ಬೇಡ ಜಂಗಮ ಸಮುದಾಯದಿಂದ ಬೆಂಗಳೂರು ಚಲೋ: ಪೊಲೀಸರಿಗೆ ಎಚ್ಚರಿಕೆ ನೀಡಿದ ಸಾಮಾಜಿಕ ಹೋರಾಟಗಾರ ಬಿ.ಡಿ.ಹಿರೇಮಠ್
ಬೇಡ ಜಂಗಮರ ಬೆಂಗಳೂರು ಚಲೋಗೆ ತಡೆ ಹಿನ್ನೆಲೆ ಶಿರಾದ ಕಳ್ಳಂಬೆಳ್ಳದಿಂದ ಬೇಡ ಜಂಗಮರು ಪಾದಯಾತ್ರೆ ಹೊರಟಿದ್ದಾರೆ. ಕಳ್ಳಂಬೆಳ್ಳದ ಕಂಟ್ರಿ ಕ್ಲಬ್ನಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ಕೂಡಿ ಹಾಕಿದ್ದಾರೆ.
ಬೆಂಗಳೂರು: ಬೇಡ ಜಂಗಮ ಸಮುದಾಯದಿಂದ ಬೆಂಗಳೂರು ಚಲೋ (Bengaluru Chalo) ಹಿನ್ನೆಲೆ ಸಮಾವೇಶಕ್ಕೆ ಬರುತ್ತಿದ್ದ ವಾಹನಗಳನ್ನ ಪೊಲೀಸರು ತಡೆಯುತ್ತಿದ್ದಾರೆ. ಬೇರೆ ಬೇರೆ ಜಿಲ್ಲೆಗಳಲ್ಲಿ ನಮ್ಮ ಸಮುದಾಯದವರನ್ನು ತಡೆದಿದ್ದಾರೆ. ಅವರನ್ನು ಬಿಡಬೇಕು ಇಲ್ಲದಿದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪೊಲೀಸರಿಗೆ ಸಾಮಾಜಿಕ ಹೋರಾಟಗಾರ ಬಿ.ಡಿ.ಹಿರೇಮಠ್ ಎಚ್ಚರಿಕೆ ನೀಡಿದರು. ರಾಜ್ಯ ಮಟ್ಟದ ಬೇಡ ಜಂಗಮ ಜನಾಂಗದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸತ್ಯ ಪ್ರತಿಪಾದನ ಸತ್ಯಾಗ್ರಹ ನಡೆಯುತ್ತಿದ್ದು, ಈಗಾಗ್ಲೇ ಪರಿಶಿಷ್ಟ ಪಂಗಡದಲ್ಲಿರು ಜಂಗಮರೆ ಬೇರೆ, ಬೇಡ ಜಂಗಮರೆ ಬೇರೆ ಎನ್ನುವ ವಾದವನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಸದ್ಯ ಪರಿಶಿಷ್ಟ ಜಾತಿಯಲ್ಲಿ ಸವಲತ್ತುಗಳನ್ನು ಬೇಡ ಜಂಗಮರು ಪಡೆಯುತ್ತಿದ್ದು, ಕೆಲ ರಾಜಕಾರಣಿಗಳ ಒತ್ತಡದಿಂದ ಬೇಡ ಜಂಗಮರ ದಾಖಲಾತಿಗಳನ್ನು ಪರಿಶಿಷ್ಟ ಜಾತಿಯ ಸವಲತ್ತುಗಳಿಗೆ ಅಧಿಕಾರಿಗಳು ತಿರಸ್ಕರಿಸುತ್ತಿದ್ದರು.
ಪರಿಶಿಷ್ಟ ಪಂಗಡದಲ್ಲಿರುವ ವೀರಶೈವ ಲಿಂಗಾಯತ ಉಪ ಜಾತಿಯಾಗಿ ಬೇಡ ಜಂಗಮರು ಸರ್ಕಾರದ ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಆದರೆ ನಮ್ಮ ಜನಾಂಗವನ್ನು ಪರಿಶಿಷ್ಟ ಜಾತಿಯಿಂದ ಕೈ ಬಿಡುವ ಹುನ್ನಾರ ನಡೆದಿದೆ. ಇದನ್ನು ವಿರೋಧಿಸಿ ನಾವು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದೇವೆ. ಶಾಂತಿಯುತ್ತ ಸತ್ಯಾಗ್ರಹಕ್ಕಾಗಿ ಆಗಮಿಸುತ್ತಿದ್ದ ನಮ್ಮವರನ್ನು ತಡೆಯಲಾಗಿದೆ. ತಕ್ಷಣ ಅವರನ್ನು ಬಿಡುಗಡೆಗೊಳಿಸ ಬೇಕು ಎಂದು ಬಿ.ಡಿ ಹಿರೇಮಠ್ ಸಾಮಾಜಿಕ ಹೋರಾಟಗಾರ ಆಗ್ರಹಿಸಿದರು.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಯಿಂದ ಬಿ.ಡಿ ಹೀರೆಮಠ್ಗೆ ಕರೆ ಮಾಡಿದ್ದು, ಕಮೀಷನರ್ ಜೊತೆಗೆ ಪೋನ್ನಲ್ಲಿ ಮಾತಾಡಲ್ಲ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು. ಕಮೀಷನರ್ ಕಾಲ್ ಮಾಡಿದ್ದಾರೆ ಎಂದು ಪೋನ್ ಕೊಟ್ಟ ಉಪ್ಪಾರ್ ಪೇಟೆ ಇನ್ಸ್ಪೆಕ್ಟರ್ ಎಸ್.ಹೆಚ್ ವಸಂತ್, ತಡೆದಿರೋ ನಿಮ್ಮ ಎಲ್ಲಾ ವಾಹನಗಳನ್ನು ಬಿಡುತ್ತೇವೆ. ನೀವು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ಬೆಂಗಳೂರು ಕಮೀಷನರ್ ಮನವಿ ಮಾಡಿದರು.
ಶಿರಾದ ಕಳ್ಳಂಬೆಳ್ಳದಿಂದ ಬೇಡ ಜಂಗಮರು ಪಾದಯಾತ್ರೆ
ಬೇಡ ಜಂಗಮರ ಬೆಂಗಳೂರು ಚಲೋಗೆ ತಡೆ ಹಿನ್ನೆಲೆ ಶಿರಾದ ಕಳ್ಳಂಬೆಳ್ಳದಿಂದ ಬೇಡ ಜಂಗಮರು ಪಾದಯಾತ್ರೆ ಹೊರಟಿದ್ದಾರೆ. ಕಳ್ಳಂಬೆಳ್ಳದ ಕಂಟ್ರಿ ಕ್ಲಬ್ನಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ಕೂಡಿ ಹಾಕಿದ್ದು, ಪೊಲೀಸರನ್ನು ಧಿಕ್ಕರಿಸಿ ಪ್ರತಿಭಟನಾಕಾರರು ಪಾದಯಾತ್ರೆ ಹೊರಟಿದ್ದಾರೆ. ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬೇಡ ಜಂಗಮ ಸಮುದಾಯದವರಿಂದ ಪಾದಯಾತ್ರೆ ನಡೆಯುತ್ತಿದೆ.
Published On - 12:21 pm, Thu, 30 June 22