ಬೆಂಗಳೂರು: ಪಿಎಸ್ಐ (PSI), ಸಹಾಯ ಪ್ರಾಧ್ಯಾಪಕರ ನೇಮಕಾತಿ ಬಳಿಕ ಆರ್ಟಿಓ (RTO) ಮೋಟಾರು ವಾಹನ ನಿರೀಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ. ಕೆಪಿಎಸ್ಸಿ ಹಾಗೂ ಸಾರಿಗೆ ಇಲಾಖೆ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಹೇಳಲಾಗುತ್ತಿದ್ದು, ಕೆಪಿಎಸ್ಸಿಯಿಂದ 144 ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಆಗಿದೆ. 92 ಅನರ್ಹರನ್ನು ಒಳಗೊಂಡ 144 ಜನರ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗಿದೆ. ಆದರೆ ಕಳೆದ ವಾರ ಮತ್ತೆ ಬಿಡುಗಡೆ ಮಾಡಿದ ತಾತ್ಕಾಲಿಕ ನೇಮಕ ಪಟ್ಟಿಯಲ್ಲಿ ರಿಜೆಕ್ಟ್ ಆದ 92 ಅಭ್ಯರ್ಥಿಗಳ ಹೆಸರು ನಮೂದಾಗಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ.
ಕೆಪಿಎಸ್ಸಿ 2016ರಲ್ಲಿ ನೇರ ನೇಮಕಾತಿ ಬಗ್ಗೆ ಅಧಿಸೂಚನೆ ಹೊರಡಿಸಿತ್ತು. ವಿದ್ಯಾರ್ಹತೆ, ದೈಹಿಕ ಪರೀಕ್ಷೆ, ಹೆವಿ ಡಿಎಲ್ ಕಡ್ಡಾಯಗೊಳಿಸಿತ್ತು. ಸೇವಾನುಭವ ಹೊಂದಿರದ, ದೈಹಿಕ ಪರೀಕ್ಷೆಯಲ್ಲಿ ಆಯ್ಕೆ ಆಗದವರನ್ನ ರಿಜೆಕ್ಟ್ ಮಾಡಿತ್ತು. ಸ್ವತಃ ಕೆಪಿಎಸ್ಸಿ 2019 ರಲ್ಲಿ ತಾತ್ಕಾಲಿಕ ನೇಮಕ ಪಟ್ಟಿಯಲ್ಲಿ ಅನರ್ಹ ಅಭ್ಯರ್ಥಿಗಳನ್ನ ಹೆಸರು ಉಲ್ಲೇಖ ಮಾಡಿತ್ತು.ಆದರೆ ಕಳೆದ ವಾರ ಮತ್ತೆ ಬಿಡುಗಡೆ ಮಾಡಿದ ತಾತ್ಕಾಲಿಕ ನೇಮಕ ಪಟ್ಟಿಯಲ್ಲಿ ರಿಜೆಕ್ಟ್ ಆದ 92 ಅಭ್ಯರ್ಥಿಗಳ ಹೆಸರು ಕಂಡುಬಂದಿದೆ. ಹೀಗಾಗಿ ಇದರಲ್ಲಿ ಅಕ್ರಮ ನಡೆದಿದೆ ಎಂದು ಅಂತ ಅಭ್ಯರ್ಥಿಗಳು ಮಾಡುತ್ತಿದ್ದಾರೆ.
ಇನ್ನು ಪಿಎಸ್ಐ ನೇಮಕಾತಿಯಲ್ಲಿ ನಡೆದ ಅಕ್ರಮ ದಿನಕ್ಕೊಂದು ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ ಸಚಿವ ಅಶ್ವತ್ಥ್ ನಾರಾಯಣ ಅವರ ಹೆಸರು ಕೇಳಿಬಂದಿದೆ. ಕಿಂಗ್ಪಿನ್ಗಳ ಜತೆ ಮಧ್ಯವರ್ತಿಗಳಾಗಿ ಕೆಲವು ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಪೊಲೀಸ್ ಇಲಾಖೆಯ ಕೆಲವು ಹಿರಿಯ ಅಧಿಕಾರಿಗಳಿಂದಲೇ ಈ ಅಕ್ರಮ ಡೀಲ್ ನಡೆದಿರುವ ಅನುಮಾನ ಹೆಚ್ಚಾಗಿದೆ. ಕಿಂಗ್ಪಿನ್ ರುದ್ರಗೌಡ ಪಾಟೀಲ್ ಅಭ್ಯರ್ಥಿ ಪರ ಹಣ ಸಂದಾಯ ಮಾಡಿದ್ದಾನೆ. ಸದ್ಯ ಓರ್ವ ಅಧಿಕಾರಿ ಕರೆದು ಸಿಐಡಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ
ಗ್ಯಾಂಗ್ ರೇಪ್ ಆಗಿದೆ ಎಂದು ದೂರು ಕೊಡಲು ಹೋದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಪೊಲೀಸ್ ಅಧಿಕಾರಿ
ಐದು ಕೆಜಿಯ ಕೇಕ್ ಕತ್ತರಿಸಿ ಸಾಕು ಕುರಿಯ ಹುಟ್ಟುಹಬ್ಬ ಆಚರಿಸಿದ ಕುರಿ ವ್ಯಾಪಾರಿ; ಫೋಟೋಗಳು ಇಲ್ಲಿವೆ
Published On - 10:59 am, Wed, 4 May 22