ಉತ್ತರಾಖಂಡ್ನಲ್ಲಿ ಕೆಲಸ ನೋಡಿ ಮೋದಿಗೆ ವೋಟ್ ಹಾಕ್ತೀವಿ ಅಂದ್ರು, ಇದ್ರಲ್ಲಿ ನನ್ನ ಪ್ಲಾನು-ಪಾತ್ರ ಏನೂ ಇಲ್ಲ ಎಂದ ಉಸ್ತುವಾರಿ ಪ್ರಹ್ಲಾದ್ ಜೋಶಿ
ಉತ್ತರಖಂಡ್ ಮೇಲೆ ಮೋದಿಯವರಿಗೆ ಬಹಳ ವಿಶ್ವಾಸ ಇದೆ. ಇನ್ನೂ ಈ ಬಗ್ಗೆ ಪಕ್ಕಕ್ಕೆ ಬಂದು ಮಾಸ್ಕ್ ಹಾಕಿಕೊಂಡೇ ಖುದ್ದಾಗಿ ಜನರ ಅಭಿಪ್ರಾಯ ಕೇಳಿದ್ದೆ. ಮೋದಿಗೆ ವೋಟ್ ಹಾಕ್ತೀನಿ ಅಂದ್ರು, ಇದ್ರಲ್ಲಿ ನನ್ನ ಪ್ಲಾನ್ ಏನೂ ಇಲ್ಲ. ಇದು ಪ್ರಧಾನಿ ಮತ್ತು ರಾಷ್ಟ್ರೀಯ ಅಧ್ಯಕ್ಷರ ಕಾರ್ಯತಂತ್ರ ಅಷ್ಟೆ ಎಂದು ಉಸ್ತುವಾರಿ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಬೆಂಗಳೂರು: ಪ್ರಧಾನಿ ಮಂತ್ರಿ ಸಲಹೆ ಮೇರೆಗೆ ಉತ್ತರಖಾಂಡ್ನಲ್ಲಿ ಏನೇನು ಕೆಲಸ ಆಗಿದೆ? ಉತ್ತರಖಂಡ್ (Uttarakhand) ರಚನೆ ಆದಾಗಿಂದ ಏನೇನು ಆಗಿದೆ? 5 ವರ್ಷದಲ್ಲಿ ಏನೇನು ಕೆಲಸ ಆಗಿದೆ ಎಂಬುದುನ್ನ ಪಟ್ಟಿ ಮಾಡಿದ್ದೀವಿ. ಇದನ್ನು ಜನರಿಗೆ ತಲುಪಿಸಲು ಬಹುದೊಡ್ಡ ಆಂದೋಲನ ಹಮ್ಮಿಕೊಂಡಿದ್ದೀವಿ. ಒಂದ್ ಬೂತ್ನಲ್ಲಿ 10 ಸಭೆ ಮಾಡಿದ್ದೀವಿ. ಒಂದು ಬೂತ್ 50-100 ಜನ ಇರಬೇಕು. ಇದರಂತೆ 1 ಲಕ್ಷ 10 ಸಾವಿರ ಇರುವಂತೆ ಪ್ಲಾನ್ ಮಾಡಿದ್ದೇವು. ಆದರೆ ಹವಾಮಾನ ವೈಪರಿತ್ಯದಿಂದ 80 ಸಾವಿರ ಸಭೆ ಮಾಡಿದ್ದೇವು. 5 ಸಾವಿರ ಜನರಿಗೆ ಟ್ರೈನ್ ಅಪ್ ಮಾಡಿದ್ದೇವು. .ಊರು, ಮನೆ ಮನೆಗೆ ತೆರಳಿ ಗ್ರೌಂಡ್ ವರ್ಕ್ ಮಾಡಿದ್ವಿ. ನೀರು, ರಸ್ತೆ ಮೂಲಭೂತ ಸೌಕರ್ಯಗಳ ಬಗ್ಗೆ ಗಮನ ಹರಿಸಿದ್ವಿ. ಜನರಿಗೆ ನಾವು ಮಾಡಿದ್ದ ಸಾಧನೆಗಳ ಬಗ್ಗೆ ತಿಳಿಸಿದ್ವಿ. ಪ್ರಧಾನ ಮಂತ್ರಿಗಳ(Prime minister) ಜೊತೆ ನಡೆಸಿದ ಸಭೆ ಪರಿವರ್ತನೆ ಆಯ್ತು ಎಂದು ಉಸ್ತುವಾರಿ ಪ್ರಹ್ಲಾದ್ ಜೋಶಿ(Pralhad Joshi) ಹೇಳಿದ್ದಾರೆ.
ಬಳಿಕ ಉತ್ತರಾಖಂಡ್ ಗೆಲುವಿನ ಬಗ್ಗೆ ಮಾತನಾಡಿದ ಅವರು, ರಾಜ್ಯ ಮಟ್ಟದ ನಾಯಕರನ್ನ ಸಭೆ ಕರೆದು ಮಾತುಕತೆ ನಡೆಸಿದ್ವಿ. ಒಬ್ಬರು ಬ್ಯಾಕ್ ಮೇಲ್ ರೀತಿ ಮಾಡಿದ್ರು, ತಕ್ಷಣವೇ ಅವರನ್ನು ಟ್ರಾಪ್ ಔಟ್ ಮಾಡಿದ್ವಿ. ಪ್ರಧಾನಿ ಹಾಗೂ ನಡ್ಡಾ ಅವರು ಕೇಳಿದ್ರು ಹೇಗಿದೆ ಪ್ರಚಾರ ಅಂತ ಚೆನ್ನಾಗಿದೆ, ನೀವು ಬಂದ್ರೆ ತುಂಬಾ ಚೆನ್ನಾಗಿರುತ್ತೆ ಅಂದೆ. ಜನ ಮೋದಿ ಬಂದ್ರೆ ವೋಟ್ ಹಾಕ್ತೀವಿ ಅಂತ ಅಂತಿದ್ರು. ಅದಕ್ಕೆ ಮನವಿ ಮಾಡಿದೆ. ಇದಕ್ಕೆ ಸ್ಪಂದಿಸಿ ಪ್ರಚಾರಕ್ಕೆ ಬಂದ್ರು. ಮಹಿಳೆಯರು ಮೋದಿ ಬಾಬಾ ಕಾ ವೋಟ್ ದೇಂಗೆ ಅಂತ ಹೇಳ್ತಾಯಿದ್ರು. ಉತ್ತರಖಂಡ್ ರಚನೆ ಆದಾಗಿಂದ ಏನೂ ಅಭಿವೃದ್ಧಿ ಆಗಿರಲಿಲ್ಲ. ಅದು ಆಗಿದ್ದೇ ನಮ್ಮ ಸರ್ಕಾರದಲ್ಲಿ, ಅಲ್ಲಿ ಯಾವುದೇ ಸರ್ಕಾರ ರಿಪೀಟ್ ಆಗಿರಲಿಲ್ಲ. ಈಗ ಮತ್ತೆ ಬಿಜೆಪಿ ಬಂದಿದೆ ಖುಷಿ ಇದೆ. ಉತ್ತರಖಂಡ್ ಮೇಲೆ ಮೋದಿಯವರಿಗೆ ಬಹಳ ವಿಶ್ವಾಸ ಇದೆ. ಇನ್ನೂ ಈ ಬಗ್ಗೆ ಪಕ್ಕಕ್ಕೆ ಬಂದು ಮಾಸ್ಕ್ ಹಾಕಿಕೊಂಡೇ ಖುದ್ದಾಗಿ ಜನರ ಅಭಿಪ್ರಾಯ ಕೇಳಿದ್ದೆ. ಮೋದಿಗೆ ವೋಟ್ ಹಾಕ್ತೀನಿ ಅಂದ್ರು, ಇದ್ರಲ್ಲಿ ನನ್ನ ಪ್ಲಾನ್ ಏನೂ ಇಲ್ಲ. ಇದು ಪ್ರಧಾನಿ ಮತ್ತು ರಾಷ್ಟ್ರೀಯ ಅಧ್ಯಕ್ಷರ ಕಾರ್ಯತಂತ್ರ ಅಷ್ಟೆ ಎಂದು ತಿಳಿಸಿದ್ದಾರೆ.
ಜಗದೀಶ್ ಶೆಟ್ಟರ್ರನ್ನ ನಾವು ಸಂಪುಟ ಕೈಬಿಡಲಿಲ್ಲ: ಪ್ರಹ್ಲಾದ್ ಜೋಶಿ
ಕರ್ನಾಟಕ ಸಿಎಂ ಕೇಂದ್ರ ನಾಯಾಕರ ಜೊತೆ ಮಾತನಾಡಿದ್ದಾರೆ ಸಂಪುಟ ವಿಸ್ತರಣೆ ಆಗಬಹುದು. ಈ ರೀತಿ ಆಗೇ ಆಗುತ್ತೆ ಅಂತ ತೀರ್ಮಾನ ಆಗಿಲ್ಲ. ರಾಜ್ಯದ ನಾಯಕರು ಮಾತನಾಡಿದ್ರೆ ಕೇಂದ್ರದ ನಾಯಕರು ಅನುಮತಿ ನೀಡಬಹುದು ಅಥವಾ ಕೊಡದೇ ಇರಬಹುದು. ಬೇಕು ಬೇಡಗಳ ಅಗತ್ಯತೆಗಳನ್ನ ನೋಡಿಕೊಂಡು ತೀರ್ಮಾನಿಸುತ್ತಾರೆ. ಜಗದೀಶ್ ಶೆಟ್ಟರ್ರನ್ನ ನಾವು ಕೈಬಿಡಲಿಲ್ಲ. ಅವರಾಗಿಯೇ ಸ್ವ ಇಚ್ಚೆಯಿಂದ, ಉದಾರ ಹೃದಯದಿಂದ ಸಂಪುಟ ಸೇರಲ್ಲ ಅಂದಿದ್ದಾರೆ. ಯಾವುದೇ ದುರಹಂಕಾರದಿಂದ ಶೆಟ್ರು ಹೇಳಿಲ್ಲ. ಪಕ್ಷಕ್ಕೆ ಯುವಕರು ಬೇಕು, ಅನುಭವಸ್ತರು ಬೇಕು. ಪಕ್ಷ ಸಂಘಟನೆ ಚೆನ್ನಾಗಿ ನಡೀತಿದೆ. ನಳೀನ್ ಕುಮಾರ್ ನೇತೃತ್ವದಲ್ಲಿ ಇದೆಲ್ಲಾ ನಡೆಯುತ್ತಿದೆ. ಮತ್ತಷ್ಟು ಚುರುಕಾಗಿ ಕೆಲಸ ಮಾಡಬೇಕಿದೆ. ಈಗಲೂ ಮಾಡಬೇಕಿದೆ. ಮುಂದಿನ ಚುನಾವಣೆಯವರೆಗೆ ಬೊಮ್ಮಾಯಿಯವರೇ ಸಿಎಂ ಆಗಿರುತ್ತಾರೆ. ಮುಂದಿನ ಬಾರಿಯೂ ಬಿಜೆಪಿ ಸರ್ಕಾರವೇ ಅಸ್ತಿತ್ವಕ್ಕೆ ಬರುತ್ತದೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಮೇಕೆದಾಟು, ಮಹದಾಯಿ ಬಗ್ಗೆ ಮಾತನಾಡಲು ಕಾಂಗ್ರೆಸ್ಗೆ ಏನು ಅರ್ಹತೆ ಇದೆ?
ಯಾರು ಇಷ್ಟು ವರ್ಷ ಮೇಕೆದಾಟು, ಮಹದಾಯಿ ಯೋಜನೆಯನ್ನು ಮಂದಗತಿಗೊಳಿಸಿದ್ದು ? 75 ವರ್ಷ ಆಗಿದೆ ಸ್ವತಂತ್ರ ಸಿಕ್ಕು. ಸುಮಾರು 50-55 ವರ್ಷ ಕೇಂದ್ರದಲ್ಲಿ ಅನೇಕ ಸರ್ಕಾರಗಳು ಕಾಂಗ್ರೆಸ್ನ ಬೆಂಬಲದಲ್ಲಿ ಇತ್ತು. ಈಗ ಮೋದಿಯವರ ಸರ್ಕಾರ ಇದೆ. ಈ ಹಿಂದೆ ಕೇಂದ್ರ, ರಾಜ್ಯ, ಪಾಲಿಕೆ, ಗ್ರಾಮಪಂಚಾಯಿತಿ ಎಲ್ಲ ಕಡೆ ಕಾಂಗ್ರೆಸ್ ಸರ್ಕಾರ ಗುತ್ತಿಗೆ ಹಿಡಿದಿದ್ದರು. ಆಗ ಯಾಕೆ ಈ ಯೋಜನೆಗಳನ್ನ ಜಾರಿ ಮಾಡಿಲ್ಲ? ಇದೆಲ್ಲ ರಾಜಕಾರಣಕ್ಕೆ ಬಳಸಿಕೊಳ್ಳುವ ವಸ್ತುವಾಗಿದೆ. ಕಾಂಗ್ರೆಸ್ ಪಕ್ಷ ಒಂದು ಜನದ್ರೋಹಿ ಪಾರ್ಟಿಯಾಗಿದೆ. ಮೇಕೆದಾಟು, ಮಹದಾಯಿ ಬಗ್ಗೆ ಮಾತನಾಡಲು ಕಾಂಗ್ರೆಸ್ಗೆ ಏನು ಅರ್ಹತೆ ಇದೆ? ಕಾಂಗ್ರೆಸ್ನ ಭವಿಷ್ಯವನ್ನ ಜನ ನಿರ್ಧರಿಸುತ್ತಾರೆ. ರಾಜಸ್ಥಾನದಲ್ಲೂ ಬರುವ ಡಿಸೆಂಬರ್ನಲ್ಲಿ ಕಾಂಗ್ರೆಸ್ ಹೋಗುತ್ತೆ. ಕತಂ, ಗಯಾ, ಟಾಟಾ, ಬಾಯ್ ಅಂತ ರಾಹುಲ್ ಹೇಳಿದಂತೆ ಕಾಂಗ್ರೆಸ್ ಹಾಗೇ ಹೊರಟೋಗುತ್ತೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಆಪರೇಷನ್ ಗಂಗಾ ಕಂಪ್ಲೀಟ್ ಸಕ್ಸಸ್ ವಿಚಾರ
ವಿದ್ಯಾರ್ಥಿಗಳನ್ನ ಕರೆತಂದಿದ್ದು ಬಹುದೊಡ್ಡ ಸವಾಲಿನ ಕೆಲಸ. ಸುಮಾರು 22 ಸಾವಿರ ವಿದ್ಯಾರ್ಥಿಗಳಿದ್ದರು. ಅವರಿಗೆ ಭಾರತ ಸರ್ಕಾರ ಅಡ್ವಜರಿ ಕೊಟ್ಟಿತ್ತು. ಆದರೆ ಅಲ್ಲಿನ ವಿವಿಗಳು ಅನುಮತಿ ಕೊಟ್ಟಿರಲಿಲ್ಲ. ಶೆಲ್ಲಿಂಗ್, ಬಾಂಬ್ ಇವೆಲ್ಲ ನಡೆಯುತ್ತಿದ್ದ ವೇಳೆ ಬಹಳ ಕಷ್ಟ ಆಯ್ತು. ಯುದ್ಧದ ವೇಳೆ ಬಾಂಬ್ಗಳು ಎಕ್ಸ್ ಚೇಂಜ್ ಆಗುತ್ತಿದ್ದವು. ಯಾವ ದೇಶ ಕೂಡ ಇಷ್ಟು ನಾಜೂಕಾಗಿ ಕೆಲಸ ಮಾಡಿಲ್ಲ. ಪ್ರಧಾನಿ ಮೋಧಿ ಸಲಹೆ ಮೇರೆಗೆ ಇಷ್ಟೆಲ್ಲ ಕೆಲಸ ಆಗಿದೆ. ಭಾರತೀಯ ವಿದ್ಯಾರ್ಥಿಗಳನ್ನ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದೇವೆ. ಯುದ್ಧದ ವೇಳೆ ಉಕ್ರೇನ್ ಅಧ್ಯಕ್ಷರ ಸಂಪರ್ಕದಲ್ಲಿದ್ದು, ವಿದ್ಯಾರ್ಥಿಗಳ ರಕ್ಷಣೆ ಯಶಸ್ವಿಗೊಳಿಸಿದ್ವಿ. ಆರಂಭದಲ್ಲಿ ಉಕ್ರೇನ್ ಹಾಗೂ ರಷ್ಯಾ ಎರಡೂ ಪರಸ್ಪರ ಯುದ್ಧ ಮಾಡ್ತಿದ್ದವು. ಅಲ್ಲಿದ್ದ ವಿದ್ಯಾರ್ಥಿಗಳಿಗೆ ಊಟ, ನೀರಿನ ವ್ಯವಸ್ಥೆಯೇ ಇರಲಿ.ಲ್ಲ ಆಗ 4 ಜನ ಕೇಂದ್ರ ಸಚಿವರನ್ನ ಮೋದಿಯವರು ಅಲ್ಲಿಗೆ ಕಳಿಸಿದ್ರು. ಬಹುಶಃ ಇದೇ ಮೊದಲ ಬಾರಿಗೆ ಬಹುದೊಡ್ಡ ಕಾರ್ಯ ಆಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:
ಉಕ್ರೇನ್‌ನಲ್ಲಿ ನಿನ್ನೆ ಯುದ್ಧ ನಿಲ್ಲಿಸಿದ್ದು ಪ್ರಧಾನಿ ನರೇಂದ್ರ ಮೋದಿ: ಹಾಲಪ್ಪ ಆಚಾರ್ ಹೇಳಿಕೆ
Published On - 9:23 pm, Sat, 12 March 22