AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರಿವು ಸಾಲ ಯೋಜನೆ ಸೇರಿದಂತೆ ಕೃಷಿ ಪ್ರಶಸ್ತಿಗಳಿಗಾಗಿ ಅರ್ಜಿ ಆಹ್ವಾನ

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಆಸಕ್ತ ರೈತ, ರೈತ ಮಹಿಳೆ ಮತ್ತು ವಿಸ್ತರಣಾ ಕಾರ್ಯಕರ್ತರಿಂದ ವಿವಿಧ ಪ್ರಶಸ್ತಿಗಳಿಗಾಗಿ ಮತ್ತು ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯಡಿಯಲ್ಲಿ ನಿಗಮದ ಸಾಲ ಸೌಲಭ್ಯಗಳನ್ನು ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರಿವು ಸಾಲ ಯೋಜನೆ ಸೇರಿದಂತೆ ಕೃಷಿ ಪ್ರಶಸ್ತಿಗಳಿಗಾಗಿ ಅರ್ಜಿ ಆಹ್ವಾನ
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ
ಗಂಗಾಧರ​ ಬ. ಸಾಬೋಜಿ
|

Updated on: Jun 17, 2023 | 9:18 PM

Share

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು (University of Agricultural Sciences, Bangalore) ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಆಸಕ್ತ ರೈತ, ರೈತ ಮಹಿಳೆ ಮತ್ತು ವಿಸ್ತರಣಾ ಕಾರ್ಯಕರ್ತರಿಂದ ವಿವಿಧ ಪ್ರಶಸ್ತಿಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯ ಮಟ್ಟದ ಪ್ರಶಸ್ತಿಗಳು (ರಾಜ್ಯ ವ್ಯಾಪ್ತಿ): ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ರಾಜ್ಯ ಮಟ್ಟದ ಅತ್ಯುತ್ತಮ ರೈತ/ರೈತ ಮಹಿಳೆ ಪ್ರಶಸ್ತಿ ಹಾಗೂ ಡಾ. ಎಂ.ಹೆಚ್. ಮರಿಗೌಡ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ/ರೈತ ಮಹಿಳೆ ಪ್ರಶಸ್ತಿ ನೀಡಲಾಗುತ್ತಿದೆ.

ರಾಜ್ಯ ಮಟ್ಟದ ಪ್ರಶಸ್ತಿಗಳು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ಆಡಳಿತ ವ್ಯಾಪ್ತಿಯ 10 ಜಿಲ್ಲೆಗಳನ್ನು ಒಳಗೊಂಡಿದೆ. ಕೆನರಾ ಬ್ಯಾಂಕ್ ಪ್ರಯೋಜಿತ ಕ್ಯಾನ್ ಬ್ಯಾಂಕ್ ಅತ್ಯುತ್ತಮ ರೈತ ಮತ್ತು ರೈತ ಮಹಿಳೆ ಪ್ರಶಸ್ತಿ, ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ರೈತ/ರೈತಮಹಿಳೆ ಪ್ರಶಸ್ತಿ ಹಾಗೂ ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ.

ಜಿಲ್ಲಾ ಮಟ್ಟದ ಪ್ರಶಸ್ತಿಗಳು (ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ಆಡಳಿತ ವ್ಯಾಪ್ತಿಯ 10 ಜಿಲ್ಲೆಗಳು): ಜಿಲ್ಲಾ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ ಮತ್ತು ಜಿಲ್ಲಾ ಮಟ್ಟದ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ.

ಇದನ್ನೂ ಓದಿ: TS KGBV Recruitment 2023: 1,241 ಹುದ್ದೆಗಳಿಗೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

ತಾಲ್ಲೂಕು ಮಟ್ಟದ ಪ್ರಶಸ್ತಿಗಳು (ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ಆಡಳಿತ ವ್ಯಾಪ್ತಿಯ 61 ತಾಲ್ಲೂಕುಗಳು): ತಾಲ್ಲೂಕು ಮಟ್ಟದ ಅತ್ಯುತ್ತಮ ಯುವ ರೈತ ಪ್ರಶಸ್ತಿ ಮತ್ತು ತಾಲ್ಲೂಕು ಮಟ್ಟದ ಅತ್ಯುತ್ತಮ ಯುವ ರೈತ ಮಹಿಳೆ ಪ್ರಶಸ್ತಿ.

ಈ ಪ್ರಶಸ್ತಿಗಳನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಅಕ್ಟೋಬರ್ ತಿಂಗಳಲ್ಲಿ ಆಯೋಜಿಸಲಿರುವ ಕೃಷಿ ಮೇಳ-2023ರ ಸಂದರ್ಭದಲ್ಲಿ ನೀಡಲಿದೆ. ಈ ಸಂಬಂಧ ನಿಗದಿತ ಅರ್ಜಿ ನಮೂನೆಯು ಆಯಾ ಜಿಲ್ಲೆಗಳ ಜಂಟಿ ಕೃಷಿ ನಿರ್ದೇಶಕರವರ ಕಛೇರಿ, ವಿಸ್ತರಣಾ ನಿರ್ದೇಶಕರ ಕಛೇರಿ, ಜಿಕೆವಿಕೆ, ಬೆಂಗಳೂರು, ಕೃಷಿ ವಿಜ್ಞಾನ ಕೇಂದ್ರಗಳಾದ ಹಾಡೋನಹಳ್ಳಿ -ದೊಡ್ಡಬಳ್ಳಾಪುರ, ಚಂದುರಾಯನಹಳ್ಳಿ-ಮಾಗಡಿ, ಕಂದಲಿ-ಹಾಸನ, ಕೊನೇಹಳ್ಳಿ-ತಿಪಟೂರು, ವಿ.ಸಿ.ಫಾರಂ-ಮಂಡ್ಯ, ಕುರುಬೂರು ಫಾರಂ-ಚಿಂತಾಮಣಿ ಮತ್ತು ಹರದನಹಳ್ಳಿ-ಚಾಮರಾಜನಗರ, ವಿಸ್ತರಣಾ ಶಿಕ್ಷಣ ಘಟಕಗಳಾದ ನಾಗನಹಳ್ಳಿ-ಮೈಸೂರಿನಲ್ಲಿ ದೊರೆಯುತ್ತದೆ.

ಅರ್ಜಿ ನಮೂನೆಯು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಜಾಲತಾಣ www.uasbangalore.edu.in ನಲ್ಲಿ ಸಹ ಲಭ್ಯವಿದೆ. ಆಸಕ್ತರು ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ವಿವರಗಳಿಗೆ ವಿಸ್ತರಣಾ ನಿರ್ದೇಶಕರ ಕಛೇರಿ, ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಬೆಂಗಳೂರು-560 065 ಇವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ. 080-23330153, ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

‘ಅರಿವು’ ಸಾಲ ಯೋಜನೆಯಡಿ ಅರ್ಜಿ ಆಹ್ವಾನ

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಬೆಂಗಳೂರು ನಗರ ಕೇಂದ್ರೀಯ ವಿಭಾಗದಿಂದ 2023-24ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌಧ್ಧ, ಸಿಖ್, ಹಾಗೂ ಫಾರ್ಸಿ ಜನಾಂಗದವರಿಗೆ ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯಡಿಯಲ್ಲಿ ನಿಗಮದ ಸಾಲ ಸೌಲಭ್ಯಗಳನ್ನು ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಇದನ್ನೂ ಓದಿ: SBI RBO Recruitment 2023: 194 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ; ಹೆಚ್ಚಿನ ವಿವರಗಳನ್ನು ಇಲ್ಲಿ ಪರಿಶೀಲಿಸಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (KEA, Via/ CET/NEET) ಮುಖಾಂತರ ಎಂಬಿಬಿಎಸ್, ಬಿಡಿಎಸ್, ಆಯುಷ್, ಬ್ಯಾಷುಲರ್ ಆಫ್ ಆರ್ಚ್, ಇಂಜಿನಿಯರಿಂಗ್, ಬ್ಯಾಚುಲರ್ ಆಫ್ ಟೆಕ್ನಾಲಜಿ ಕೋರ್ಸ್, ಫಾರ್ಮಸಿ, ಅಗ್ರಿಕಲ್ಚರ್ ಸೈನ್ಸ್, ವೆಟರ್‍ನರಿ ಹಾಗೂ ಫಾರ್ಮಾ ಸೈನ್ಸ್ ವ್ಯಾಸಂಗಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ “ಅರಿವು” ಯೋಜನೆಯಡಿಯಲ್ಲಿ ಶೈಕ್ಷಣಿಕ ಸಾಲವನ್ನು ನೀಡಲಾಗುವುದು.

ನಿಗಮದ ವೆಬ್‍ಸೈಟ್ http://kmdconline.karnataka.gov.in/ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜುಲೈ 10 ಕೊನೆಯ ದಿನಾಂಕವಾಗಿದೆ.

ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಸಲ್ಲಿಸಿದ ಅರ್ಜಿಯೊಂದಿಗೆ ತಮ್ಮ ಎಲ್ಲಾ ದಾಖಲಾತಿಗಳನ್ನು ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಬೆಂಗಳೂರು ನಗರ ಕೇಂದ್ರಿಯ ಜಿಲ್ಲೆ ಕೊಠಡಿ ಸಂಖ್ಯೆ ಎಫ್ ಎಫ್ -29/37, 1ನೇ ಮಹಡಿ, ಹಮೀದ್ ಷಾ ಕಾಂಪ್ಲೆಕ್ಸ್, ಹಲಸೂರು ಗೇಟ್ ಪೊಲೀಸ್ ಠಾಣೆ ಹತ್ತಿರ, ಕಬ್ಬನ್‍ಪೇಟೆ ಮುಖ್ಯ ರಸ್ತೆ, ಬೆಂಗಳೂರು-560002 ಈ ಕಛೇರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-22114815 ಮತ್ತು ಹೆಲ್ಪ್‍ಲೈನ್ ಸಂಖ್ಯೆ: 827779990 ಗೆ ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಸಾರ್ವಜನಿಕರ ಪ್ರವೇಶ ನಿಷೇಧ

ಸರ್ಕಾರಿ ವಸ್ತು ಸಂಗ್ರಹಾಲಯ ಮತ್ತು ವೆಂಕಟಪ್ಪ ಚಿತ್ರಶಾಲೆಯಲ್ಲಿ ಸಂರಕ್ಷಣಾ ಕಾಮಗಾರಿ ಪ್ರಾರಂಭವಾಗಿರುವುದರಿಂದ ಸರ್ಕಾರಿ ವಸ್ತು ಸಂಗ್ರಹಾಲಯ ಮತ್ತು ವೆಂಕಟಪ್ಪ ಚಿತ್ರಶಾಲೆಯನ್ನು ಜೂನ್ 14ರಿಂದ ತಾತ್ಕಾಲಿಕವಾಗಿ ಸಾರ್ವಜನಿಕರಿಗೆ ಪ್ರವೇಶ ಹಾಗೂ ವಾಹನ ನಿಲುಗಡೆಗೆ ನಿಷೇಧಿಸಿದೆ. ಇದು  ಮುಂದಿನ ಆದೇಶದವರೆಗೂ ಜಾರಿಯಲ್ಲಿರಲಿದೆ ಎಂದು ವಸ್ತು ಸಂಗ್ರಹಾಲಯ ಮತ್ತು ವೆಂಕಟಪ್ಪ ಚಿತ್ರ ಶಾಲೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ