2006ರ ಅಮಾನಾತ್ ಕೋ ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣ; 243.93 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ

| Updated By: ಆಯೇಷಾ ಬಾನು

Updated on: Mar 31, 2022 | 9:53 PM

ನಿಖೆ ಕೈಗೆತ್ತಿಕೊಂಡಿದ್ದ ಜಾರಿ ನಿರ್ದೇಶನಾಲಯ, 79.30 ಕೋಟಿ ಅಕ್ರಮವಾಗಿ ಸಂಪಾದನೆ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಆರೋಪಿಗಳ ಸಂಬಂಧಿಕರ ಹೆಸರಿನಲ್ಲಿದ್ದ 243.93 ಕೋಟಿ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.

2006ರ ಅಮಾನಾತ್ ಕೋ ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣ; 243.93 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ
ಅಮಾನಾತ್ ಕೋ ಆಪರೇಟಿವ್ ಬ್ಯಾಂಕ್
Follow us on

ಬೆಂಗಳೂರು: ಅಮಾನಾತ್ ಕೋ ಆಪರೇಟಿವ್ ಬ್ಯಾಂಕ್(Amanath Co-operative Bank) ವಂಚನೆ ಪ್ರಕರಣಕ್ಕೆ ಸಂಬಂಧಿಸಿ 243.93 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ(ED) ಜಪ್ತಿ ಮಾಡಿದೆ. 2006ರಲ್ಲಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ(Commercial Street Police Station) ವಂಚನೆ ಸಂಬಂಧ ಪ್ರಕರಣ ದಾಖಲಾಗಿತ್ತು.

ಬ್ಯಾಂಕ್ ಮಾಜಿ ಜನರಲ್ ಮ್ಯಾನೇಜರ್ ಮೊಹ್ಮದ್ ಅಸಾದುಲ್ಲಾ, ಬ್ಯಾಂಕ್ ಮಾಜಿ ಶಾಖಾ ವ್ಯವಸ್ಥಾಪಕ ಶಫಿವುಲ್ಲಾ, ಬ್ಯಾಂಕ್ ಮಾಜಿ ಅಕೌಂಟೆಂಟ್ ಹಿದಾಯತುಲ್ಲಾ ಸೇರಿದಂತೆ ಮೂವರಿಂದ ಹಣ ದುರುಪಯೋಗ ಆರೋಪ ಕೇಳಿಬಂದಿತ್ತು. ಸಂಬಂಧಿಕರು, ಅವರ ಸಂಸ್ಥೆಗಳ ಹೆಸರಿನಲ್ಲಿ ಹಣ ದುರುಪಯೋಗ ಮಾಡಲಾಗಿತ್ತು. ಸಂಬಂಧಿಕರ ಸಂಸ್ಥೆಗಳ ಹೆಸರಿನಲ್ಲಿ ಓವರ್‌ಡ್ರಾಫ್ಟ್ ಖಾತೆ ತೆರೆಯುವ ಮೂಲಕ‌ ಹಣ ದುರುಪಯೋಗ ಮಾಡಿದ್ದರು. 1997 ರಿಂದ 2002ರ ಅವಧಿಯಲ್ಲಿ ಸಂಬಂಧಿಕರ ಹೆಸರಲ್ಲಿ 50ಕ್ಕೂ ಹೆಚ್ಚು ಖಾತೆ ತೆರದು ಹಣ ವರ್ಗಾವಣೆ ಮಾಡಿದ್ದರು. ವಂಚನೆ ಬಗ್ಗೆ ಕಮಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಈ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿತ್ತು.

ನಂತರ ತನಿಖೆ ಕೈಗೆತ್ತಿಕೊಂಡಿದ್ದ ಜಾರಿ ನಿರ್ದೇಶನಾಲಯ, 79.30 ಕೋಟಿ ಅಕ್ರಮವಾಗಿ ಸಂಪಾದನೆ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಆರೋಪಿಗಳ ಸಂಬಂಧಿಕರ ಹೆಸರಿನಲ್ಲಿದ್ದ 243.93 ಕೋಟಿ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ: Bank Holidays: ಏಪ್ರಿಲ್​ನಲ್ಲಿ 30 ದಿನದ ಪೈಕಿ 15 ದಿನ ದೇಶದ ವಿವಿಧ ಭಾಗಗಳಲ್ಲಿ ಬ್ಯಾಂಕ್ ರಜಾ

IFFCO Trainee Recruitment 2022 : IFFCO ಲಿಮಿಟೆಡ್​ನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ: 70 ಸಾವಿರ ರೂ. ವೇತನ

Published On - 9:52 pm, Thu, 31 March 22