Aero India 2023: ಏರೋ ಇಂಡಿಯಾ ಹಿನ್ನಲೆ ನಗರದ ಈ ರಸ್ತೆಗಳಲ್ಲಿ ಸಂಚಾರ ನಿಷೇಧ; ಪರ್ಯಾಯ ರಸ್ತೆ ಮಾರ್ಗ ಇಲ್ಲಿದೆ ನೋಡಿ
Bangalore Air Show 2023: ಯಲಹಂಕ ವಾಯುನೆಲೆಯಲ್ಲಿ ಫೆ 13ರಿಂದ ‘ಏರೋ ಇಂಡಿಯಾ ಏರ್ಶೋ’ ವೈಮಾನಿಕ ಪ್ರದರ್ಶನ ನಡೆಯಲಿದೆ. ಹೀಗಾಗಿ ನಗರದ ಹಲವು ರಸ್ತೆಗಳಲ್ಲಿ ಕೆಲವೊಂದು ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಪರಿಯಾಯ ಮಾರ್ಗಗಳು ಇಲ್ಲಿದೆ ನೋಡಿ.
ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ಫೆ 13ರಿಂದ ‘ಏರೋ ಇಂಡಿಯಾ (Aero India 2023) ಏರ್ಶೋ’ ವೈಮಾನಿಕ ಪ್ರದರ್ಶನ (Air Show 2023) ನಡೆಯಲಿದೆ. ಹೀಗಾಗಿ ನಗರದ ಹಲವು ರಸ್ತೆಗಳಲ್ಲಿ ಲಾರಿ ಟ್ರಕ್, ಖಾಸಗಿ ಬಸ್, ಭಾರಿ ಮತ್ತು ಮಧ್ಯಮ ಸರಕು ಸಾಗಣೆ ವಾಹನ ಹಾಗೂ ಟ್ರ್ಯಾಕ್ಟರ್ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಇಂತಹ ವಾಹನಗಳ ಸಂಚಾರಕ್ಕೆ ಪರಿಯಾಯ ಮಾರ್ಗಗಳನ್ನು ಸೂಚಿಸಲಾಗಿದೆ. ಅವುಗಳು ಈ ಕೆಳಗಿನಂತಿವೆ.
ಬೆಂಗಳೂರು ಸಂಪರ್ಕಿಸುವ ನಾಲ್ಕು ಪ್ರಮುಖ ರಸ್ತೆಗಳಲ್ಲಿ ನಿಷೇಧ
- ಬಳ್ಳಾರಿ ರಸ್ತೆಯಲ್ಲಿ – ಮೇಕ್ರಿ ಸರ್ಕಲ್ನಿಂದ ಎಂವಿಐಟಿ ಗೇಟ್ವರೆಗೂ ಎರಡೂ ದಿಕ್ಕಿನಲ್ಲಿ ನಿಷೇಧ (ಬಿಎಂಟಿಸಿ ಕೆಎಸ್ಆರ್ಟಿಸಿ ಹೊರತುಪಡಿಸಿ)
- ಗೊರಗುಂಟೆಪಾಳ್ಯದಲ್ಲಿ ಹೆಬ್ಬಾಳ – ಹೆಣ್ಣೂರು ಕ್ರಾಸ್ವರೆಗೆ ಎರಡೂ ದಿಕ್ಕಿನಲ್ಲಿ
- ನಾಗವಾರ ಜಂಕ್ಷನ್ನಿಂದ – ಥಣಿಸಂದ್ರ ಮುಖ್ಯರಸ್ತೆ – ಬಾಗಲೂರು ಮುಖ್ಯರಸ್ತೆ – ರೇವಾ ಕಾಲೇಜ್ ಜಂಕ್ಷನ್ವರೆಗೆ
- ಬೆಂಗಳೂರು ತುಮಕೂರು ರಸ್ತೆಯಲ್ಲಿ ಚಿಕ್ಕಬಾಣಾವರ ಕಡೆಯಿಂದ ಹೆಸರಘಟ್ಟ – ಯಲಹಂಕ ರಸ್ತೆಯಲ್ಲಿ ನಿಷೇಧ
ಪರ್ಯಾಯ ಮಾರ್ಗಗಳು
- ಚಿಕ್ಕಬಳ್ಳಾಪುರ ಕಡೆಯಿಂದ ಬರುವ ವಾಹನಗಳು ದೇನನಹಳ್ಳಿಯಿಂದ ದೊಡ್ಡಬಳ್ಳಾಪುರ – ದಾಬಸ್ ಪೇಟೆ ಮೂಲಕ ಸಂಚರಿಸುವುದು
- ಕೆ.ಆರ್.ಪುರಂ – ಹೊಸೂರು – ಚನ್ನೈ – ಬೆಂಗಳೂರು ಮಾರ್ಗದ ಮುಖಾಂತರ ಹೊಸಕೋಟೆ ರಸ್ತೆಯಲ್ಲಿ ಸಂಚರಿಸುವುದು
- ತುಮಕೂರು ರಸ್ತೆಯಿಂದ ಬರುವ ವಾಹನಗಳು – ಸಿಎಂಟಐ ಜಂಕ್ಷನ್ನಲ್ಲಿ ಬಲ ತಿರುವು ಪಡೆದು – ಸುಮನಹಳ್ಳಿ – ನಾಯಂಡಹಳ್ಳಿ ಸರ್ಕಲ್ – ಕನಕಪುರ ರಸ್ತೆ ಮೂಲಕ ಸಂಚಾರ ಮಾಡುವುದು.
ಪಾರ್ಕಿಂಗ್ ನಿಷೇಧಿತ ಏರಿಯಾಗಳು
- ನಾಗೇನಹಳ್ಳಿ ಗೇಟ್ನಿಂದ ಗಂಟಿಗಾಟನಹಳ್ಳಿ ಮಾರ್ಗವಾಗಿ – ಬಳ್ಳಾರಿ ರಸ್ತೆಯ ಎರಡೂ ಬದಿ ಪಾರ್ಕಿಂಗ್ ನಿಷೇಧ
- ಮೇಕ್ರಿ ಸರ್ಕಲ್ನಿಂದ ದೇವನಹಳ್ಳಿವರೆಗೆ ಎರಡು ಬದಿ ಪಾರ್ಕಿಂಗ್ ನಿಷೇಧ
- ಗೊರಗುಂಟೆಪಾಳ್ಯದಿಂದ – ಹೆಣ್ಣೂರು ಕ್ರಾಸ್ ಜಂಕ್ಷನ್ವರೆಗೆ ಎರಡೂ ಬದಿ ನಿಷೇಧ
- ಬಾಗಲೂರು ಮುಖ್ಯ ರಸ್ತೆಯಿಂದ – ರೇವಾವರೆಗೆ ಎರಡೂ ಬದಿ
- ನಾಗವಾರ ಜಂಕ್ಷನ್ ನಿಂದ ಬಾಗಲೂರು ಜಂಕ್ಷನ್ವರೆಗೆ ಪಾರ್ಕಿಂಗ್ ನಿಷೇಧ
ಯಲಹಂಕ ವಾಯು ನೆಲೆಯಲ್ಲಿ ಫೆಬ್ರವರಿ 13 ರಿಂದ ಈ ಏರ್ ಶೋಗಳು ನಡೆಯಲಿದ್ದು, ಫೆಬ್ರವರಿ 17ರವರೆಗೆ ಈ ಮಾರ್ಗಸೂಚಿಗಳು ಅನ್ವಯವಾಗಲಿವೆ. ಬೆಳಗ್ಗೆ 6 ರಿಂದ ರಾತ್ರಿ 8 ಗಂಟೆವರೆಗೆ ಏರ್ಶೋ ದಿನದಂದು ಈ ನಿಯಮ ಅನ್ವಯ ಆಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:41 pm, Fri, 10 February 23