ಹಾಸನ ನಗರದಲ್ಲಿರುವ ವಕೀಲ ದೇವರಾಜೇಗೌಡನ ಮನೆ ಮೇಲೆ ಎಸ್ಐಟಿ ಅಧಿಕಾರಿಗಳ ದಾಳಿ, ತಪಾಸಣೆ
ಪ್ರೀತಂ ಗೌಡರ ಇಬ್ಬರು ಅಪ್ತರನ್ನು ಬಂಧಿಸಿದ ಬಳಿಕ ತನಿಖೆ ಚುರುಕುಗೊಂಡಿದೆ ಮತ್ತು ಅದರ ಪರಿಣಾಮವಾಗಿಯೇ ಇಂದು ನಗರದಲ್ಲಿ ಎಸ್ಐಟಿ ಅಧಿಕಾರಿಗಳು ದಾಳಿಗಳನ್ನು ನಡೆಸಿದ್ದಾರೆ ಎನ್ನಲಾಗುತ್ತಿದೆ. ಏತನ್ಮಧ್ಯೆ, ಮಹಿಳೆಯೊಬ್ಬರ ಅಪಹರಣದ ಆರೋಪದಲ್ಲಿ ಜೈಲು ಸೇರಿದ್ದ ಹೆಚ್ ಡಿ ರೇವಣ್ಣ ಅವರಿಗೆ ಜಾಮೀನು ಸಿಕ್ಕಿದ್ದು ಇವತ್ತು ಹೊರಬಂದಿದ್ದಾರೆ.
ಹಾಸನ: ಪ್ರಸ್ತುತವಾಗಿ ಹೊಳೆನರಸೀಪುರ ವಶದಲ್ಲಿರುವ ವಕೀಲ ಮತ್ತು ಬಿಜೆಪಿ ಮುಖಂಡ ಡಿ ದೇವರಾಜೇಗೌಡರ (D Devarajegowda) ಹಾಸನದಲ್ಲಿರುವ ಮನೆ ಮೇಲೆ ಎಸ್ಐಟಿ ಅಧಿಕಾರಿಗಳು (SIT sleuths) ತಪಾಸಣೆ ನಡೆಸಿದರು. ಒಳಗೇನು ನಡೆಯಿತು ಅಂತ ಹೊರಗಡೆ ನಿಂತಿದ್ದ ಮಾಧ್ಯಮದವರಿಗೆ ಗೊತ್ತಾಗಲಿಲ್ಲ. ಆದರೆ ಹಾಸನ ನಗರದಲ್ಲಿ ಇವತ್ತು ತನಿಖಾ ದಳದ ಅಧಿಕಾರಿಗಳು ಭಾರೀ ಸಕ್ರಿಯರಾಗಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಬಿಜೆಪಿ ಶಾಸಕ ಪ್ರೀತಂ ಜೆ ಗೌಡ (Preetham J Gowda) ಅವರ ಆಪ್ತರ ಹೋಟೆಲ್, ಬಾರ್ ಮತ್ತು ಕಚೇರಿಗಳ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪ್ರಜ್ವಲ್ ರೇವಣ್ಣ ಅಶ್ಲೀಲ ಟೇಪ್ ಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಜನ ಮತ್ತು ವಿರೋಧ ಪಕ್ಷ ಗಳು ಸಂಶಯ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಎಸ್ಐಟಿ ದಾಳಿಗಳು ಹೆಚ್ಚು ಮಹತ್ವಪಡೆದುಕೊಳ್ಳುತ್ತವೆ. ಪ್ರೀತಂ ಗೌಡರ ಇಬ್ಬರು ಅಪ್ತರನ್ನು ಬಂಧಿಸಿದ ಬಳಿಕ ತನಿಖೆ ಚುರುಕುಗೊಂಡಿದೆ ಮತ್ತು ಅದರ ಪರಿಣಾಮವಾಗಿಯೇ ಇಂದು ನಗರದಲ್ಲಿ ಎಸ್ಐಟಿ ಅಧಿಕಾರಿಗಳು ದಾಳಿಗಳನ್ನು ನಡೆಸಿದ್ದಾರೆ ಎನ್ನಲಾಗುತ್ತಿದೆ. ಏತನ್ಮಧ್ಯೆ, ಮಹಿಳೆಯೊಬ್ಬರ ಅಪಹರಣದ ಆರೋಪದಲ್ಲಿ ಜೈಲು ಸೇರಿದ್ದ ಹೆಚ್ ಡಿ ರೇವಣ್ಣ ಅವರಿಗೆ ಜಾಮೀನು ಸಿಕ್ಕಿದ್ದು ಇವತ್ತು ಹೊರಬಂದಿದ್ದಾರೆ. ವಿದೇಶಕ್ಕೆ ಹಾರಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ಬಗ್ಗೆ ಇದುವರೆಗೆ ಯಾವುದೇ ಸುದ್ದಿಯಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪ: ವಕೀಲ ದೇವರಾಜೇಗೌಡ ಪೊಲೀಸರಿಗೆ ಸಿಕ್ಕಿದ್ದು ಹೇಗೆ? ಇಲ್ಲಿದೆ ಓದಿ