ಮುನೀಶ್ ಮೌದ್ಗೀಲ್ ಅವರಿಗೆ ಬಾಂಬೆ ಐಐಟಿ ಪುರಸ್ಕಾರ: ಪರಿಣಾಮಕಾರಿ ಆಡಳಿತಕ್ಕೆ ತಂತ್ರಜ್ಞಾನದ ಮೆರುಗು ಕೊಟ್ಟ ಸಾಧಕ
ಐಐಟಿ ಬಾಂಬೆ ತಾಂತ್ರಿಕ ಶಿಕ್ಷಣ ಸಂಸ್ಥೆಯ ಹಿರಿಯ ವಿದ್ಯಾರ್ಥಿಯಾಗಿರುವ ಮುನೀಶ್ ಮೌದ್ಗೀಲ್ ಕರ್ನಾಟಕದಲ್ಲಿ ಕೊವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಅಧಿಕಾರಿಯಾಗಿದ್ದರು
ಬೆಂಗಳೂರು: ಮುಂಬೈನಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ವತಿಯಿಂದ ಕರ್ನಾಟಕದ ಐಎಎಸ್ ಅಧಿಕಾರಿ ಮುನೀಶ್ ಮೌದ್ಗೀಲ್ ಅವರಿಗೆ ‘ಡಿಸ್ಟಿಂಗ್ವಿಶ್ಡ್ ಅಲ್ಯುಮನ್ಸ್ ಅವಾರ್ಡ್’ ನೀಡಿ ಗೌರವಿಸಲಾಯಿತು. ಹೊಮಿ ಬಾಬಾ ನ್ಯಾಷನಲ್ ಇನ್ಸ್ಟಿಟ್ಯೂಟ್ ಮತ್ತು ಐಐಟಿ ಬಾಂಬೆಯ ನಿರ್ದೇಶಕ ಸುಭಾಶಿಷ್ ಚೌದರಿ ಜಂಟಿಯಾಗಿ ಮುನೀಶ್ ಮೌದ್ಗೀಲ್ ಅವರನ್ನು ಅಭಿನಂದಿಸಿದರು. ಐಐಟಿ ಬಾಂಬೆ ತಾಂತ್ರಿಕ ಶಿಕ್ಷಣ ಸಂಸ್ಥೆಯ ಹಿರಿಯ ವಿದ್ಯಾರ್ಥಿಯಾಗಿರುವ ಮುನೀಶ್ ಮೌದ್ಗೀಲ್ ಕರ್ನಾಟಕದಲ್ಲಿ ಕೊವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಅಧಿಕಾರಿಯಾಗಿದ್ದರು. ಕೊವಿಡ್ ವಾರ್ರೂಮ್ ಉಸ್ತುವಾರಿ ಹೊತ್ತಿದ್ದ ಮುನೀಶ್ ಅವರಿಗೆ ಕೇಂದ್ರ ಸರ್ಕಾರವು ಉತ್ತಮ ಇ-ಆಡಳಿತಕ್ಕಾಗಿ ನೀಡುವ ಇ-ಗವರ್ನೆನ್ಸ್ ಜ್ಯೂರಿ ಅವಾರ್ಡ್ ಪುರಸ್ಕಾರವನ್ನೂ ಮುನೀಶ್ ನೀಡಿತ್ತು.
ಕೊವಿಡ್ ನಿರ್ವಹಣೆಗಾಗಿ ಬಳಕೆಯಾಗುತ್ತಿದ್ದ ವಿವಿಧ ಆ್ಯಪ್ಗಳನ್ನು ಒಂದೇ ಪ್ಲಾಟ್ಫಾರ್ಮ್ನಡಿಗೆ ತಂದಿದ್ದು ಮುನೀಶ್ ಅವರ ಹೆಗ್ಗಳಿಕೆ. ಹೋಮ್ ಐಸೊಲೇಶನ್, ಇಂಡೆಕ್ಸ್ ಮತ್ತು ಲೈನ್ ಟೆಸ್ಟಿಂಗ್ ಮೂಲಕ ಸೋಂಕಿತರು ಮತ್ತು ಸೋಂಕಿತರ ಸಂಬಂಧಿಕರನ್ನು ಗುರುತಿಸಿ, ನಿರ್ವಹಿಸಲು ಶ್ರಮಿಸಲಲಾಯಿತು. ಬೆಂಗಳೂರಿನಲ್ಲಿದ್ದ ವಾರ್ರೂಮ್ನೊಂದಿಗೆ ವಿವಿಧ ಜಿಲ್ಲೆ ಮತ್ತು ತಾಲ್ಲೂಕುಗಳ ಆಡಳಿತವನ್ನೂ ಬೆಸೆಯಲಾಯಿತು. ಆರೋಗ್ಯ ಇಲಾಖೆಯ ವಿವಿಧ ಹಂತಗಳ ಕಾರ್ಯಕರ್ತರು, ವೈದ್ಯರು, ತಜ್ಞರು ಮತ್ತು ಅಧಿಕಾರಿಗಳ ನಡುವೆ ಮಾಹಿತಿ ಹರಿವು ಸರಾಗವಾಗಿ ನಡೆಯುವಂತೆ ಗಮನ ಹರಿಸಲಾಯಿತು.
ಮುನೀಶ್ ಮೌದ್ಗೀಲ್ ಅವರಿಗೆ ಇದೀಗ ದೊರೆತಿರುವ ಬಾಂಬೆ ಐಐಟಿಯ ಪ್ರತಿಷ್ಠಿತ ಪುರಸ್ಕಾರವು ತಂತ್ರಜ್ಞಾನ ಬಳಕೆಯಲ್ಲಿ ಅವರಿಗೆ ಇರುವ ಸಾಮರ್ಥ್ಯಕ್ಕೆ ಸಿಕ್ಕ ಮನ್ನಣೆ ಎನಿಸಿದೆ. ಜನಪರ-ಜನಸ್ನೇಹಿಯಾಗಿ ಆಡಳಿತ ನಡೆಸುವ ಅಪರೂಪದ ಈ ಅಧಿಕಾರಿ ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಜನಪರಗೊಳಿಸಲು ಮತ್ತು ಜನರಿಗೆ ತಲುಪಿಸಲು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ.
ಪ್ರಸ್ತುತ ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (Department of Personal and Administrative Reforms) ಕಾರ್ಯದರ್ಶಿಯಾಗಿರುವ ಮುನೀಶ್ ಮೌದ್ಗೀಲ್ ಕೊವಿಡ್ ನಿರ್ವಹಣೆಯಲ್ಲಿ ಸಕ್ರಿಯ ಪಾತ್ರ ನಿರ್ವಹಿಸಿದ್ದರು. ಬಾಂಬೆ ಐಐಟಿಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. 2019-2020ರಲ್ಲಿ ಜಾತಿ, ವಾಸ ದೃಢೀಕರಣ ಮತ್ತು ಆದಾಯ ಪ್ರಮಾಣಪತ್ರಗಳನ್ನು ಆನ್ಲೈನ್ ಮೂಲಕ ನೀಡುವ ‘eKshana’ ಯೋಜನೆ ರೂಪಿಸಿ, ಜಾರಿ ಮಾಡಲು ಸಕ್ರಿಯ ಪಾತ್ರ ನಿರ್ವಹಿಸಿದ್ದರು. 2020-21ರಲ್ಲಿ ಕೊವಿಡ್ ನಿರ್ವಹಣೆಗಾಗಿ ಐಟಿ ಆಧರಿತ ನಿರ್ವಹಣಾ ವ್ಯವಸ್ಥೆ ರೂಪಿಸಿದ್ದರು.
‘ನನಗೆ ಆರೋಗ್ಯ ಕ್ಷೇತ್ರದಲ್ಲಿ ಆಸಕ್ತಿಯಿದೆ. ಅದನ್ನು ಇಡಿಯಾಗಿ ರೂಪಾಂತರಿಸುವ ಆಶಯವಿದೆ’ ಎಂದು ಮುನೀಶ್ ಅವರು ತಮ್ಮ ಲಿಂಕ್ಡ್ಇನ್ ಖಾತೆಯಲ್ಲಿ ಹೇಳಿದ್ದಾರೆ.
Delighted and humbled to share that .@iitbombay “Distinguished Alumnus Award” conferred on Munish Moudgil (IAS & IIT Bombay Alumnus) for public service, by Dr Anil Kakodkar,Chancellor,Homi Bhabha National Institute & IIT Bombay Director Subashis Choudhry .@IASassociation pic.twitter.com/Nb7zMNikVU
— D Roopa IPS (@D_Roopa_IPS) March 11, 2022
ಇದನ್ನೂ ಓದಿ: ತನಿಖೆಗೆ ಆದೇಶ ನೀಡಲು ಅಧಿಕಾರವಿದೆ: ಸಾ ರಾ ಮಹೇಶ್ ಆಪಾದನೆಗೆ ಮುನೀಶ್ ಮೌದ್ಗಿಲ್ ಉತ್ತರ
ಇದನ್ನೂ ಓದಿ: Karnataka Budget 2022: ಕರ್ನಾಟಕದಲ್ಲಿ 7 ನೂತನ ವಿಶ್ವವಿದ್ಯಾಲಯಗಳ ಸ್ಥಾಪನೆ; ಐಐಟಿ ಮಾದರಿಯಲ್ಲಿ ಕೆಐಟಿ
Published On - 10:21 am, Sun, 13 March 22