ಬೆಂಗಳೂರಿನಲ್ಲಿ ಒಮಿಕ್ರಾನ್ ಪತ್ತೆ ಬೆನ್ನಲ್ಲೇ ಕರುನಾಡಿಗೆ ಕಾಡುತ್ತಿದೆ ಕೊರೊನಾ ಮೂರನೆ ಅಲೆ ಆತಂಕ, ನಗರದಲ್ಲಿ ಕಟ್ಟೆಚ್ಚರ

| Updated By: ಆಯೇಷಾ ಬಾನು

Updated on: Dec 03, 2021 | 8:58 AM

ಬೆಂಗಳೂರಿನಲ್ಲಿ ಒಮಿಕ್ರೋನ್ ಪತ್ತೆಯಾದ ಹಿನ್ನಲೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ದಿಗ್ಬಂಧನ ಹಾಕಲು ತಯಾರಿ ನಡೆಯುತ್ತಿದೆ. ಒಮಿಕ್ರೋನ್ ಸೋಂಕಿತರ ಸಂಪರ್ಕಿತರ ಎಲ್ಲರ ಟ್ರಾವಲ್ ಹಿಸ್ಟರಿಯೂ ಬೆಂಗಳೂರಿನಲ್ಲಿಯೇ ಪತ್ತೆಯಾಗಿದ್ದು ಬೆಂಗಳೂರಿನಲ್ಲಿ ಕಟ್ಟೆಚ್ಚರ ವಹಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

ಬೆಂಗಳೂರಿನಲ್ಲಿ ಒಮಿಕ್ರಾನ್ ಪತ್ತೆ ಬೆನ್ನಲ್ಲೇ ಕರುನಾಡಿಗೆ ಕಾಡುತ್ತಿದೆ ಕೊರೊನಾ ಮೂರನೆ ಅಲೆ ಆತಂಕ, ನಗರದಲ್ಲಿ ಕಟ್ಟೆಚ್ಚರ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಇಬ್ಬರ ಮೇಲೆ ಒಮಿಕ್ರಾನ್ ವೈರಸ್ ದಾಳಿ ಮಾಡಿದೆ. ಇದರಿಂದಾಗಿ ಬಸವನಗುಡಿ ಹಾಗೂ ಬೊಮ್ಮನಹಳ್ಳಿ ಡೇಂಜರ್ ಜೋನ್ನಲ್ಲಿವೆ. ಸದ್ಯ ಈಗ ರಾಜ್ಯಕ್ಕೆ ಕೊರೊನಾ ಮೂರನೇ ಅಲೆ ಶುರುವಾಯ್ತಾ ಎಂಬ ಆತಂಕ ಉಂಟಾಗಿದೆ.

ಈ ಹಿಂದೆಯೇ ತಜ್ಞರು ಡಿಸೆಂಬರ್ ಕೊನೆ ಅಥವಾ ಜನವರಿ ಆರಂಭದಲ್ಲಿ ಮೂರನೇ ಅಲೆ ಬರುವ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿದ್ದರು. ಕೊರೊನಾ ರೂಪಾಂತರಿಯಾದ್ರೆ ಮೂರನೇ ಅಲೆ ಎದುರಾಗುತ್ತೆ ಅಂದಿದ್ರು. ತಜ್ಞರ ಸೂಚನೆಯಂತೆ ರಾಜ್ಯಕ್ಕೆ ಒಮಿಕ್ರಾನ್ ಹೊಸ ತಳಿಯಿಂದ ಮೂರನೇ ಅಲೆಯ ಆತಂಕ ಎದುರಾಗಿದೆ. ನಿತ್ಯ ಕೇಸ್ಗಳ ಸಂಖ್ಯೆ ಸಾವಿರಕ್ಕೆ ಏರಿಕೆಯಾದ್ರೆ ಮೂರನೇ ಅಲೆ ಆರಂಭ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಸದ್ಯ ಕೊರೊನಾ ನಿಯಂತ್ರಣದಲ್ಲಿದೆ. ಕೇಸ್ ಏರಿಕೆಯತ್ತ ಸಾಗಿದ್ರೆ ಕರುನಾಡಿಗೆ ಆಪತ್ತು ಕಾದಿದೆ.

ಬೆಂಗಳೂರಿನಲ್ಲಿ ಒಮಿಕ್ರೋನ್ ಪತ್ತೆಯಾದ ಹಿನ್ನಲೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ದಿಗ್ಬಂಧನ ಹಾಕಲು ತಯಾರಿ ನಡೆಯುತ್ತಿದೆ. ಒಮಿಕ್ರೋನ್ ಸೋಂಕಿತರ ಸಂಪರ್ಕಿತರ ಎಲ್ಲರ ಟ್ರಾವಲ್ ಹಿಸ್ಟರಿಯೂ ಬೆಂಗಳೂರಿನಲ್ಲಿಯೇ ಪತ್ತೆಯಾಗಿದ್ದು ಬೆಂಗಳೂರಿನಲ್ಲಿ ಕಟ್ಟೆಚ್ಚರ ವಹಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಸಿಟಿಯಿಂದ ರಾಜ್ಯದ ಬೇರೆ ಬೇರೆ ಜಿಲ್ಲೆಗೆ ಹರಡದಂತೆ ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸುತ್ತಿದೆ. ಇಂದು ಸಿಎಂ ನೇತೃತ್ವದಲ್ಲಿ ಸಭೆ ಬಳಿಕ ಬೆಂಗಳೂರಿಗೆ ದಿಗ್ಬಂಧನ ಸಾಧ್ಯತೆ ಇದೆ.

ಆರೋಗ್ಯ ಇಲಾಖೆ, ಕೊವಿಡ್ ತಾಂತ್ರಿಕ ಸಲಹಾ ಸಮಿತಿ ತಜ್ಞರ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಚರ್ಚೆ ನಡೆಸಲಿದ್ದಾರೆ. ಸಭೆಯಲ್ಲಿ ಸರ್ಕಾರಕ್ಕೆ ಟಫ್ ರೂಲ್ಸ್ ಬಗ್ಗೆ ತಜ್ಞರು ಸಲಹೆ ನೀಡುವ ಸಾಧ್ಯತೆ ಇದೆ. ಬಿಬಿಎಂಪಿಯಿಂದಲೂ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಲಿದೆ. ಬೆಂಗಳೂರಿನಲ್ಲಿ ಸಭೆ, ಸಮಾರಂಭಗಳಿಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ.

ಒಮಿಕ್ರಾನ್ ಸೋಂಕಿತರ ಸಂಪರ್ಕದಲ್ಲಿದ್ದವರಿಗೆ ಸೋಂಕು
ಒಮಿಕ್ರಾನ್ ಸೋಂಕಿತರ ಸಂಪರ್ಕದಲ್ಲಿದ್ದ ಐವರಿಗೆ ಕೊರೊನಾ ದಾಳಿ ಮಾಡಿದೆ. 46 ವರ್ಷದ ಡಾಕ್ಟರ್ ಸಂಪರ್ಕದಲ್ಲಿದ್ದ ಮೂವರು ಪ್ರಾಥಮಿಕ ಸಂಪರ್ಕಿತರು ಹಾಗೂ ಇಬ್ಬರು ದ್ವಿತೀಯ ಸಂಪರ್ಕಿತರಿಗೆ ಕೊರೊನಾ ವಕ್ಕರಿಸಿದೆ. ಈ ಐವರ ಸ್ಯಾಂಪಲ್ಸ್ನ್ನು ಒಮಿಕ್ರಾನ್ ಟೆಸ್ಟ್ಗೆ ರವಾನೆ ಮಾಡಲಾಗಿದ್ದು, ಇಂದು ಅಥವಾ ನಾಳೆ ಐವರ ಒಮಿಕ್ರಾನ್ ಟೆಸ್ಟ್ ರಿಪೋರ್ಟ್ ಬರುವ ಸಾಧ್ಯತೆ ಇದೆ. ಸದ್ಯ ಸೋಂಕಿತರನ್ನು ಐಸೋಲೇಷನ್ನಲ್ಲಿಡಲಾಗಿದೆ. ಒಮಿಕ್ರಾನ್ ದಾಳಿಗೊಳಗಾಗಿರುವ ಇಬ್ಬರಿಗೆ ಬೌರಿಂಗ್ ಆಸ್ಪತ್ರೆಯ ಒಮಿಕ್ರಾನ್ ಸ್ಪೆಷಲ್ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಇದನ್ನೂ ಓದಿ: ಒಮಿಕ್ರಾನ್ ಡೆಲ್ಟಾಗಿಂತ ಡೇಂಜರ್ ಅಲ್ಲ, ಒಮಿಕ್ರಾನ್ ಮೊದಲು ಪತ್ತೆ ಹಚ್ಚಿದ ದಕ್ಷಿಣ ಆಫ್ರಿಕಾದ ಡಾಕ್ಟರ್ ಆ್ಯಂಜಲಿಕ್ ಹೇಳೋದೇನು?