ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಕೇರಳದ ಶಾಸಕ ಪಿಟಿ ಥಾಮಸ್ ನಿಧನ

PT Thomas ತೃಕ್ಕಾಕ್ಕರ ಚುನಾವಣಾ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕ ಪಿಟಿ ಥಾಮಸ್ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿದ್ದರು.

ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಕೇರಳದ ಶಾಸಕ ಪಿಟಿ ಥಾಮಸ್ ನಿಧನ
ಪಿಟಿ ಥಾಮಸ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Dec 22, 2021 | 2:24 PM

ತಿರುವನಂತಪುರಂ: ತೃಕ್ಕಾಕ್ಕರ (Thrikkakkara) ಚುನಾವಣಾ ಕ್ಷೇತ್ರವನ್ನು ಪ್ರತಿನಿಧಿಸುವ ಕೇರಳ ವಿಧಾನಸಭೆಯ ಶಾಸಕ ಪಿಟಿ ಥಾಮಸ್ (PT Thomas)ಅವರು ಡಿಸೆಂಬರ್ 22 ಬುಧವಾರ ನಿಧನರಾದರು. ವೆಲ್ಲೂರು ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಬೆಳಗ್ಗೆ 10.10ಕ್ಕೆ ಕೊನೆಯುಸಿರೆಳೆದರು. ಅವರಿಗೆ  71 ವರ್ಷ ವಯಸ್ಸಾಗಿತ್ತು. ಥಾಮಸ್ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ(Kerala Pradesh Congress Committee) ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿದ್ದರು. ಅವರ ಸಹೋದ್ಯೋಗಿಗಳಿಗೆ ಅವರ ಕಾಯಿಲೆಯ ಬಗ್ಗೆ ತಿಳಿದಿತ್ತು ಆದರೆ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ ಎಂದು ಆಶಿಸುತ್ತಿದ್ದರು. ಪಿಟಿ ಥಾಮಸ್ ರಾಜ್ಯ ವಿಧಾನಸಭೆಯಲ್ಲಿ ತೃಕ್ಕಾಕ್ಕರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಅವರು ಎರಡು ಬಾರಿ ತೊಡುಪುಳ ಕ್ಷೇತ್ರವನ್ನೂ ಪ್ರತಿನಿಧಿಸಿದ್ದರು. ಇಡುಕ್ಕಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ ಮಾಜಿ ಸಂಸದರೂ ಆಗಿದ್ದಾರೆ ಥಾಮಸ್ ಕೆಎಸ್‌ಯು ಮೂಲಕ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ನಂತರ ಕಾಂಗ್ರೆಸ್ ಪಕ್ಷದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದರು. ಅವರು ಪರಿಸರವಾದಿ ಮತ್ತು ಲೇಖಕರು ಆಗಿದ್ದರು.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಪಿ.ಟಿ.ಥಾಮಸ್ ಅವರು ಯಾವಾಗಲೂ ಸಮಸ್ಯೆಗಳನ್ನು ಮಂಡಿಸುವ ಮತ್ತು ವಿಧಾನಸಭೆಯ ಒಳಗೆ ಮತ್ತು ಹೊರಗೆ ಸ್ಪಷ್ಟ ರಾಜಕೀಯ ನಿಲುವು ವ್ಯಕ್ತಪಡಿಸಿದ ವ್ಯಕ್ತಿ. ಅವರು ಉತ್ತಮ ವಾಗ್ಮಿ ಮತ್ತು ಸಂಘಟಕರಾಗಿದ್ದರು. ರಾಜ್ಯವು ಒಳ್ಳೆಯ ಸಂಸದರನ್ನು ಕಳೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.

ಪಿಟಿ ಥಾಮಸ್ ಅವರು ಶಕ್ತಿಯುತ ಮತ್ತು ಸಮರ್ಪಿತ ಸಮಾಜವಾದಿ ಮತ್ತು ಸಂಸದೀಯರಾಗಿ ಬಹಳ ಜನಪ್ರಿಯರಾಗಿದ್ದರು. ಪರಿಸರ ಸಂರಕ್ಷಣೆಯ ಪರವಾದ ಥಾಮಸ್ ಅವರ ನಿಲುವು ಕೂಡ ಗಮನಾರ್ಹವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಕೇರಳದ  ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಪಿಟಿ ಥಾಮಸ್ ಶಾಸಕರು ಕಾಂಗ್ರೆಸ್ ವಿಚಾರಗಳನ್ನು ಆಳವಾಗಿ ಇಟ್ಟುಕೊಂಡು ಅದರಂತೆ ನಡೆದುಕೊಂಡವರು ಎಂದು ಸಂಸದ ರಾಹುಲ್ ಗಾಂಧಿ ಹೇಳಿದರು. ನಿಧನರಾಗಿರುವುದು ಕಾಂಗ್ರೆಸ್ ನ ಖ್ಯಾತ ನಾಯಕ. ಅವರು ವ್ಯಕ್ತಿ ಮತ್ತು ಸಮುದಾಯಗಳನ್ನು ಒಟ್ಟಿಗೆ ಇಟ್ಟುಕೊಂಡು ಜಾತ್ಯತೀತತೆಯನ್ನು ಉಳಿಸಿದ ವ್ಯಕ್ತಿ ಎಂದು ರಾಹುಲ್ ಹೇಳಿದರು.

ಎರಡು ದಿನಗಳ ಭೇಟಿಗಾಗಿ ವಯನಾಡ್ ಕ್ಷೇತ್ರಕ್ಕೆ ಆಗಮಿಸಿದ ಅವರು ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದು ಕೊಚ್ಚಿ ತಲುಪಲಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಪಿಟಿ ಥಾಮಸ್ ಶಾಸಕರ ನಿಧನದ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ನಡೆಯಬೇಕಿದ್ದ ಕಾಂಗ್ರೆಸ್‌ನ ಎಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ಹೇಳಿದ್ದಾರೆ.  ಮೂರು ದಿನಗಳ ಶೋಕಾಚರಣೆ ಇರಲಿದೆ. ಪಿಟಿ ಥಾಮಸ್ ಮೃತದೇಹವನ್ನು ರಾತ್ರಿ ಕೊಚ್ಚಿಗೆ ತರಲಾಗುವುದು.

ಪಿಟಿ ಥಾಮಸ್ ಬದುಕಿನ ಬಗ್ಗೆ

ನಾಲ್ಕು ಬಾರಿ ಶಾಸಕರು, ಒಂದು ಬಾರಿ ಸಂಸದರಾಗಿದ್ದರು ಪಿಟಿ ಥಾಮಸ್.  ಪತ್ನಿ- ಉಮಾ ಥಾಮಸ್, ಮಕ್ಕಳು: ವಿಷ್ಣು ಥಾಮಸ್ ಮತ್ತು ವಿವೇಕ್ ಥಾಮಸ್.  ಡಿಸೆಂಬರ್ 12, 1950 ರಂದು ಇಡುಕ್ಕಿ ಜಿಲ್ಲೆಯ ರಾಜಮುಡಿಯ ಪುಥಿಯಪರಂಬಿಲ್‌ನ ಉಪ್ಪುತೋಡು ಎಂಬಲ್ಲಿ ಥಾಮಸ್ ಮತ್ತು ಅನ್ನಮ್ಮ ದಂಪತಿಗಳ ಮಗನಾಗಿ ಜನನ. ಅವರು ತೊಡುಪುಳದ ನ್ಯೂಮನ್ ಕಾಲೇಜು, ತಿರುವನಂತಪುರಂನ ಮಾರ್ ಇವಾನಿಯೋಸ್ ಕಾಲೇಜು, ಎರ್ನಾಕುಲಂನ ಮಹಾರಾಜ ಕಾಲೇಜು ಮತ್ತು ಎರ್ನಾಕುಲಂನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಶಿಕ್ಷಣ.

ಶಾಲೆಯಲ್ಲಿ ಓದುತ್ತಿರುವಾಗಲೇ ಪಿಟಿ ಥಾಮಸ್ ಕೆಎಸ್‌ಯು ಮೂಲಕ ರಾಜಕೀಯ ಜೀವನ ಆರಂಭಿಸಿದ್ದರು. ಕೆಎಸ್‌ಯು ಇಡುಕ್ಕಿ ಜಿಲ್ಲಾಧ್ಯಕ್ಷರಾಗಿ, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 1980ರಲ್ಲಿ ಯುವ ಕಾಂಗ್ರೆಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿಯಾದರು. 2007ರಲ್ಲಿ ಇಡುಕ್ಕಿ ಡಿಸಿಸಿ ಅಧ್ಯಕ್ಷರಾದರು.

ಕೆಪಿಸಿಸಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಎಐಸಿಸಿ ಸದಸ್ಯರಾಗಿ, ಯುವಜನ ಕಲ್ಯಾಣ ರಾಷ್ಟ್ರೀಯ ಸಮಿತಿಯ ನಿರ್ದೇಶಕರಾಗಿ, ಕೆಎಸ್‌ಯು ಮುಖವಾಣಿ ಕಲಾಶಾಲಾದ ಸಂಪಾದಕರಾಗಿ, ಚೆಪ್ಪ್ ಮ್ಯಾಗಜೀನ್‌ನ ಸಂಪಾದಕರಾಗಿ, ಕಲ್ಚರಲ್ ಆರ್ಗನೈಸೇಷನ್ ಆಫ್ ಕಲ್ಚರ್‌ನ ರಾಜ್ಯ ಅಧ್ಯಕ್ಷರಾಗಿ ಮತ್ತು ಕೇರಳ ಗ್ರಂಥಶಾಲಾ ಸಂಘದಕಾರ್ಯಕಾರಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

1991 ಮತ್ತು 2001 ರ ವಿಧಾನಸಭಾ ಚುನಾವಣೆಯಲ್ಲಿ ತೊಡುಪುಳದಿಂದ ಮತ್ತು 2016 ಮತ್ತು 2021 ರಲ್ಲಿ ತೃಕ್ಕಾಕ್ಕರದಿಂದ ಚುನಾವಣೆ ಗೆದ್ದಿದ್ದರು. 2009ರಲ್ಲಿ ಇಡುಕ್ಕಿ ಲೋಕಸಭಾ ಕ್ಷೇತ್ರದಿಂದ ಗೆದ್ದು ಸಂಸದರಾದರು. 1996 ಮತ್ತು 2006ರ ವಿಧಾನಸಭೆ ಚುನಾವಣೆಯಲ್ಲಿ ತೊಡುಪುಳದಲ್ಲಿ ಪಿ.ಜೆ.ಜೋಸೆಫ್ ವಿರುದ್ಧ ಪರಾಭವಗೊಂಡಿದ್ದರು.

ಪಿಟಿ ಥಾಮಸ್ ಅವರು ಯಾವಾಗಲೂ ಪರಿಸರ ಸಂರಕ್ಷಣೆಯ ಬಗ್ಗೆ ಬಲವಾದ ನಿಲುವು ತಳೆದಿದ್ದಾರೆ. ಗಾಡ್ಗೀಳ್ ವರದಿಯನ್ನು ಜಾರಿಗೆ ತರಬೇಕು ಎಂಬ ಥಾಮಸ್ ಅವರ ಒತ್ತಾಯಕ್ಕೆ ತೀವ್ರ ವಿರೋಧ ವ್ಯಕ್ತವಾದಾಗಲೂ ಅವರು ಅಚಲರಾಗಿದ್ದರು. ಕಿಟೆಕ್ಸ್ ಕಂಪನಿಯ ಕಾರ್ಯಚಟುವಟಿಕೆ ಕಡಂಬ್ರಯಾರ್ ನದಿ ಮಲಿನ ಮಾಡುತ್ತಿದೆ ಎಂಬ ಥಾಮಸ್ ಆರೋಪ ಹಾಗೂ ನಂತರದ ವಿವಾದವೇ ಭಾರೀ ಸುದ್ದಿಯಾಗಿತ್ತು. ಅವರು ‘ಎಡಿಬಿಯುಂ ಪ್ರತ್ಯಯಶಾಸ್ತ್ರಂಙಳುಂ’ ಎಂಬ ಪುಸ್ತಕವನ್ನು ಬರೆದಿದ್ದಾರೆ.

ಇದನ್ನೂ ಓದಿ: Anti-conversion laws ಭಾರತದಲ್ಲಿ ಧಾರ್ಮಿಕ ಮತಾಂತರವನ್ನು ರಾಜ್ಯಗಳು ಹೇಗೆ ಎದುರಿಸುತ್ತವೆ? ಯಾವ ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾನೂನು ಇದೆ?

Published On - 2:04 pm, Wed, 22 December 21

ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ