ರೇವಣ್ಣ ರಿಲೀಸ್ ಬೆನ್ನಲ್ಲೇ ಹಾಸನದಲ್ಲಿ ಪ್ರೀತಂಗೌಡ ಆಪ್ತರ ಮನೆ, ಬಾರ್ ಸೇರಿ 6 ಕಡೆಗಳಲ್ಲಿ ಎಸ್ಐಟಿ ದಾಳಿ
ಜೈಲು ಸೇರಿದ್ದ ಹೆಚ್ಡಿ ರೇವಣ್ಣ(HD Revanna) ಅವರು ಇಂದು(ಮೇ.14) ಜೈಲಿನಿಂದ ಹೊರಬಂದಿದ್ದಾರೆ. ಇದರ ಬೆನ್ನಲ್ಲೇ ಇತ್ತ ಹಾಸನ(Hassan)ದಲ್ಲಿ ಮಾಜಿ ಶಾಸಕ ಪ್ರೀತಂಗೌಡ(Preetham Gowda) ಅವರ ಆಪ್ತರ ಮನೆ, ಕಚೇರಿ, ಬಾರ್ ಸೇರಿ 6 ಕಡೆ ಎಸ್ಐಟಿ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಚಿಂಚೂ ಮಾಹಿತಿಯನ್ನು ಜಾಲಾಡುತ್ತಿದ್ದಾರೆ.
ಹಾಸನ, ಮೇ.14: ಸಂಸದ ಪ್ರಜ್ವಲ್ ರೇವಣ್ಣ ಅವರದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಕಡೆ ಸಂತ್ರಸ್ಥ ಮಹಿಳೆಯರ ಅಪಹರಣ ಮಾಡಿದ ಆರೋಪದ ಮೇಲೆ ಜೈಲು ಸೇರಿದ್ದ ಹೆಚ್ಡಿ ರೇವಣ್ಣ(HD Revanna) ಅವರು ಇಂದು(ಮೇ.14) ಜೈಲಿನಿಂದ ಹೊರಬಂದಿದ್ದಾರೆ. ಇದರ ಬೆನ್ನಲ್ಲೇ ಇತ್ತ ಹಾಸನ(Hassan)ದಲ್ಲಿ ಮಾಜಿ ಶಾಸಕ ಪ್ರೀತಂಗೌಡ(Preetham Gowda) ಅವರ ಆಪ್ತರ ಮನೆ, ಕಚೇರಿ ಸೇರಿ 6 ಕಡೆ ಎಸ್ಐಟಿ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಹೌದು, ಪ್ರೀತಂಗೌಡ ಆಪ್ತ ಉದ್ಯಮಿ ಶರತ್ ಅವರ ಒಡೆತನದ ಬಿಎಂ ರಸ್ತೆಯ ಬಾರ್, ಲಾಡ್ಜ್ ಹಾಗೂ ಗೌರಿಕೊಪ್ಪಲಿನಲ್ಲಿರುವ ನಿವಾಸದಲ್ಲಿ ದಾಳಿ ಮಾಡಿದ್ದಾರೆ. ಇನ್ನುಳಿದಂತೆ ಲೋಕಸಭೆಗೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದ ಕಿರಣ್ ಎಂಬುವವರ ಹೊಟೇಲ್, ಬಿಜೆಪಿ ಮುಖಂಡ ವಲ್ಲಭಾಯ್ ರೋಡ್ ಪುನಿತ್ ಅವರ ವಿವೇಕ ನಗರದ ಮನೆ, ವಕೀಲ ದೇವರಾಜೇಗೌಡ ಅವರ ಹಾಸನದ ರವೀಂದ್ರ ನಗರದ ಮನೆ ಹಾಗೂ ಹೊಳೆನರಸೀಪುರದ ಕಛೇರಿ ಸೇರಿ ಒಟ್ಟು ಆರು ಕಡೆ ಏಕ ಕಾಲದಲ್ಲಿ ದಾಳಿ ನಡೆಸಿದ ಎಸ್ ಐ ಟಿ ದಾಳಿ ನಡೆಸಿ, ಅಶ್ಲೀಲ ವೀಡಿಯೋ ಇದ್ದ ಪೆನ್ ಡ್ರೈವ್ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಚಿಂಚೂ ಮಾಹಿತಿಯನ್ನು ಜಾಲಾಡುತ್ತಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ