ಹಲ್ಲೆ ಹಾಗೂ ಅವಾಚ್ಯ ಪದಗಳಿಂದ ನಿಂದನೆ ಆರೋಪ: ಬಿಜೆಪಿ ಮುಖಂಡ ಕೆ.ಎನ್.ಚಕ್ರಪಾಣಿ ವಿರುದ್ಧ FIR ದಾಖಲು
12 ಜನರ ಗ್ಯಾಂಗ್ನೊಂದಿಗೆ ಬಂದು ಕೆ.ಎನ್.ಚಕ್ರಪಾಣಿ ಹಲ್ಲೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ. ಕೊಡಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ಎದು, ಎಫ್ಐಆರ್ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಬೆಂಗಳೂರು: ಹಲ್ಲೆ ಮತ್ತು ಅವಾಚ್ಯ ಶಬ್ಧಗಳಿಂದ ನಿಂದನೆ ಆರೋಪ (Accused) ದಡಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರೊ ಪ್ರಭಾವಿ ಬಿಜೆಪಿ ಮುಖಂಡ ಕೆ.ಎನ್ ಚಕ್ರಪಾಣಿ ವಿರುದ್ಧ ಎಫ್ಐಆರ್ (FIR) ದಾಖಲು ಮಾಡಲಾಗಿದೆ. ಶ್ರೀಧರ್ ಮೂರ್ತಿ ಎಂಬುವರಿಂದ ದೂರು ದಾಖಲು ಮಾಡಿದ್ದು, ಕೊಡಿಗೆಹಳ್ಳಿ ವಿರೂಪಾಕ್ಷಪುರದ ಚಕ್ರಪಾಣಿ ಮನೆ ಎದುರಲ್ಲೆ ಶ್ರೀಧರ್ ಮೂರ್ತಿ ಅಪಾರ್ಟ್ಮೆಂಟ್ ಇದೆ. ಶ್ರೀಧರ್ ಮೂರ್ತಿ ಅಪಾರ್ಟ್ಮೆಂಟ್ ಗೇಟ್ ರಿಪೇರಿ ಮಾಡಿಸುತ್ತಿದ್ದು, ಆಗ 12 ಜನರ ಗ್ಯಾಂಗ್ನೊಂದಿಗೆ ಚಕ್ರಪಾಣಿ ಎಂಟ್ರಿಯಾಗಿದ್ದಾರೆ. ಇಲ್ಲಿ ಕೆಲಸ ಮಾಡುವಂತಿಲ್ಲ ನಿಲ್ಲಿಸಬೇಕೆಂದು ಅವಾಜ್ ಹಾಕುವುದರೊಂದಿಗೆ ಶ್ರೀಧರ್ ಮೂರ್ತಿ ಮೇಲೆ ಹಲ್ಲೆ ಚಕ್ರಪಾಣಿ ನಡೆಸಿದ್ದಾರೆ ಎನ್ನಲಾಗುತ್ತಿದೆ. ಮುನಿರಾಜು ಸೇರಿ 12 ಜನರನ್ನ ಕರೆತಂದಿದ್ದ ಚಕ್ರಪಾಣಿ, ನಮ್ಮ ಮನೆ ಮುಂದೆ ನೀನು ಇರಬಾರದು. ಇದ್ರೆ ನಿನ್ನನ್ನು ಸುಮ್ಮನೆ ಬಿಡಲ್ಲ ಎಂದು ಜೀವ ಬೆದರಿಕೆ ಆರೋಪ ಮಾಡಲಾಗಿದೆ. ಕುಡಿದು ಬಂದಿದ್ದೀಯಾ ನಾಳೆ ಮಾತಾಡೋಣ ಎಂದು ಹೇಳಿದರು ಚಕ್ರಪಾಣಿ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಸೆಕ್ಷನ್ 143, 448, 323, 504, 506 ರಡಿ ಕೇಸ್ ದಾಖಲು ಮಾಡಲಾಗಿದೆ. ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: Amarnath Yatra 2022: ಇಂದಿನಿಂದ ಅಮರನಾಥ ಯಾತ್ರೆ ಆರಂಭ; ಹಿಮಾಲಯದಲ್ಲಿ ಬಿಗಿ ಭದ್ರತೆ