ರೇವಣ್ಣ ಕಣ್ಣೀರು ಹಾಕುವಂತೆ ಮಾಡಿದವರಿಗೆ ಒಕ್ಕಲಿಗರ ಶಕ್ತಿಯೇನು ಅಂತ ತೋರಿಸ್ತೀವಿ: ರೇವಣ್ಣ ಅಭಿಮಾನಿಗಳು
ಹಾಸನ ಜಿಲೆಯ ಜನರು ಕಣ್ಣೀರು ಸುರಿಸುವಂತೆ ಸರ್ಕಾರ ಮಾಡಿದೆ. ಅವರನ್ನು ಕಂಡು ರೇವಣ್ಣ ಸಹ ಕಣ್ಣೀರಿಟ್ಟಿದ್ದಾರಂತೆ. ಹಾಗಾಗಿ ಅವರ ಕಣ್ಣೀರು ವ್ಯರ್ಥ ಹೋಗಲು ಬಿಡಲ್ಲ, ಮುಂಬರುವ ದಿನಗಳಲ್ಲಿ ಒಕ್ಕಲಿಗರ ಶಕ್ತಿ ಏನು ಅಂತ ತೋರಿಸುತ್ತೇವೆ ಎಂದು ಅವರು ಹೇಳುತ್ತಾರೆ.
ಬೆಂಗಳೂರು: ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣರನ್ನು (HD Revanna) ಬಂಧಿಸಿ 3-4 ದಿನಗಳ ಕಾಲ ಜೈಲಿನಲ್ಲಿಟ್ಟಿದ್ದಕ್ಕೆ ಅವರ ಆಭಿಮಾನಿಗಳು ಮತ್ತು ಪಕ್ಷದ ಹಾಸನ ಕಾರ್ಯಕರ್ತರು ರೊಚ್ಚಿಗೆದಿದ್ದಾರೆ. ರೇವಣ್ಣ ಇಂದು ಜಾಮಿನು ಪಡೆದು ಹೊರಬಂದ ವಿಷಯ ಗೊತ್ತಾಗುತ್ತಿದ್ದಂತೆಯೇ ಅವರನ್ನು ಭೇಟಿಯಾಗಿ ಮಾತಾಡಿಸಲು ಹಾಸನ, ಹೊಳೆನರಸೀಪುರ ಮತ್ತು ಹಾಸನ ಜಿಲ್ಲೆಯ ಬೇರೆ ಬೇರೆ ಊರುಗಳಿಂದ ಜನ ಬಂದಿದ್ದರು. ರೇವಣ್ಣರನ್ನು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ (HD Devegowda) ಮನೆಯಲ್ಲಿ ಮನೆಯಲ್ಲಿ ಮಾತಾಡಿಸಿ ಬಂದ ಅಭಿಮಾನಿಗಳು ಮಾಧ್ಯಮದವರ (media) ಜೊತೆ ಮಾತಾಡಲು ಮುಗಿಬಿದ್ದರು. ಹಾಗಾಗಿ, ಅವರ ಮಾತು ಸ್ಪಷ್ಟವಾಗಿ ಕೇಳದ ಸನ್ನಿವೇಶ ಸೃಷ್ಟಿಯಾಯಿತು. ಎಲ್ಲರಿಗೂ ರೋಷದಲ್ಲಿ, ಆವೇಶದಲ್ಲಿ ಮಾತಾಡುವ ಕಾತುರ. ಅವರೆಲ್ಲ ಹೇಳುವುದನ್ನು ಕ್ರೋಢೀಕರಿಸಿ ನೋಡುವುದಾದರೆ, ರೇವಣ್ಣ ಅಮಾಯಕರು ಮತ್ತು ಸುಳ್ಳು ಕೇಸಲ್ಲಿ ಅವರನ್ನು ಬಂಧಿಸಿ ಜೈಲಿಗೆ ಕಳಿಸಲಾಗಿತ್ತು. ಹಾಸನ ಜಿಲೆಯ ಜನರು ಕಣ್ಣೀರು ಸುರಿಸುವಂತೆ ಸರ್ಕಾರ ಮಾಡಿದೆ. ಅವರನ್ನು ಕಂಡು ರೇವಣ್ಣ ಸಹ ಕಣ್ಣೀರಿಟ್ಟಿದ್ದಾರಂತೆ. ಹಾಗಾಗಿ ಅವರ ಕಣ್ಣೀರು ವ್ಯರ್ಥ ಹೋಗಲು ಬಿಡಲ್ಲ, ಮುಂಬರುವ ದಿನಗಳಲ್ಲಿ ಒಕ್ಕಲಿಗರ ಶಕ್ತಿ ಏನು ಅಂತ ತೋರಿಸುತ್ತೇವೆ ಎಂದು ಅವರು ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಜೈಲಿಂದ ನೇರವಾಗಿ ದೇವೇಗೌಡರ ಮನೆಗೆ ಬಂದಿರುವ ಹೆಚ್ ಡಿ ರೇವಣ್ಣರನ್ನು ನೋಡಲು ಸಾವಿರಾರು ಜನರ ಜಮಾವಣೆ