ದೇವೇಗೌಡರ ಮನೆಯಿಂದ ರೇವಣ್ಣ ತೆರಳಿದ ಬಳಿಕ ಮಾಜಿ ಪ್ರಧಾನಿಯನ್ನು ಭೇಟಿಯಾಗಲು ಬಂದ ಮುನಿರತ್ನ ನಾಯ್ಡು

ದೇವೇಗೌಡರ ಮನೆಯಿಂದ ರೇವಣ್ಣ ತೆರಳಿದ ಬಳಿಕ ಮಾಜಿ ಪ್ರಧಾನಿಯನ್ನು ಭೇಟಿಯಾಗಲು ಬಂದ ಮುನಿರತ್ನ ನಾಯ್ಡು

ಅರುಣ್​ ಕುಮಾರ್​ ಬೆಳ್ಳಿ
|

Updated on: May 14, 2024 | 7:13 PM

ದೇವೇಗೌಡರು ತುಂಬಾ ಸೊರಗಿದಂತೆ ಕಾಣುತ್ತಾರೆ, ಸದಾ ಕ್ಲೀನಾಗಿ ಶೇವ್ ಮಾಡಿಕೊಳ್ಳುತ್ತಿದ್ದ ಅವರು ಎರಡು ವಾರಗಳಿಂದ ಶೇವ್ ಮಾಡಿಕೊಂಡಿರದಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. 92 ರ ಇಳಿಪ್ರಾಯದಲ್ಲೂ ಉತ್ಸಾಹ ಮತ್ತು ಆತ್ಮವಿಶ್ವಾಸ ಅವರ ಮುಖದಲ್ಲ್ಲಿ ಎದ್ದು ಕಾಣುತಿತ್ತು. ಅದರೆ ಇತ್ತೀಚಿನ ವಿದ್ಯಮಾನಳಿಂದ ಅವರು ಜರ್ಝರಿತರಾಗಿದ್ದಾರೆ.

ಬೆಂಗಳೂರು: ನಗರದ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನ ಮಂತ್ರಿ ಹೆಚ್ ಡಿ ದೇವೇಗೌಡರ (former PM HD Devegowda) ಮನೆ ಇವತ್ತು ಮಧ್ಯಾಹ್ನದಿಂದ ಚಟುವಟಿಕೆಯ ಕೇಂದ್ರವಾಗಿದೆ. ನಾವು ಆಗಲೇ ವರದಿ ಮಾಡಿರುವಂತೆ ಮಹಿಳೆಯೊಬ್ಬರ ಅಪಹರಣದ ಆರೋಪದಲ್ಲಿ ಜೈಲಿಗೆ ಹೋಗಿ ಜಾಮೀನು ಪಡೆದು ಹೊರಬಂದಿರುವ ಶಾಸಕ ಹೆಚ್ ಡಿ ರೇವಣ್ಣ (HD Revanna) ನೇರವಾಗಿ ಇಲ್ಲಿಗೆ ಆಗಮಿಸಿದ್ದರು. ಅವರನ್ನು ನೋಡಲು ಜೆಡಿಎಸ್ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ದೇವೇಗೌಡರ ಮನೆ ಬಳಿ ಬಂದಿದ್ದರು. ಎಲ್ಲರೊಂದಿಗೆ ಮಾತಾಡಿ ಕೊಂಚ ಹೊತ್ತು ವಿಶ್ರಮಿಸಿಕೊಂಡ ಬಳಿಕ ರೇವಣ್ಣ ಹೊಳೆನರಸೀಪುರಕ್ಕೆ ತೆರಳಿದರು, ಅವರು ನಿರ್ಗಮಿಸಿದ ಸ್ವಲ್ಪ ಸಮಯದಲ್ಲೇ ರಾಜರಾಜೇಶ್ವರಿನಗರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು (Munirathna Naidu) ದೇವೇಗೌಡರ ಮನೆಗೆ ಆಗಮಿಸಿದರು. ಅವರು ಬಂದ ಕಾರಣವೇನು ಅನ್ನೋದು ಗೊತ್ತಾಗಿಲ್ಲ. ಅವರೊಂದಿಗೆ ಕುಳಿತಿರುವ ದೇವೇಗೌಡರನ್ನು ನೋಡಿ. ತುಂಬಾ ಸೊರಗಿದಂತೆ ಕಾಣುತ್ತಾರೆ, ಸದಾ ಕ್ಲೀನಾಗಿ ಶೇವ್ ಮಾಡಿಕೊಳ್ಳುತ್ತಿದ್ದ ಅವರು ಎರಡು ವಾರಗಳಿಂದ ಶೇವ್ ಮಾಡಿಕೊಂಡಿರದಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. 92 ರ ಇಳಿಪ್ರಾಯದಲ್ಲೂ ಉತ್ಸಾಹ ಮತ್ತು ಆತ್ಮವಿಶ್ವಾಸ ಅವರ ಮುಖದಲ್ಲ್ಲಿ ಎದ್ದು ಕಾಣುತಿತ್ತು. ಅದರೆ ಇತ್ತೀಚಿನ ವಿದ್ಯಮಾನಳಿಂದ ಅವರು ಜರ್ಝರಿತರಾಗಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕುಮಾರಸ್ವಾಮಿ ಬಗ್ಗೆ ಸಂವೇದನೆರಹಿತ ಕಾಮೆಂಟ್ ಮಾಡುವ ಅವಿವೇಕಿ ಇಕ್ಬಾಲ್ ಹುಸ್ಸೇನ್ ಬಾಬರ್ ಸಂತತಿಯವನು: ಮುನಿರತ್ನ ನಾಯ್ಡು