‘ಕಲ್ಕಿ 2898 ಎಡಿ’ ಚಿತ್ರದ ಟಿಕೆಟ್ ದರ ಹೆಚ್ಚಳ; ಹೆಚ್ಚಿತು ಆಕ್ರೋಶ

ಕರ್ನಾಟಕದಲ್ಲಿ ಮುಂಜಾನೆಯೇ ಶೋಗಳನ್ನು ಆಯೋಜನೆ ಮಾಡಲಾಗಿದೆ. ಈ ಸಿನಿಮಾ 2ಡಿ ಜೊತೆಗೆ 3ಡಿಯಲ್ಲೂ ಲಭ್ಯವಿದೆ. ಈ ಚಿತ್ರಕ್ಕೆ ಕರ್ನಾಟಕದಲ್ಲಿ ಟಿಕೆಟ್​ಗಳನ್ನು 500 ರೂಪಾಯಿ ಇಡಲಾಗಿದೆ. ಸಿನಿಮಾದ ಬಜೆಟ್​ ಈಗಾಗಲೇ 600 ಕೋಟಿ ರೂಪಾಯಿ ಮೀರಿದೆ. ಈ ಕಾರಣಕ್ಕೆ ಟಿಕೆಟ್ ದರ ಹೆಚ್ಚಿಸಲಾಗಿದೆ.

‘ಕಲ್ಕಿ 2898 ಎಡಿ’ ಚಿತ್ರದ ಟಿಕೆಟ್ ದರ ಹೆಚ್ಚಳ; ಹೆಚ್ಚಿತು ಆಕ್ರೋಶ
ಕಲ್ಕಿ 2898 ಎಡಿ
Follow us
| Updated By: ರಾಜೇಶ್ ದುಗ್ಗುಮನೆ

Updated on: Jun 24, 2024 | 6:29 PM

‘ಕಲ್ಕಿ 2898 ಎಡಿ’ ಸಿನಿಮಾ (Kalki 2898 AD Movie) ಜೂನ್ 27ರಂದು ರಿಲೀಸ್ ಆಗಲಿದೆ. ಇನ್ನು ಕೆಲವೇ ದಿನಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಪ್ರಭಾಸ್ ಜೊತೆಗೆ ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಸೇರಿ ಅನೇಕರು ನಟಿಸಿದ್ದಾರೆ. ಈ ಚಿತ್ರದ ಎರಡು ಟ್ರೇಲರ್​ಗಳು ರಿಲೀಸ್ ಆಗಿ ಗಮನ ಸೆಳೆದಿವೆ. ಸದ್ಯ ಈ ಸಿನಿಮಾ ನೋಡಬೇಕು ಎನ್ನುವ ಅಭಿಮಾನಿಗಳಿಗೆ ಟಿಕೆಟ್ ದರದ ಬಿಸಿ ತಾಗಿದೆ.

ಕರ್ನಾಟಕದಲ್ಲಿ ಮುಂಜಾನೆಯೇ ಶೋಗಳನ್ನು ಆಯೋಜನೆ ಮಾಡಲಾಗಿದೆ. ಈ ಸಿನಿಮಾ 2ಡಿ ಜೊತೆಗೆ 3ಡಿಯಲ್ಲೂ ಲಭ್ಯವಿದೆ. ಈ ಚಿತ್ರಕ್ಕೆ ಕರ್ನಾಟಕದಲ್ಲಿ ಟಿಕೆಟ್​ಗಳನ್ನು 500 ರೂಪಾಯಿ ಇಡಲಾಗಿದೆ. ಸಿನಿಮಾದ ಬಜೆಟ್​ ಈಗಾಗಲೇ 600 ಕೋಟಿ ರೂಪಾಯಿ ಮೀರಿದೆ. ಈ ಕಾರಣಕ್ಕೆ ಸಿನಿಮಾಗೆ ದೊಡ್ಡ ಮಟ್ಟದ ಕಲೆಕ್ಷನ್ ಆಗಬೇಕು ಎಂದರೆ ಸಹಜವಾಗಿಯೇ ಹೆಚ್ಚಿನ ಟಿಕೆಟ್​ ದರ ನಿಗದಿಮಾಡಬೇಕು. ಇದು ಅನೇಕರ ಕೋಪಕ್ಕೆ ಕಾರಣ ಆಗಿದೆ.

ದೊಡ್ಡ ಬಜೆಟ್ ಸಿನಿಮಾಗಳು ಬಂದಾಗ ಕರ್ನಾಟಕದಲ್ಲಿ ಸಹಜವಾಗಿಯೇ ಹೆಚ್ಚಿನ ಮೊತ್ತ ನಿಗದಿ ಮಾಡಲಾಗುತ್ತದೆ. ಇದು ಕರ್ನಾಟಕದ ಮಂದಿಗೆ ಹೊಸದೇನು ಅಲ್ಲ. ಇದನ್ನು ಯಾರೂ ಅಷ್ಟಾಗಿ ವಿರೋಧಿಸುತ್ತಿಲ್ಲ. ಆದರೆ ಆಂಧ್ರ ಹಾಗೂ ತೆಲಂಗಾಣದ ಮಂದಿಗೆ ಇದು ಹೊಸದು.

ಮೂಲಗಳ ಪ್ರಕಾರ ಮೊದಲ ಎಂಟು ದಿನ ‘ಕಲ್ಕಿ 2898 ಎಡಿ’ ಸಿನಿಮಾ ಟಿಕೆಟ್ ದರ ಹೆಚ್ಚಿಸಲು ಅವಕಾಶ ಇದೆ. ಇದಕ್ಕೆ ಅನೇಕರು ಕಿಡಿಕಾರಿದ್ದಾರೆ. ತೆಲಂಗಾಣ ಸರ್ಕಾರ ಹೆಚ್ಚಿನ ಶೋಗಳನ್ನು ಇಡಲು ಒಪ್ಪಿದೆ. ಇದರ ಜೊತೆಗೆ ಜೂನ್​ 27ರಿಂದ ಜುಲೈ 4ರವರೆಗೆ ಟಿಕೆಟ್​ ದರ ಹೆಚ್ಚಿರಲಿದೆ. ಥಿಯೇಟರ್​ಗಳಿಗೆ 70 ರೂಪಾಯಿ ಹಾಗೂ ಮಲ್ಟಿಪ್ಲೆಕ್ಸ್​​ಗೆ 100 ರೂಪಾಯಿ ಹೆಚ್ಚಿನ ದರ ನಿಗದಿ ಮಾಡಲು ನಿರ್ಧರಿಸಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಟಿಕೆಟ್ ದರ ಹೆಚ್ಚಿರುವ ಬಗ್ಗೆ ವಿರೋಧ ಹೊರ ಹಾಕಿದ್ದಾರೆ. ‘ವಿಮರ್ಶೆ ನೋಡಿ ಆ ಬಳಿಕ ನಿರ್ಧರಿಸುತ್ತೇವೆ’ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಬಿಗ್ ಬಜೆಟ್ ಸಿನಿಮಾ ಮಾಡಬೇಡಿ’ ಎಂದು ಕೋರಿದ್ದಾರೆ.

ಇದನ್ನೂ ಓದಿ:  ಪವನ್​ ಕಲ್ಯಾಣ್​ ಭೇಟಿಗೆ ಬರ್ತಿದ್ದಾರೆ ‘RRR’, ‘ಪುಷ್ಪ 2’, ‘ಕಲ್ಕಿ 2898 ಎಡಿ’ ನಿರ್ಮಾಪಕರು

‘ಸಿನಿಮಾ ಟಿಕೆಟ್ ದರ ಹೆಚ್ಚಿಸಿದ್ದು ಸಿನಿಮಾನೇ ಸಾಯಿಸಿಬಿಡಬಹುದು. ಟಿಕೆಟ್​ ದರ ತುಂಬಾನೇ ಅತಿ ಆಯಿತು. ಸಾಮಾನ್ಯ ದರದಲ್ಲಿ ಚಿತ್ರ ರಿಲೀಸ್ ಮಾಡಬೇಕಿತ್ತು’ ಎಂದು ಕೆಲವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
ಕಾಂಗ್ರೆಸ್ ನಾಯಕರು ಯಾರನ್ನೇ ಸಿಎಂ ಮಾಡಿದರೂ ನಂಗೆ ಸಂಬಂಧಿಸದ ವಿಷಯ: ರೇವಣ್ಣ
ಕಾಂಗ್ರೆಸ್ ನಾಯಕರು ಯಾರನ್ನೇ ಸಿಎಂ ಮಾಡಿದರೂ ನಂಗೆ ಸಂಬಂಧಿಸದ ವಿಷಯ: ರೇವಣ್ಣ
ದರ್ಶನ್ ಬಂಧನದ ದಿನ ‘ಡೆವಿಲ್’ ಸಿನಿಮಾ ಸೆಟ್​ನಲ್ಲಿ ಏನಾಯ್ತು? ವಿನಯ್
ದರ್ಶನ್ ಬಂಧನದ ದಿನ ‘ಡೆವಿಲ್’ ಸಿನಿಮಾ ಸೆಟ್​ನಲ್ಲಿ ಏನಾಯ್ತು? ವಿನಯ್
ಡಿಕೆ ಸುರೇಶ್​ರನ್ನು ಸೋಲಿಸಿದ್ದು ಸಿದ್ದರಾಮಯ್ಯ; ಅಶೋಕರಿಂದ ಅಸಂಬದ್ಧ ಹೇಳಿಕೆ
ಡಿಕೆ ಸುರೇಶ್​ರನ್ನು ಸೋಲಿಸಿದ್ದು ಸಿದ್ದರಾಮಯ್ಯ; ಅಶೋಕರಿಂದ ಅಸಂಬದ್ಧ ಹೇಳಿಕೆ
ಸಿಎಂ ಮತ್ತು ಡಿಸಿಎಂ ಆಯ್ಕೆ ಮಾಡೋದು ಸ್ವಾಮೀಜಿಗಳಲ್ಲ: ಸಿದ್ದರಾಮಯ್ಯ, ಸಿಎಂ
ಸಿಎಂ ಮತ್ತು ಡಿಸಿಎಂ ಆಯ್ಕೆ ಮಾಡೋದು ಸ್ವಾಮೀಜಿಗಳಲ್ಲ: ಸಿದ್ದರಾಮಯ್ಯ, ಸಿಎಂ
ಸ್ವಾಮೀಜಿಗಳು ಹೇಳುತ್ತಿರುವ ಹಿಂದೆ ಬಿಜೆಪಿ ಕೈವಾಡ ಇರಬಹುದು: ಚಲುವರಾಯಸ್ವಾಮಿ
ಸ್ವಾಮೀಜಿಗಳು ಹೇಳುತ್ತಿರುವ ಹಿಂದೆ ಬಿಜೆಪಿ ಕೈವಾಡ ಇರಬಹುದು: ಚಲುವರಾಯಸ್ವಾಮಿ
ದರ್ಶನ್ ನಡೆದು ಬಂದ ಹಾದಿಯ ಬಗ್ಗೆ ಸಾರಾ ಗೋವಿಂದು ವಿಶ್ಲೇಷಣೆ
ದರ್ಶನ್ ನಡೆದು ಬಂದ ಹಾದಿಯ ಬಗ್ಗೆ ಸಾರಾ ಗೋವಿಂದು ವಿಶ್ಲೇಷಣೆ
ತೆರಿಗೆ ಹಣ ಹಂಚಿಕೆ ತಾರತಮ್ಯವಾದರೆ ಪ್ರತಿಭಟನೆ ನಡೆಸುವ ಬಗ್ಗೆ ಸಿಎಂ ಸುಳಿವು
ತೆರಿಗೆ ಹಣ ಹಂಚಿಕೆ ತಾರತಮ್ಯವಾದರೆ ಪ್ರತಿಭಟನೆ ನಡೆಸುವ ಬಗ್ಗೆ ಸಿಎಂ ಸುಳಿವು
ಹುಬ್ಬಳ್ಳಿ: ಕಿಮ್ಸ್​​​ ನೂತನ ಕಟ್ಟಡದ ಚಾವಣಿಯ ಪಿಒಪಿ ಕುಸಿತ, ತಪ್ಪಿದ ದುರಂತ
ಹುಬ್ಬಳ್ಳಿ: ಕಿಮ್ಸ್​​​ ನೂತನ ಕಟ್ಟಡದ ಚಾವಣಿಯ ಪಿಒಪಿ ಕುಸಿತ, ತಪ್ಪಿದ ದುರಂತ
ಹಿರೀಕ ರಾಜಣ್ಣ ಶ್ರೀಗಳ ಬಗ್ಗೆ ಎಚ್ಚರದಿಂದ ಮಾತಾಡಬೇಕು: ನಿಖಿಲ್ ಕುಮಾರಸ್ವಾಮಿ
ಹಿರೀಕ ರಾಜಣ್ಣ ಶ್ರೀಗಳ ಬಗ್ಗೆ ಎಚ್ಚರದಿಂದ ಮಾತಾಡಬೇಕು: ನಿಖಿಲ್ ಕುಮಾರಸ್ವಾಮಿ
ನಿನ್ನೆ ನಾನು ಕರೆದ ಸಭೆ ಸೌಹಾರ್ದಯುತ ವಾತಾವರಣದಲ್ಲಿ ನಡೆಯಿತು: ಸಿದ್ದರಾಮಯ್ಯ
ನಿನ್ನೆ ನಾನು ಕರೆದ ಸಭೆ ಸೌಹಾರ್ದಯುತ ವಾತಾವರಣದಲ್ಲಿ ನಡೆಯಿತು: ಸಿದ್ದರಾಮಯ್ಯ