ಬೆಂಗಳೂರು: ಕೆಎಸ್ಆರ್ಟಿಸಿ ಮುಡಿಗೆ ಮತ್ತೊಂದು ಪ್ರಶಸ್ತಿಯ ಗರಿ ದೊರೆತಿದೆ. ಕೆಎಸ್ಆರ್ಟಿಸಿ(KSRTC) ಮಂಗಳೂರು ವಿಭಾಗಕ್ಕೆ ಎಕೆಎಎಂ(Azadika Ka Amruth Mahostav )ಪ್ರಶಸ್ತಿ ಸಿಕ್ಕಿದೆ. ಸಿಬ್ಬಂದಿಯ ಆನ್ಲೈನ್ ಇ ನಾಮಿನೇಷನ್ ಪ್ರಕ್ರಿಯೆ ಪೂರ್ಣವಾಗಿದ್ದು, ಆನ್ಲೈನ್ ಇ ನಾಮಿನೇಷನ್ ಪ್ರಕ್ರಿಯೆ ಪೂರ್ಣಗೊಳಿಸಿದ್ದಕ್ಕೆ ಪ್ರಶಸ್ತಿ(Award) ನೀಡಲಾಗುತ್ತಿದೆ. ಅಖಿಲ ಭಾರತ ಮಟ್ಟದಲ್ಲಿ ಆಯ್ಕೆಯಾದ ಮೊದಲ 3 ಅಗ್ರ ಸ್ಥಾನಗಳಲ್ಲಿ ಒಂದಾಗಿದ್ದ ಮಂಗಳೂರು ವಿಭಾಗಕ್ಕೆ ನಿನ್ನೆ ಗುವಾಹಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪದಾನ ಮಾಡಲಾಗಿದೆ. ವರ್ಚ್ಯುವಲ್ ಮೂಲಕ ಕಾರ್ಮಿಕ ಹಾಗೂ ಉದ್ಯೋಗ ಸಚಿವ ಭೂಪೇಂದರ್ ಯಾದವ್ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಮಂಗಳೂರು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ, ಅರುಣ ಎಸ್.ಎನ್ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.
ಇನ್ಮುಂದೆ ಮೊಬೈಲ್ ಆ್ಯಪ್ನಲ್ಲೇ ಸಿಗಲಿದೆ ಬಿಎಂಟಿಸಿ ಬಸ್ ಪಾಸ್
ಬೆಂಗಳೂರು: ಬಿಎಂಟಿಸಿ ಬಸ್ ಪಾಸ್ಗಾಗಿ ಇನ್ನೂ ಮುಂದಿನ ದಿನಗಳಲ್ಲಿ ಬಸ್ ನಿಲ್ದಾಣಕ್ಕೆ ಭೇಟಿ ನೀಡುವ ಅಗತ್ಯ ಇಲ್ಲ. ಇಷ್ಟು ದಿನ ಪ್ರಯಾಣಿಕರ ಪಾಸ್ ಪೇಪರ್ ಫಾರ್ಮಟ್ನಲ್ಲಿ ಇರುತ್ತಿತ್ತು. ಆದರೆ ಈಗ, ನಿಮ್ಮ ಮೊಬೈಲ್ನಲ್ಲೇ ಬಸ್ ಪಾಸ್ ಸಿಗಲಿದೆ. ಮೊಬೈಲ್ ಫೋನ್‌ನ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಪ್ರಯಾಣಿಸುವುದಕ್ಕೆ ಬಿಎಂಟಿಸಿ ಅವಕಾಶ ನೀಡಿದೆ.
ಖಾಸಗಿ ಸಂಸ್ಥೆ ಟುಮೊಕ್ ಕಂಪೆನಿಯ ಸಹಭಾಗಿತ್ವದಲ್ಲಿ ಮೊಬೈಲ್ ಆ್ಯಪ್ ಪರಿಚಯ ಮಾಡಿದ್ದು, ಪ್ರಯಾಣಿಕರು ಇನ್ಮುಂದೆ ಬಸ್ ನಿಲ್ದಾಣಗಳಿಗೆ ಭೇಟಿ ನೀಡಿ ಪಾಸ್ ಖರೀದಿಸುವ ಅಗತ್ಯವಿಲ್ಲ. ವೊಲ್ವೋ ಬಸ್‌ಗಳ ನಿರ್ವಾಹಕರಿಗೆ ಇಟಿಎಂ ಮಿಷನ್ ಇರುತ್ತದೆ. ಅದರಲ್ಲಿ ಮೊಬೈಲ್‌ನಲ್ಲಿನ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಬಹುದು. ಪ್ರಯಾಣಿಕರಿಗೆ ಸಮಯ ಉಳಿಸಲು ಬಿಎಂಟಿಸಿ ವತಿಯಿಂದ ಹೊಸ ಪ್ರಯತ್ನ ನಡೆದಿದೆ. ಮುಂದಿನ ದಿನಗಳಲ್ಲಿ ಈ ಸೇವೆಗೆ ಚಾಲನೆ ನೀಡಲಾಗುತ್ತದೆ ಎಂದು ಬಿಎಂಟಿಸಿ ತಿಳಿಸಿದೆ.
ಇದನ್ನೂ ಓದಿ:
ಉಕ್ರೇನ್ನಿಂದ ಬಂದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯ ನೀಡಲು ಕೆಎಸ್ಆರ್ಟಿಸಿ ನಿರ್ಧಾರ
Published On - 8:18 pm, Sat, 12 March 22