಾರೆ.
ಇದನ್ನೂ ಓದಿ: ಕಮಲ್ ಹಾಸನ್ ಎದುರು ತೊಡೆತಟ್ಟಿದ ಅಕ್ಷಯ್ ಕುಮಾರ್; ನಡೆಯಲಿದೆ ದೊಡ್ಡ ಕ್ಲ್ಯಾಶ್
ಇವಿಷ್ಟನ್ನೂ ಲೆಕ್ಕ ಹಾಕಿದರೆ ಸಂಭಾವನೆ ಮೊತ್ತವೇ 250 ಕೋಟಿ ರೂಪಾಯಿ ದಾಟಲಿದೆ. ಈ ಸಿನಿಮಾಗೆ ದೊಡ್ಡ ಬಜೆಟ್ಗಳನ್ನು ಹಾಕಲಾಗಿದೆ, ಸಾಕಷ್ಟು ವಿಎಫ್ಎಕ್ಸ್ ಕೆಲಸಗಳು ನಡೆದಿವೆ. ಒಟ್ಟಾರೆ ಸಿನಿಮಾದ ಬಜೆಟ್ 600 ಕೋಟಿ ರೂಪಾಯಿ ಮೀರಿದೆಯಂತೆ. ಅಷ್ಟೇ ದೊಡ್ಡ ಮಟ್ಟದಲ್ಲಿ ಸಿನಿಮಾ ಗಳಿಕೆ ಮಾಡಿದರೆ ನಿರ್ಮಾಪಕರು ಸೇಫ್ ಆಗುತ್ತಾರೆ. ಒಂದೊಮ್ಮೆ ಕಲಾವಿದರು ಕಡಿಮೆ ಮೊತ್ತ ಚಾರ್ಜ್ ಮಾಡಿದ್ದರೆ ನಿರ್ಮಾಪಕರಿಗೆ ಇದು ದೊಡ್ಡ ಹೊರೆ ಎನಿಸುತ್ತಿರಲಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.