ಉಸ್ತುವಾರಿಗಳಿಗೆ ಕ್ಯಾರೇ ಎನ್ನದ ಬಿಕೆ ಹರಿಪ್ರಸಾದ್, ರಂಗಕ್ಕೆ ಇಳಿದ ಎಐಸಿಸಿ ಅಧ್ಯಕ್ಷ ಖರ್ಗೆ- ಸಿದ್ದರಾಮಯ್ಯ ವಿರುದ್ಧದ ವಾಗ್ದಾಳಿ ತಗ್ಗುತ್ತದಾ?

| Updated By: ಸಾಧು ಶ್ರೀನಾಥ್​

Updated on: Sep 11, 2023 | 12:09 PM

ರಾಜ್ಯ ಕಾಂಗ್ರೆಸ್​​ ನಾಯಕರ ವಿರುದ್ಧ ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಕೆ ಹರಿಪ್ರಸಾದ್ ನಿರಂತರವಾಗಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿರುವ ವಿಚಾರದಲ್ಲಿ ಹೈಕಮಾಂಡ್ ಮಧ್ಯಪ್ರವೇಶಿಸಿದೆ. ಹೈಕಮಾಂಡ್ ನಾಯಕರಿಂದ ಹರಿಪ್ರಸಾದ್ರನ್ನು ಸಮಾಧಾನಪಡಿಸುವ ಯತ್ನ ನಡೆದಿದೆ. ಸಿದ್ದರಾಮಯ್ಯ ವಿರುದ್ಧದ ವಾಗ್ದಾಳಿಗೆ ಸಂಬಂಧಿಸಿ ಮಲ್ಲಿಕಾರ್ಜುನ ಖರ್ಗೆಯವರು ನಿನ್ನೆ ಭಾನುವಾರ ಬಿಕೆ ಹರಿಪ್ರಸಾದ್ ಜೊತೆಗೆ ಮಾತುಕತೆ ನಡೆಸಿದ್ದಾರೆ.

ಉಸ್ತುವಾರಿಗಳಿಗೆ ಕ್ಯಾರೇ ಎನ್ನದ ಬಿಕೆ ಹರಿಪ್ರಸಾದ್, ರಂಗಕ್ಕೆ ಇಳಿದ ಎಐಸಿಸಿ ಅಧ್ಯಕ್ಷ ಖರ್ಗೆ- ಸಿದ್ದರಾಮಯ್ಯ ವಿರುದ್ಧದ ವಾಗ್ದಾಳಿ ತಗ್ಗುತ್ತದಾ?
ಉಸ್ತುವಾರಿಗಳಿಗೆ ಕ್ಯಾರೇ ಎನ್ನದ ಬಿಕೆ ಹರಿಪ್ರಸಾದ್, ರಂಗಕ್ಕೆ ಇಳಿದ ಎಐಸಿಸಿ ಅಧ್ಯಕ್ಷ ಖರ್ಗೆ
Follow us on

ಬೆಂಗಳೂರು, ಸೆಪ್ಟೆಂಬರ್ 11: ತಮ್ಮತ್ತ ಮತ್ತು ತಮ್ಮ ತಳ ಸಮುದಾಯದತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗಿಯೂ ನೋಡುತ್ತಿಲ್ಲ ಎಂದು ಮುನಿದಿರುವ ರಾಜ್ಯ ಕಾಂಗ್ರೆಸ್ (Karnataka congress)​​ ಹಿರಿಯ ನಾಯಕ ಬಿಕೆ ಹರಿಪ್ರಸಾದ್ (BK Hariprasad) ಅವರು ತಗ್ಗುವ ಮಾತೇ ಇಲ್ಲ ಎಂಬಂತೆ ರಾಜ್ಯ ಕಾಂಗ್ರೆಸ್​​ ಹಿರಿಯ ನಾಯಕರ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ. ಈ ಮಧ್ಯೆ ರಾಜ್ಯ ಕಾಂಗ್ರೆಸ್​​ ಉಸ್ತುವಾರಿ ನಾಯಕರುಗಳಿಗೂ ಕ್ಯಾರೇ ಅನ್ನುತ್ತಿಲ್ಲ. ಹಾಗಾಗಿ ಎಐಸಿಸಿ (AICC) ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರೇ ಖುದ್ದು ರಂಗಕ್ಕೆ ಇಳಿದಿದ್ದಾರೆ. ಇದೇ ವೇಳೆ, ಬಿ.ಕೆ ಹರಿಪ್ರಸಾದ್ ಹಿರಿಯ ನಾಯಕರಿದ್ದಾರೆ. ಎರಡ್ಮೂರು ತಿಂಗಳಿಂದ ಅವರು ಬೇಜಾರು ಮಾಡಿಕೊಂಡಿದ್ದಾರೆ. ಏನಾದ್ರು ಮಾತನಾಡೋದಿದ್ದರೆ ನೇರವಾಗಿ ಹೈಕಮಾಂಡ್ ನಾಯಕರ ಜೊತೆ ಮಾತನಾಡಿ, ತಮ್ಮ ಅಸಮಾಧಾನ ಹೇಳಿಕೊಳ್ಳಲಿ. ಅಂದಾಗ ಹರಿಪ್ರಸಾದ್ ವ್ಯಕ್ತಿತ್ವಕ್ಕೆ ಗೌರವ ಬರುತ್ತದೆ. ಹೀಗಾಗಿ ಹರಿಪ್ರಸಾದ ನೇರವಾಗಿ ಮಾತನಾಡಬೇಕು ಎಂದು ಕಲಬುರಗಿ ನಗರದಲ್ಲಿ ಶಾಸಕ ಬಸವರಾಜ್ ರಾಯರೆಡ್ಡಿ ಹೇಳಿದ್ದಾರೆ.

ಪಕ್ಷದ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಅವರು ರಾಜ್ಯ ಕಾಂಗ್ರೆಸ್​​ ನಾಯಕರ ವಿರುದ್ಧ ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಿರಂತರವಾಗಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿರುವ ವಿಚಾರದಲ್ಲಿ ಹೈಕಮಾಂಡ್ ಮಧ್ಯಪ್ರವೇಶಿಸಿದೆ.

ಹರಿಪ್ರಸಾದ್ ಗೆ ಟೈಮ್ ಪ್ಲೀಸ್​​ ಎಂದಿರುವ ಹೈಕಮಾಂಡ್ ನಾಯಕ ಖರ್ಗೆ:

ಹೈಕಮಾಂಡ್ ನಾಯಕರಿಂದ ಬಿಕೆ ಹರಿಪ್ರಸಾದ್ ರನ್ನು ಸಮಾಧಾನಪಡಿಸುವ ಯತ್ನ ನಡೆದಿದೆ. ಸಿದ್ದರಾಮಯ್ಯ ವಿರುದ್ಧದ ವಾಗ್ದಾಳಿಗೆ ಸಂಬಂಧಿಸಿ ಮಲ್ಲಿಕಾರ್ಜುನ ಖರ್ಗೆಯವರು ನಿನ್ನೆ ಭಾನುವಾರ ಬಿಕೆ ಹರಿಪ್ರಸಾದ್ ಜೊತೆಗೆ ಮಾತುಕತೆ ನಡೆಸಿದ್ದಾರೆ. ಸಮಸ್ಯೆ ಬಗೆಹರಿಸಲು ಸಮಯ ಕೊಡಿ. ನಿಮ್ಮ ಬೇಡಿಕೆಗಳನ್ನು ಸಮಯ ಬಂದಾಗ ಸರಿಪಡಿಸುತ್ತೇವೆ ಎಂದು ಹರಿಪ್ರಸಾದ್ ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಅದಕ್ಕೂ ಮೊದಲು ಬಿಕೆ ಹರಿಪ್ರಸಾದರನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕರುಗಳಾದ ರಣದೀಪ್ ಸಿಂಗ್ ಸುರ್ಜೆವಾಲಾ ಹಾಗೂ ಕೆಸಿ ವೇಣುಗೋಪಾಲ ಸಂಪರ್ಕ ಮಾಡಿದ್ದಾರೆ. ಆದರೆ, ಸುರ್ಜೆವಾಲಾ-ವೇಣುಗೋಪಾಲ್ ದೂರವಾಣಿ ಕರೆಗೆ ಬಿಕೆ ಹರಿಪ್ರಸಾದ್ ಸ್ಪಂದಿಸಿಲ್ಲ ಎಂಬುದು ಗಮನಾರ್ಹ. ಇಬ್ಬರು ನಾಯಕರಿಗೂ ಕೇರ್​​ ಮಾಡದ ಹಿನ್ನೆಲೆ ನೇರವಾಗಿ ಎಐಸಿಸಿ ಅಧ್ಯಕ್ಷರಿಂದಲೇ ಕರೆ ಹೋಗಿದೆ. ಹರಿ ಪ್ರಸಾದ್ ಅವರು ಮಲ್ಲಿಕಾರ್ಜುನ ಖರ್ಗೆ ಜೊತೆಗೆ ತಮ್ಮ ಅಸಮಾಧಾನದ ಸಂಪೂರ್ಣ ವಿವರ ಬಿಚ್ಚಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ