ಬೆಂಗಳೂರು ಮೊಬೈಲುಗಳ್ಳರ ಅರೆಸ್ಟ್: IME ನಂಬರ್ ಸಾಕ್ಷ್ಯವನ್ನೇ ನಾಶ ಮಾಡ್ತಿದಾರೆ! ಇನ್ನು ಮೊಬೈಲ್ ಟ್ರೇಸ್ ಮಾಡೋದು ಹೇಗೆ?
ಕಳ್ಳತನ ಆಗಿದ್ದ ಮೊಬೈಲ್ ಗಳನ್ನು ಕ್ಷಣಮಾತ್ರದಲ್ಲಿ ಸ್ವಿಚ್ ಆಫ್ ಮಾಡಿ ಸಿಮ್ ಕಾರ್ಡ್ ಬಿಸಾಕುತಿದ್ರು. ಬಳಿಕ ಐಎಂಇ ನಂಬರ್ ಬದಲಾಯಿಸುತ್ತಿದ್ರು.
ಬೆಂಗಳೂರು: ಬೆಂಗಳೂರಿನಲ್ಲಿ ಕದ್ದ ಮೊಬೈಲ್ಗಳನ್ನು ಟೆಕ್ನಾಲಜಿ ಬಳಸಿ ಸಾಕ್ಷಿನಾಶ ಮಾಡಿ ಮಾರಾಟ ಮಾಡ್ತಿದ್ದ ಆರೋಪಿಗಳನ್ನು ಅಶೋಕ್ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಜೀತ್ ಅಲಿಯಾಸ್ ಬ್ರೂಟ್, ಗೋಪಿ ಮತ್ತು ಶಾಹೀಲ್ ಬಂಧಿತ ಆರೋಪಿಗಳು.
ಅಜೀತ್ ಮತ್ತು ಗೋಪಿ ಮೊಬೈಲ್ ಸ್ನಾಚಿಂಗ್ ಮಾಡ್ತಿದ್ರು. ಬಳಿಕ ಮೊಬೈಲ್ ಅನ್ನು ಶಾಹೀಲ್ಗೆ ಕೊಡ್ತಿದ್ರು. ಶಾಹೀಲ್ ಸಾಫ್ಟ್‌ವೇರ್ ಒಂದನ್ನು ಬಳಸಿಕೊಂಡು ಐಎಂಇ ನಂಬರ್ ಚೇಂಜ್ ಮಾಡ್ತಿದ್ದ. ಕಳ್ಳತನ ಆಗಿದ್ದ ಮೊಬೈಲ್ ಗಳನ್ನು ಕ್ಷಣಮಾತ್ರದಲ್ಲಿ ಸ್ವಿಚ್ ಆಫ್ ಮಾಡಿ ಸಿಮ್ ಕಾರ್ಡ್ ಬಿಸಾಕುತಿದ್ರು. ಬಳಿಕ ಐಎಂಇ ನಂಬರ್ ಬದಲಾಯಿಸುತ್ತಿದ್ರು. ಆದ್ರೆ ಅತ್ತ ದೂರು ದಾಖಲಿಸಿಕೊಳ್ಳುತ್ತಿದ್ದ ಪೊಲೀಸರು ಐಎಂಇ ನಂಬರ್ ಮೂಲಕವೇ ಕದ್ದ ಮೊಬೈಲ್ ಟ್ರಾಕ್ ಮಾಡ್ತಿದ್ರು. ಇಲ್ಲಿ ಐಎಂಇ ನಂಬರ್ ಚೇಂಜ್ ಮಾಡಲಾಗುತ್ತಿತ್ತು. ಹೀಗಾಗಿ ಪೊಲೀಸರಿಗೆ ಐಎಂಇ ನಂಬರ್ ಮೂಲಕ ಮೊಬೈಲ್ ಟ್ರಾಕ್ ಮಾಡಲು ಸಾಧ್ಯ ಅಗುತಿರಲಿಲ್ಲ. ಇದರಿಂದ ಕಳ್ಳರು ಸೇಫ್ ಆಗುತ್ತಿದ್ದರು.
ಐಎಂಇ ನಂಬರ್ ಬದಲಾವಣೆ ಮಾಡಿದ ಬಳಿಕ ಮೊಬೈಲ್ ಗಳನ್ನು ಮಾರಾಟ ಮಾಡ್ತಿದ್ರು. ಬಂಧಿತ ಅರೋಪಿಗಳಿಂದ ಕದ್ದ ಮೊಬೈಲ್ ಹಾಗು ಐಎಂಇ ನಂಬರ್ ಬದಲಾವಣೆ ಮಾಡಲು ಬಳಸುತಿದ್ದ ಕಂಪ್ಯೂಟರ್ ವಶಕ್ಕೆ ಪಡೆಯಲಾಗಿದೆ. ಅಶೋಕ್ ನಗರ ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: Crime News: ಗಂಡನೊಂದಿಗೆ ಜಗಳವಾಡಿ ಹೆತ್ತ ಮಗನನ್ನೇ ಕಾಲುವೆಗೆ ಎಸೆದ ಮಹಿಳೆ
ಆಟೋ, ಬೈಕ್ ನಡುವೆ ಡಿಕ್ಕಿ, ನಾಲ್ವರಿಗೆ ಗಂಭೀರ ಗಾಯ
ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಭರಮಸಮುದ್ರ ಗ್ರಾಮದ ಬಳಿ ಆಟೋ, ಬೈಕ್ ನಡುವೆ ಡಿಕ್ಕಿ ಸಂಭವಿಸಿ ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ಚಿತ್ರದುರ್ಗ ತಾಲೂಕಿನ ಹುಲ್ಕೆಕೆರೆ ಗ್ರಾಮದ ಭರತ್(25), ಮುದ್ದಾಪುರದ ಮಧು(26) ಕಲ್ಲೇದೇಪುರದ ಕಲ್ಲೇಶ್(32), ಕೂಡ್ಲಿಗಿ ತಾಲೂಕಿನ ಲೋಕಿಕೆರೆಯ ಕೊಲ್ಲಪ್ಪ(42) ಸ್ಥಿತಿ ಗಂಭೀರವಾಗಿದೆ. ಮೂವರು ಗಾಯಾಳುಗಳಿಗೆ ಜಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಓರ್ವ ಗಾಯಾಳು ದಾವಣಗೆರೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ಯುವಕ ಅನುಮಾನಾಸ್ಪದ ಸಾವು
ಸುಬ್ರಮಣ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವಕ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾನೆ. ಹೆಗ್ಗನಹಳ್ಳಿ ನಿವಾಸಿ ಪವನ್ ಮೃತ ಯುವಕ. ನಿನ್ನೆ ಮನೆಯಿಂದ ಹೊರಗೆ ಬಂದಿದ್ದ ಪವನ್ ರಾತ್ರಿ ಸುಮಾರು ಹನ್ನೆರಡು ಗಂಟೆ ಸಮಯದಲ್ಲಿ ಸಾವನಪ್ಪಿದ್ದು ಮೃತ ದೇಹ ರಸ್ತೆ ಬದಿ ಸಿಕ್ಕಿದೆ. ಪವನ್ ಒಂದು ಕಾಲು ಮುರಿದಿದೆ. ಪವರ್ ಮೃತ ದೇಹ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಟ್ಟಡದಿಂದ ಬಿದ್ದಿರಬಹುದು, ಯಾವುದಾದರೂ ವಾಹನ ಡಿಕ್ಕಿಯಾಗಿರಬಹುದು ಅಥವಾ ಯಾರೊ ಹಲ್ಲೆ ಮಾಡಿ ರಸ್ತೆ ಬದಿ ಬಿಸಾಕಿ ಹೋಗಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಸುಬ್ರಮಣ್ಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅನುಮಾನಾಸ್ಪದ ಸಾವು ಎಂದು ಸುಬ್ರಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:25 am, Thu, 29 December 22