ಬೆಂಗಳೂರು. ಮೇ.15: ಶಿಕ್ಷಣ ಇಲಾಖೆ (Education Department) ಶಾಲಾ ದಾಖಲಾತಿಗೆ ವಯೋಮಿತಿ ನಿರ್ಧಾರ ಮಾಡಿರುವ ಆದೇಶಕ್ಕೆ ಪೋಷಕರ ವಲಯದಲ್ಲಿ ಈ ಹಿಂದೆ ವ್ಯಾಪಕ ವಿರೋಧ ಕೇಳಿ ಬಂದಿತ್ತು. ಶಾಲೆಗೆ ಮಗು ದಾಖಲಾತಿ ಪಡೆಯಲು ಜುಲೈ 1ಕ್ಕೆ ಮಗು ಒಂದನೇ ತರಗತಿ ದಾಖಲಾಗಬೇಕು ಅಂದ್ರೆ 6 ವರ್ಷ ಪೂರೈಸುವುದು ಕಡ್ಡಾಯ ಮಾಡಿ ಆದೇಶ ಮಾಡಿದೆ. ಸದ್ಯ ಶಿಕ್ಷಣ ಇಲಾಖೆಯ ನಿರ್ಧಾರದಿಂದ ಸಾವಿರಾರು ವಿದ್ಯಾರ್ಥಿಗಳು ಎಲ್.ಕೆ.ಜಿಯಿಂದ ಹೊರಗಡೆ ಉಳಿಯಬೇಕಾದ ಸ್ಥಿತಿ ಎದುರಾಗಿದೆ. 4 ವರ್ಷ ಕಂಪ್ಲೀಟ್ ಆಗಿಲ್ಲ. ವಯೋಮಿತಿ 1 ತಿಂಗಳು ಕಡಿಮೆ ಇದ್ರೂ ಶಾಲೆಗಳು ದಾಖಲಾತಿ ನೀಡುತ್ತಿಲ್ಲ. ಹೀಗಾಗಿ ಪೋಷಕರು ಮಕ್ಕಳ ದಾಖಲಾತಿಗೆ ಈಗ ಅಡ್ಡ ಹಾದಿ ಹಿಡಿದಿದ್ದಾರೆ.
ಮಕ್ಕಳ ಶಾಲಾ ದಾಖಲಾತಿಗೆ ಅಡ್ಡ ದಾರಿ ಹಿಡಿದಿರುವ ಪೋಷಕರು ಮಕ್ಕಳನ್ನ ಶಾಲೆಗೆ ದಾಖಲು ಮಾಡಲು ಫೇಕ್ ಬರ್ಥ್ ಸರ್ಟಿಫಿಕೇಟ್ ನೀಡಲು ಮುಂದಾಗಿದ್ದಾರೆ. ಜೂನ್ 1ಕ್ಕೆ 1ನೇ ತರಗತಿಗೆ ದಾಖಲಾಗುವ ಮಕ್ಕಳ ವಯಸ್ಸು 6 ವರ್ಷ ಕಂಪ್ಲೀಟ್ ಆಗದ ಮಕ್ಕಳಿಗೆ ದಾಖಲಾತಿ ನೀಡಲ್ಲ. ಒಂದು ತಿಂಗಳು ಕಡಿಮೆ ಇದ್ರೂ ದಾಖಲಾತಿಗೆ ಅವಕಾಶ ಇಲ್ಲ. ಹೀಗಾಗಿ ಕೆಲ ಫೋಷಕರು ಎಡವಟ್ಟು ಹಾದಿ ಹಿಡಿದಿದ್ದಾರೆ. ಬಿಬಿಎಂಪಿ ಕಡೆಯಿಂದ ಅಧಿಕಾರಿಗಳಿಗೆ ಹಣ ನೀಡಿ ನಕಲಿ ಡೇತ್ ಆಫ್ ಬರ್ಥ್ ಸರ್ಟಿಫಿಕೇಟ್ ನೀಡಿ ದಾಖಲಾತಿ ಮಾಡಿಸಲು ಮುಂದಾಗಿದ್ದಾರೆ. ವಯಸ್ಸು ದಾಖಲಾತಿಗೆ ಕಡಿಮೆಯಾದ್ರೆ ನಕಲಿ ಬರ್ಥ್ ಸರ್ಟಿಫಿಕೇಟ್ ನೀಡಿ ದಾಖಲಾತಿಗೆ ಮುಂದಾಗಿದ್ದಾರೆ. ಹೀಗಾಗಿ ಬಿಬಿಎಂಪಿ ಆಯುಕ್ತರಿಗೆ ಖಾಸಗಿ ಶಾಲೆಗಳ ಒಕ್ಕೂಟ ಪತ್ರ ಬರೆದು ಮನವಿಗೆ ಮುಂದಾಗಿದೆ. ಶಾಲಾ ಆಡಳಿತ ಮಂಡಳಿಗಳು ತಪ್ಪಾದ ನಕಲಿ ಸರ್ಟಿಫಿಕೇಟ್ ಗೆ ಕಡಿವಾಣಕ್ಕೆ ಬಿಬಿಎಂಇಎ ಒತ್ತಾಯ ಶುರು ಮಾಡಿದೆ.
ಇದನ್ನೂ ಓದಿ: ಕಾರ್ಖಾನೆಯಲ್ಲಿ ಎಲ್ಪಿಜಿ ಅನಿಲ ಸೋರಿಕೆಯಿಂದ ಬೆಂಕಿ; ಕಾರ್ಮಿಕ ಸಾವು
ಖಾಸಗಿ ಶಾಲೆಗಳು ಪೂರ್ವ ಪ್ರಾಥಮಿಕ ಮಕ್ಕಳ ದಾಖಲಾತಿಗೆ ವಯೋಮಿತಿ ಷರತ್ತು ಹಾಕುತ್ತಿದ್ದಾರೆ. ಪೂರ್ವ ಪ್ರಾಥಮಿಕ ಶಾಲಾ ಮಕ್ಕಳ ದಾಖಲಾತಿಗೆ 2024 ಜೂನ್ 1 ಕ್ಕೆ ನಾಲ್ಕು ವರ್ಷ ತುಂಬಿರಬೇಕು ಈ ಷರತ್ತಿನ ಮೇಲೆ ಮಕ್ಕಳಿಗೆ LKG ದಾಖಲಾತಿ ನೀಡುತ್ತಿವೆ. 2024 ಜೂನ್ 1 ಕ್ಕೆ ನಾಲ್ಕು ವರ್ಷಕ್ಕೆ ಒಂದು ದಿನ ಕಡಿಮೆ ಇದ್ರೂ LKG ದಾಖಲಾತಿ ನೀಡುತ್ತಿಲ್ಲ. ಜೂನ್ 1 ಕ್ಕೆ ನಾಲ್ಕು ವರ್ಷಕ್ಕೆ ಒಂದು ದಿನ ಕಡಿಮೆ ಇದ್ರು ಮಗು ಮನೆಯಲ್ಲಿಯೇ ಇರಬೇಕಾದ ಸ್ಥಿತಿ ಎದುರಾಗಿದೆ. ಶಾಲೆಗಳ ಈ ಷರತ್ತಿಗೆ ಪೋಷಕರು ಕಂಗಾಲಾಗಿದ್ದಾರೆ. ಹೀಗಾಗಿ ಅಡ್ಡ ಹಾದಿ ಹಿಡಿದಿದ್ದಾರೆ. ಪಾಲಿಕೆ ನಕಲಿ ಬರ್ಥ್ ಸರ್ಟಿಫಿಕೇಟ್ ನೀಡಿದ್ರೆ ಕ್ರಮವಹಿಸುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಇನ್ನು ಜೂನ್ 1ಕ್ಕೆ 6 ವರ್ಷ ಪೂರ್ಣವಾಗದ ಮಗುವಿಗೆ 1 ನೇ ತರಗತಿ ದಾಖಲಾತಿ ನೀಡುತ್ತಿಲ್ಲ. 1 ನೇ ತರಗತಿ ದಾಖಲಾತಿ ನೀಡದ ಹಿನ್ನಲೆ ಮಕ್ಕಳು ಅನಿವಾರ್ಯವಾಗಿ ಕಿಂಡರ್ ಗಾರ್ಡನ್, ನರ್ಸರಿ ಶಾಲೆಗೆ ಸೇರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಹಿಂದೆ LKG ದಾಖಲಾತಿಗೆ 3.5 ತಿಂಗಳು ಹಾಗೂ ಒಂದನೇ ತರಗತಿಗೆ 5.5 ತಿಂಗಳು ವಯೋಮಿತಿ ನಿಗಧಿ ಮಾಡಿತ್ತು. ಆದ್ರೆ 2023-24 ರಲ್ಲಿ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವಂತೆ ಶಿಕ್ಷಣ ಇಲಾಖೆ ಹೊಸ ಆದೇಶ ಮಾಡಿದೆ. ಮಕ್ಕಳನ್ನು ಸೇರಿಸಲು ವಯೋಮಿತಿ ನಿಗದಿ ಮಾಡಿ ಶಿಕ್ಷಣ ಇಲಾಖೆ ಈ ಹಿಂದೆಯೇ ಆದೇಶ ಮಾಡಿತ್ತು. ಜೂನ್ ಒಂದನೇ ತಾರೀಖಿಗೆ ಕಡ್ಡಾಯವಾಗಿ ಮಗುವಿನ ವಯಸ್ಸು 6 ವರ್ಷ ಪೂರ್ಣಗೊಂಡಿರಬೇಕು, ಜೂನ್ 1ಕ್ಕೆ 6 ವರ್ಷ ಪೂರ್ಣಗೊಂಡ ಮಗು ನೇರವಾಗಿ ಒಂದನೇ ತರಗತಿಗೆ ದಾಖಲಾತಿ ಮಾಡಲು ವಯೋಮಿತಿ ನಿಗದಿ ಮಾಡಿತ್ತು. ಆದರೆ ಪೋಷಕರ ತೀವ್ರ ವಿರೋಧ ಬಳಿಕ ಈ ಆದೇಶ ತಿದ್ದುಪಡಿ ಮಾಡಿ 2025-26ಕ್ಕೆ ಮೂಂದುಡಿತ್ತು. ಆದ್ರೆ ಕೆಲವು ಶಾಲೆಗಳು ಈಗಲೇ ಈ ರೂಲ್ಸ್ ಫಾಲೋ ಮಾಡ್ತೀವೆ.
ಒಂದು ಶೈಕ್ಷಣಿಕ ವರ್ಷ ಮೊದಲಿಂದಲೇ ಈ ಆದೇಶ ಫಾಲೋ ಮಾಡ್ತೀವೆ. ಈಗ LKG ಹಾಗೂ UKG ಮಕ್ಕಳನ್ನ ಕಡಿಮೆ ವಯಸ್ಸಿಗೆ ಅಂದ್ರೆ 3.5ಗೆ ದಾಖಲಾತಿ ಮಾಡಿಕೊಂಡ್ರೆ ಮುಂದೆ 2025-26 ಕ್ಕೆ 1 ನೇ ತರಗತಿಗೆ ಮಕ್ಕಳು ಬಂದಾಗ 6 ವರ್ಷ ಕಂಪ್ಲೀಟ್ ಆಗದೆ ಇದ್ರೆ ಸಮಸ್ಯೆ ಅಂತಾ ಈಗಲೇ ವಯೋಮಿತಿ ಫಾಲೋ ಮಾಡ್ತೀವೆ. ಇದರಿಂದ ಪೋಷಕರಿಗೆ ದಾಖಲಾತಿ ಟೆನ್ಷನ್ ಶುರುವಾಗಿದ್ದು ಅಡ್ಡ ಹಾದಿ ಹಿಡಿದಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:05 am, Wed, 15 May 24