ಎಂಇಎಸ್ ರಾಜಕೀಯ ಪಕ್ಷ, ಕಾನೂನಾತ್ಮಕವಾಗಿ ಅದನ್ನು ನಿಷೇಧಿಸುವ ಬಗ್ಗೆ ಪರಿಶೀಲನೆ ಮಾಡಬೇಕಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಈ ಘಟನೆಯ ಹಿಂದೆ ಬಿಜೆಪಿ, ಕಾಂಗ್ರೆಸ್ನವರು ಇದ್ದಾರೆಂದು ಹೇಳಲಾಗಲ್ಲ. ರಾಜಕೀಯ ಉದ್ದೇಶಕ್ಕಾಗಿ ಕೆಲ ಪುಂಡರು ಈ ರೀತಿ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಸಮರ್ಥವಾಗಿದ್ದು, ಸೂಕ್ತ ಕ್ರಮಕೈಗೊಳ್ಳಲಿದೆ ಎಂದು ಸಂಸತ್ ಭವನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ದೆಹಲಿ: ಎಂಇಎಸ್ ಒಂದು ರಾಜಕೀಯ ಪಕ್ಷವಾಗಿದೆ. ಅದನ್ನು ಬ್ಯಾನ್ ಮಾಡಲು ಒಂದು ಕಾನೂನು ಇದೆ. ಪುಂಡರ ಮೇಲೆ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಹೀಗಾಗಿ ಪ್ರತಿಭಟನೆ, ಬಂದ್ ಮಾಡದಂತೆ ಬೆಳಗಾವಿಯಲ್ಲಿ ಸಚಿವ ಆರ್.ಅಶೋಕ್ ಮನವಿ ಮಾಡಿದ್ದಾರೆ. ಈ ವಿಚಾರವಾಗಿ ಸಂಸತ್ ಭವನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಎಂಇಎಸ್ (MES) ಪುಂಡರು ಬೆಳಗಾವಿಯಲ್ಲಿ ಅಟ್ಟಹಾಸ ಮೆರೆದಿರುವ ಸರಿಯಲ್ಲ. ಸಂಗೊಳ್ಳಿ ರಾಯಣ್ಣನ ಪ್ರತಿಮೆ ಭಗ್ನಗೊಳಿಸಿರುವುದು ಖಂಡನೀಯ. ಕೃತ್ಯವೆಸಗಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗಿದೆ. ಮತ್ತೊಮ್ಮೆ ಇಂತಹ ಕೃತ್ಯವೆಸಗದಂತೆ ಕ್ರಮ ಕೈಗೊಳ್ಳಬೇಕು. ಇನ್ನು ಛತ್ರಪತಿ ಶಿವಾಜಿ ಪ್ರತಿಮೆಗೆ ಮಸಿ ಬಳಿದಿರುವುದು ಖಂಡನೀಯ. ಮೊಘಲರ ವಿರುದ್ಧ ಶಿವಾಜಿ ಹೋರಾಡಿದ್ದರು. ಎಂಇಎಸ್ ಈಗಾಗಲೇ ರಾಜಕೀಯ ಪಕ್ಷವಾಗಿ ನೋಂದಣಿಯಾಗಿದೆ. ಹೀಗಾಗಿ ಕಾನೂನಾತ್ಮಕವಾಗಿ ನಿಷೇಧಿಸುವ ಬಗ್ಗೆ ಪರಿಶೀಲನೆ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.
ಈ ಘಟನೆಯ ಹಿಂದೆ ಬಿಜೆಪಿ, ಕಾಂಗ್ರೆಸ್ನವರು ಇದ್ದಾರೆಂದು ಹೇಳಲಾಗಲ್ಲ. ರಾಜಕೀಯ ಉದ್ದೇಶಕ್ಕಾಗಿ ಕೆಲ ಪುಂಡರು ಈ ರೀತಿ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಸಮರ್ಥವಾಗಿದ್ದು, ಸೂಕ್ತ ಕ್ರಮಕೈಗೊಳ್ಳಲಿದೆ ಎಂದು ಸಂಸತ್ ಭವನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ವಿಪಕ್ಷಗಳಿಗೆ ಮೋದಿಯವರ ಗೆಲುವು ಅರಗಿಸಿಕೊಳ್ಳಲು ಆಗುತ್ತಿಲ್ಲ: ಪ್ರಹ್ಲಾದ್ ಜೋಶಿ ವಿಪಕ್ಷಗಳಿಗೆ ಮೋದಿಯವರ ಗೆಲುವು ಅರಗಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ ವಿಪಕ್ಷಗಳು ಸಂಸತ್ ಅಧಿವೇಶನ ನಡೆಯಲು ಬಿಡಲಿಲ್ಲ. ಲೋಕಸಭೆ, ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಗದ್ದಲ ಎಬ್ಬಿಸಿವೆ. ಗದ್ದಲದಿಂದ ಅಧಿವೇಶನವನ್ನು ಮುಂದೂಡುವಂತಾಯಿತು. ಕುಟುಂಬದಿಂದ ಅಧಿಕಾರ ಕಿತ್ತುಕೊಂಡರಲ್ಲ ಎಂಬ ಸಿಟ್ಟು ಇದೆ ಅವರಿಗೆ. ಸದನ ನಡೆಯಲು ಬಿಡದಿರುವುದು ಪ್ರಜಾಪ್ರಭುತ್ವಕ್ಕೆ ಅಪಚಾರ. ಪ್ರತಿಪಕ್ಷಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಚಾರ ಮಾಡಿವೆ ಎಂದು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಬಳಿಕ ಮಾತನಾಡಿದ ಅವರು ಇಂದು ಸಂಸದ್ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಈ ಬಾರಿ ಅಧಿವೇಶನದಲ್ಲಿ 13 ವಿಧೇಯಕ ಮಂಡನೆಯಾಗಿದೆ. 13 ವಿಧೇಯಕಗಳ ಪೈಕಿ 11 ವಿಧೇಯಕ ಅಂಗೀಕಾರವಾಗಿದೆ. ಎಲೆಕ್ಷನ್ ಬಿಲ್ ಸೇರಿದಂತೆ ಹಲವು ಬಿಲ್ ಮಂಡನೆಯಾಗಿದೆ. ವಿರೋಧ ಪಕ್ಷದವರು ಚರ್ಚೆಯಿಂದ ಓಡಿಹೋದರು. ಸ್ಪೀಕರ್ ಅವರಿಗೆ ಚರ್ಚೆಗೆ ಅವಕಾಶವನ್ನು ನೀಡಿದರು. ಸುಮ್ಮನೆ ಚುನಾವಣೆ ಬಿಲ್ ಬಗ್ಗೆ ತಗಾದೆ ತೆಗೆದು ಗಲಾಟೆ ಮಾಡಿದರು. ಅತ್ಯಂತ ಕೆಟ್ಟದಾಗಿ ವರ್ತನೆಮಾಡಿ, ನಿಯಮ ಪುಸ್ತಕ ಹರಿಯೋದು ಮಾಡಿ ಅವಮಾನ ಮಾಡಿದರು ಎಂದು ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಸ್ತಾಪ ಇಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ 2023ರವರೆಗೂ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಇರುತ್ತಾರೆ. ರಾಜ್ಯದಲ್ಲಿ ಸಿಎಂ ಬೊಮ್ಮಾಯಿ ಬದಲಾವಣೆ ಪ್ರಸ್ತಾಪ ಹೈಕಮಾಂಡ್ ಮಟ್ಟದಲ್ಲಿ ಇಲ್ಲ. ಸಿಎಂ ಬೊಮ್ಮಾಯಿ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಈ ರೀತಿಯಾಗಿ ಹತ್ತು ಸಲ ಮಾತನಾಡಿರುವುದನ್ನು ಕೇಳಿದ್ದೇನೆ ಎಂದು ದೆಹಲಿಯಲ್ಲಿ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಇದನ್ನೂ ಓದಿ: ಕನ್ನಡದ ಬಾವುಟವನ್ನು ತೊಟ್ಟ ಅಂಗಿಯೊಳಗೆ ಬಚ್ಚಿಟ್ಟುಕೊಂಡು ಬೆಳಗಾವಿಯ ಸುವರ್ಣ ಸೌಧ ಪ್ರವೇಶಿಸಿದರು ಜೆಡಿ(ಎಸ್) ಶಾಸಕ ಅನ್ನದಾನಿ
Published On - 1:34 pm, Wed, 22 December 21